Thursday, September 1, 2011

ಕಹಳೆ

ಆತ್ಮಿಯ ಸ್ನೇಹಿತರೆ,
ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಗೌರಿ ಹಾಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಸಾಮಾನ್ಯ, ಯಾವುದೇ ವಿಷಯವಾಗಿ ನನಗೆ ಅನುಮಾನ ಅಥವಾ ಪ್ರಶ್ನೆಗಳು ಇದ್ದರೆ ಅವುಗಳನ್ನು ಪರಿಹರಿಸಿಕೊಳ್ಳುವ ನನ್ನ ಪ್ರಯತ್ನವು Google ನಿಂದಲೇ ಶುರುವಾಗುತ್ತದೆ. ಇದುವರೆಗಿನ ನನ್ನ ಅನುಭವದಲ್ಲಿ ವಿಷಯವಾರು ಮಾಹಿತಿಗಳು ಕನ್ನಡ ಭಾಷೆಯಲ್ಲಿ ಹೆಚ್ಚಾಗಿ ಲಭ್ಯವಿಲ್ಲ. ಅಂತರ್ಜಾಲದ ಅಗಾಧತೆಯನ್ನು ಪರಿಗಣಿಸಿ ಹೇಳುವುದಾದರೆ, ಕನ್ನಡದಲ್ಲಿ ಲಭ್ಯವಿರುವ ಮಾಹಿತಿ ಅತ್ಯಂತ ವಿರಳ ಎಂದರೆ ತಪ್ಪಾಗಲಾರದು. ಕನ್ನಡ ಭಾಷೆಯ ವಿಷಯ ವ್ಯಾಖ್ಯಾನ ಮತ್ತು ಮಂಡನೆಗಳ ಬೆನ್ನು ಹತ್ತಿ ಹೊರಟ ನಾನು ಅದೆಷ್ಟೋ ಬಾರಿ Google ಅನ್ನು ಶಪಿಸಿದ್ದುಂಟು.

ಅನ್ಯ ಭಾಷೆಗಳಿಗೆ ಹೋಲಿಸಿಕೊಂಡರೆ ನಮ್ಮ ಕನ್ನಡ ಭಾಷೆಯ ಇತಿಹಾಸ, ಬೆಳವಣಿಗೆ ಹಾಗೂ ವಿಸ್ತಾರ ಕಡಿಮೆಯೇನಿಲ್ಲ. ಆದರೂ ಸಹ ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಸಾಲದೇನೋ ಎಂಬ ಭ್ರಮೆ ನನ್ನಲ್ಲಿ ಮೂಡುತ್ತಿದೆ. ರಾಜ್ಯ ಸರ್ಕಾರದ ಕನ್ನಡ ಗಣಕ ಪರಿಷತ್ತು ಹೊರತಂದ Nudi ತಂತ್ರಾಂಶವು ಗಣಕ ಯಂತ್ರದಲ್ಲಿ ಕನ್ನಡ ಭಾಷೆಯನ್ನು ಬೆರಳಚ್ಚಿಸುವ ಸುಲಭ ಸಧನವಾಗಿದ್ದು ಈಗ ಇತಿಹಾಸ. ಮುಂದೆ Baraha ಪರಿಕರವೂ ಸಹ ಜನಸಾಮಾನ್ಯರಲ್ಲಿ ಅತ್ಯಂತ ಚಿರಪರಿಚಿತವಾಯಿತು.

ತಂತ್ರಜ್ಞಾನ ಬೆಳೆದಂತೆ, Nudi ಹಾಗೂ Baraha ದಂತಹ ಸಾಧನಗಳೂ ಬೆಳೆದವಾದರೂ ಅಂತರ್ಜಾಲದ ಮಹಾ ಸ್ಫೋಟಕ್ಕೆ ಸಾಟಿಯಾಗಲಿಲ್ಲ. ಇಂಥಹ ಸಮಯದಲ್ಲಿ ಕನ್ನಡಿಗರಿಗೆ ವರವಾಗಿ ಬಂದದ್ದು Google Transliterate. ಇಂದು, ಈ ತಂತ್ರಾಂಶದ ಸಹಾಯದಿಂದ ನಾವು ಮಾತನಾಡಿದಷ್ಟೇ ಸುಲಭವಾಗಿ ಕನ್ನಡ ಭಾಷಾಕ್ಷರಗಳನ್ನು ಗಣಕ ಯಂತ್ರದ ಮೂಲಕ ಅಂತರ್ಜಾಲದಲ್ಲಿ ಮೂಡಿಸಲು ಸಾಧ್ಯವಾಗಿದೆ. ಇದರ ಸಂಪೂರ್ಣ ಲಾಭವನ್ನು ನಾವೆಲ್ಲರೂ ಪಡೆದುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸುವುದು ಇಂದು ನಮ್ಮ-ನಿಮ್ಮೆಲ್ಲರ ಮುಂದಿರುವ ಸವಾಲು.

ಈ ಸವಾಲನ್ನು ಸ್ವಿಕರಿಸಿ, ಮುಂಬರುವ ಎಲ್ಲಾ ಕನ್ನಡ ರಾಜ್ಯೋತ್ಸವಗಳನ್ನು ನಾವೆಲ್ಲರೂ ಕೂಡಿ ವಿಭಿನ್ನ ರೀತಿಯಲ್ಲಿ ಆಚರಿಸುವ ಉದ್ದೇಶದೊಂದಿಗೆ 'ಕಹಳೆ' ಎಂಬ ನಾಮಾಂಕಿತದಲ್ಲಿ ಅಂತರ್ಜಾಲ ತಾಣ (www.kahale.gen.in) ವೊಂದನ್ನು ಸಿಧ್ಧಪಡಿಸಿದ್ದೇವೆ. ನವೆಂಬರ್ ಮಾಹೆಯ ಪ್ರತಿಯೊಂದು ದಿನವೂ ಇಲ್ಲಿ ವಿವಿಧ ಬರಹಗಾರರ ಹೊಸ ಕನ್ನಡ ಲೇಖನವೊಂದನ್ನು ಬಿತ್ತರಿಸುವ ಆಶಯ ಹೊಂದಲಾಗಿದೆ. ಹೀಗೆ ಆದಲ್ಲಿ, ಅಪಾರವಾದ ಕನ್ನಡ ಭಾಷಾಸಂಪತ್ತು ಅಂತರ್ಜಾಲದಲ್ಲಿ ಸಧ್ಯದಲ್ಲೇ ಲಭ್ಯವಾಗುವ ಸಾಧ್ಯತೆಗಳಿರುತ್ತವೆ.

ಆದ್ದರಿಂದ, ಈ ಮೂಲಕ ನಿಮ್ಮಲ್ಲಿ ನನ್ನ ಮನವಿ ಇಷ್ಟೇ - ದಯವಿಟ್ಟು ನಮ್ಮ ಈ ಪುಟ್ಟ ಪ್ರಯತ್ನಕ್ಕೆ ಸಂಪೂರ್ಣವಾಗಿ ಬೆಂಬಲಿಸಿ. ನೀವು ಮಾತ್ರವಲ್ಲ, ನಿಮಗೆ ತಿಳಿದಿರುವ ಎಲ್ಲಾ ಕನ್ನಡಿಗರನ್ನೂ ಇದರಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿ, ಕನ್ನಡ ಕಹಳೆಯು ಯಶಸ್ವಿಯಾಗಿ ಮೊಳಗುವಂತೆ ಮಾಡಿ.

ಗಣೇಶ ಹಬ್ಬದ ಈ ಶುಭದಿನದಂದು, ವಿಘ್ನನಿವಾರಕನ ಆಶೀರ್ವಾದಗಳೊಂದಿಗೆ ಹಾಗೂ ನಿಮ್ಮೆಲ್ಲರ ಪ್ರೀತಿಪೂರ್ವಕ ಮತ್ತು ಉತ್ಸಾಹದಾಯಕ ಪ್ರೋತ್ಸಾಹದ ನಿರೀಕ್ಷೆಯೊಂದಿಗೆ ಕಹಳೆಯನ್ನು ಕನ್ನಡಿಗರಿಗೆ ಸಮರ್ಪಿಸಿದ್ದೇವೆ; ನಾವೆಲ್ಲರೂ ಇದನ್ನು ಉಳಿಸಿ ಬೆಳೆಸೋಣ.

13 comments:

 1. ನಿಮಗೆ ನಮ್ಮ ಸಂಪೂರ್ಣ ಸಹಕಾರವಿದೆ. ಸಾಧ್ಯವಾದಷ್ಟೂ ಇದನ್ನು ಪಸರಿಸಲು ಪ್ರಯತ್ನಿಸುತ್ತೇನೆ. :-) ಕನ್ನಡ ಕಹಳೆ ಎಲ್ಲೆಡೆ ಮೊಳಗಲಿ.

  ReplyDelete
 2. ಧನ್ಯವಾದ ರಾಜು. ನಿಮ್ಮ ಸಹಕಾರ ಹೀಗೆಯೇ ಮುಂದುವರೆಯಲಿ :o)

  ReplyDelete
 3. Hey Prashanth!

  Awesome work, as usual! I'm all set to support and spread the message! :-)

  Keep up the excellent work!

  ReplyDelete
 4. Divya, am really pleased with your unconditional support; we need more of those. Thank you so much for joing us :o)

  ReplyDelete
 5. Just noticed.. Kahale.gen.in site has been blocked in my office. :(

  ReplyDelete
 6. Raju, that is a good thing.. at least to see your System Admins doing their job promptly! :o)

  ReplyDelete
 7. Knock Knock where are you sir???
  No more posts from long time!!!

  Come back come back Prashanth!!!

  ReplyDelete
 8. Ramya, thanks so much for visiting and reminding me. Life is too hectic, especially at work. No holidays, no weekly offs nothing.

  Will come back soon :o)

  ReplyDelete
 9. ಬಹಳ ಉತ್ತಮವಾದ ಒಂದು ಪ್ರಯತ್ನಕ್ಕೆ ನಮ್ಮ ಶುಭ ಹಾರೈಕೆಗಳು!!
  ಕಂಡಿತ ನನ್ನ ಸ್ನೇಹಿತರಿಗೆಲ್ಲ ಇದನ್ನು ತಿಳಿಸುತ್ತೇನೆ. ಕಹಳೆಯ ಸದ್ದು ಲೋಕಕ್ಕೆಲ್ಲ ಕೇಳಲಿ ಎಂದು ಆಶಿಸೋಣ!!

  ReplyDelete
 10. ಧನ್ಯವಾದಗಳು ಸರ್. ನಿಮ್ಮೆಲ್ಲರ ಸಹಕಾರವೇ ನಮಗೆ ಪ್ರೋತ್ಸಾಹ. ನಿಮ್ಮ ಲೇಖನಕ್ಕಾಗಿ ಇದಿರುನೋಡುತ್ತಿದ್ದೇವೆ..

  ReplyDelete
 11. This comment has been removed by the author.

  ReplyDelete
 12. ಇಂತಹ ಪರಿಸ್ಥಿತಿಯನ್ನು ನಾನು ಎದುರಿಸಿದ್ದೇನೆ ಪ್ರಶಾಂತ. ಖಂಡಿತ ನಾನು ಕಹಳೆಯ ಭಾಗವಾಗಲು ಇಚ್ಚಿಸುತ್ತೇನೆ. ನಮ್ಮ ನಾಡು ನಮ್ಮ ಸಂಸ್ಕೃತಿ ಬಗ್ಗೆ ಬಹಳ ವಿಚಾರಗಳು ಅಧ್ಯಯನ ಮಾಡಿದ್ದೇನೆ. ಅದನ್ನೆಲ್ಲ ಒಂದೊಂದಾಗಿ ಲೇಖನ ರೂಪಕ್ಕೆ ತರುತ್ತೇನೆ.
  ಕನ್ನಡದ ಕಹಳೆಯನ್ನು ಗಟ್ಟಿಯಾಗಿ ಊದಬೇಕು. ಇದರ ಧ್ವನಿ ದೂರ ದೂರಕ್ಕೂ ಕೇಳಬೇಕು.
  ನನ್ನ ಕಚೇರಿಯಲ್ಲಿ ಕಹಳೆಯನ್ನು ಒಳಗೆ ಬರೋಕ್ಕೆ ಬಿಡದೆ ತಡೆದಿದ್ದಾರೆ.

  ReplyDelete
 13. ಸಹನಾ ಅವರೇ, ನಿಮ್ಮ ಸಹಕಾರಕ್ಕೆ ನಾವು ಚಿರಋಣಿ. ದಯವಿಟ್ಟು ನಿಮ್ಮ ಲೇಖನವನ್ನು ಇಂದೇ ನಮಗೆ ಕಳುಹಿಸಿಕೊಡಿ :o)

  ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!