Showing posts with label ಕಲಿಕೆ : Learning. Show all posts
Showing posts with label ಕಲಿಕೆ : Learning. Show all posts

Friday, January 19, 2018

ಬೆಳಗು - ಬೆರಗು

2014 ರ ಏಪ್ರಿಲ್ ತಿಂಗಳ ನಂತರ ಇಲ್ಲಿನ ನನ್ನ ಬರವಣಿಗೆಗೆ ಅಲ್ಪ(?) ವಿರಾಮ ದೊರೆತಿರುವುದರ ಅರಿವಿದ್ದರೂ ಸಹ ಅದು ನಾಲ್ಕು ವರ್ಷಗಳಷ್ಟು ಸುದೀರ್ಘವಾಗಿದೆ ಎಂಬುದರ ಪರಿವೆಯೇ ಇರಲಿಲ್ಲ! ದಿನಗಳು ತ್ವರಿತವಾಗಿ ಕಳೆದುಹೋಗುತ್ತಿವೆಯೋ, ಅಥವಾ ಜೀವನವೆಂಬ ಕತ್ತಲೆ-ಬೆಳಕಿನ ಆಟದ ಕೈಗೊಂಬೆಯಾಗಿ ನಾನೇ ಕಳೆದುಹೋಗುತ್ತಿದ್ದೇನೋ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಬಹುದಿನಗಳ ನಂತರ ಇಂದು ನನ್ನನ್ನು ಭೇಟಿಮಾಡಿದ ಹಿರಿಯರೊಬ್ಬರ "ಏನು, ಕೂದ್ಲಿಗೆ ಡೈ ಹಾಕಿದ್ದೀರಾ?" ಪ್ರಶ್ನೆಗೆ ನಗುವೇ ಉತ್ತರವಾದಾಗ "ಏಜ್ ಫ್ಯಾಕ್ಟರ್.." ಎನ್ನುತ್ತಾ ಮುಗುಳ್ನಕ್ಕರು. ಆ ಮುಗುಳ್ನಗೆಯಲ್ಲಿ ವಿಶಾಲವಾದ ಜೀವನಾನುಭವದ ದಿವ್ಯದರ್ಶನವಾಯಿತು; ನಾನೂ ಮುಗುಳ್ನಕ್ಕೆ..

ಕಳೆದೆರಡು ದಿನಗಳ ಹಿಂದೆ, ....... (ಅವರನ್ನು ಏನೆಂದು ಗುರುತಿಸುವುದು? ಹೆಸರು ಹೇಳಲು ವಯಸ್ಸಿನಲ್ಲಿ ನಾನು ಹಿರಿಯನಲ್ಲ; ಸ್ನೇಹಿತರೆನ್ನಲು ಸಮವಯಸ್ಕನಲ್ಲ; ಸಹೋದ್ಯೋಗಿ ಎನ್ನಲು ಮನಸ್ಸು ಒಪ್ಪುತ್ತಿಲ್ಲ; ಸರಿ, ಹಿಗೆನ್ನೋಣ.....) ಕಳೆದೆರಡು ದಿನಗಳ ಹಿಂದೆ, ನನ್ನ ಮಾರ್ಗದರ್ಶಕರೊಬ್ಬರು 'ಬೆಳಗು' ಎಂಬ ಪದದ ಅರ್ಥವನ್ನು ಅರಸುತ್ತಾ ನನಗೆ ಕಿರುಸಂದೇಶ ಕಳುಹಿಸಿದ್ದರು. ತತ್ಕ್ಷಣಕ್ಕೆ ಏನೂ ಹೊಳೆಯದಿದ್ದಾಗ, "ಯಾವುದೇ ಪದದ ಅರ್ಥವು ಗ್ರಹಿಸುವವರನ್ನವಲಂಬಿಸಿ ವಿಸ್ತಾರವಾಗಿ ರೂಪುಗೊಳ್ಳುತ್ತದೆ. ಶಬ್ಧಕೋಶದಲ್ಲಿರುವ ಅರ್ಥವನ್ನು ನಂತರ ತಿಳಿಸುತ್ತೇನೆ" ಎಂದಷ್ಟೇ ಉತ್ತರಿಸಿದೆ. 'ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು' ಅಲ್ಲವೇ?

ನನಗೆ ಕಳುಹಿಸಲಾಗಿದ್ದ ಕಿರುಸಂದೇಶದಲ್ಲಿ 'ಬೆಳಗು' ಪದದ ಕೆಲವೊಂದು ಅರ್ಥವನ್ನು ಹೀಗೆ ವ್ಯಾಖ್ಯಾನಿಸಲಾಗಿತ್ತು: Benevolent; Efforts to contribute to; Life; Around us with; Greater; Understanding. ಮೇಲಿನ ವ್ಯಾಖ್ಯಾನಗಳನ್ನು ಪದೇ ಪದೇ ಓದಿಕೊಂಡೆ; ನನ್ನ ಊಹೆಯು ಸುಳ್ಳಾಗುತ್ತಲೇ ಹೋಯಿತು. ಪ್ರತೀ ಬಾರಿ ಓದಿಕೊಂಡಾಗಲೂ ಸಹ ಪ್ರತಿಯೊಂದು ವ್ಯಾಖ್ಯಾನವೂ ಮೂಲ ಪದದಿಂದ ಹೆಚ್ಚು ಹೆಚ್ಚು ವಿಭಿನ್ನವಾಗಿ ಗೋಚರಿಸತೊಡಗಿತು. ಎರಡು ದಿನ ಕಳೆದಿದೆ; ಇಂದಿಗೂ ಸಹ 'ಬೆಳಗು' ಪದಕ್ಕೂ, Benevolent; Efforts to contribute to; Life; Around us with; Greater; Understanding ಪದಗಳಿಗೂ ಕಿಂಚಿತ್ತೂ ಜೋಡಣೆ ನನ್ನಿಂದ ಸಾಧ್ಯವಾಗಿಲ್ಲ! ನನ್ನ ಸೀಮಿತ ಅರ್ಥಗ್ರಹಣೆಗೆ ಹೊಣೆ ಯಾರು?

ಕೊನೆಗೆ, ಶಬ್ಧಕೋಶದ ಮೊರೆಹೋದ ನನಗೆ ಸ್ವಲ್ಪ ಸಮಾಧಾನ ದೊರೆಯದೇ ಇರಲಿಲ್ಲ.

ಬೆಳಗು 
ನಾಮಪದ: ಕಾಂತಿ; ಪ್ರಾತಃಕಾಲ; ಹಗಲು; ಅರಿವು; ಜ್ಞಾನ
ಕ್ರಿಯಾಪದ: ಹೊಳೆ; ಪ್ರಕಾಶಿಸುವಂತೆ ಮಾಡು; ದೀಪವನ್ನು ಹಚ್ಚು; ಸ್ವಚ್ಛಮಾಡು

ಆದರೂ, ಅಂತರಾಳದಲ್ಲಿರುವ ಅಲ್ಪಜ್ಞಾನಿಗೆ 'ಬೆಳಗು' ಪದಕ್ಕೂ, Benevolent; Efforts to contribute to; Life; Around us with; Greater; Understanding ವ್ಯಾಖ್ಯಾನಗಳಿಗೂ ಸಂಬಂಧ ಬೆಸೆಯುವ ತವಕ. ಆಪತ್ಬಾಂಧವ Google ನ ಮೊರೆ ಹೋದೆ. ಮೊದಲಿಗೆ, 'ಬೆಳಗು' ಪದದ ವ್ಯಾಖ್ಯಾನವನ್ನು ಹುಡುಕಲು, Google ಕೊಟ್ಟ ಉತ್ತರಗಳು:

outshine: ಪ್ರಕಾಶಿಸು, ಮೀರಿಸಿ-ಹೊಳೆ
illuminate: ಬೆಳಗಿಸು, ಬೆಳಕು ಮಾಡು, ಪ್ರಕಾಶಗೊಳಿಸು, ಬೆಳಕು ಕೊಡು 
burnish: ಒಪ್ಪಹಾಕು, ಮೆರುಗು ಕೊಡು
elucidate: ಸ್ಪಷ್ಟಪಡಿಸು, ಪ್ರಕಾಶಬೀರು
irradiate: ಹೊಳೆ

ಎಂದಿನಂತೆ  Google ತಕ್ಕಮಟ್ಟಿಗೆ ಕನ್ನಡ ಪದದ ವಿಸ್ತಾರವಾದ ಭಾವಾರ್ಥವನ್ನು ಹಿಡಿದುಕೊಡುವಲ್ಲಿ ಯಶಸ್ಸು ಗಳಿಸಿತ್ತು. ಇದರೊಂದಿಗೆ 'ಬೆಳಗು' ಪದದ ಅರ್ಥವೂ ಸಹ ನನ್ನ ಅರಿವಿನಲ್ಲಿ ವಿಸ್ತಾರವಾಗುತ್ತಾ ಸಾಗಿತ್ತು.

ಇಷ್ಟಕ್ಕೇ ಅದೇಕೋ ಸಮಾಧಾನವಿರಲಿಲ್ಲ.. ಇನ್ನೇನೋ ತಿಳಿಯುವ ತವಕ. Google ಸದಾ ಸಿದ್ಧ! Benevolent ಪದದ ಮೂಲ Google ನಲ್ಲಿ ಹೀಗಿದ್ದಿತು:

 
ಅರ್ಥ:
1. adjective: well meaning and kindly.
2. (of an organization) serving a charitable rather than a profit-making purpose.
(synonyms:charitable, non-profit-making, non-profit, not-for-profit)

Benevolent ಪದಕ್ಕೆ Google ಕೊಟ್ಟ ಎರಡನೇ ವ್ಯಾಖ್ಯಾನ ನನ್ನನ್ನು 'ಬೆರಗು'ಗೊಳಿಸಿತ್ತು! 'ಬೆಳಗು', 'Benevolent', 'Well wishing', 'Kind', 'Charity' - ಅದೆಂಥಾ ಅರ್ಥೈಕೆ..

'ಬೆಳಗು' - ಇದು ನಮ್ಮ ಮಾರ್ಗದರ್ಶಿಗಳಾದ ಮತ್ತೊಬ್ಬ ಹಿರಿಯರು ಸ್ಥಾಪಿಸಲು ಹೊರಟಿರುವ ಸಮಾಜಸೇವಾ ಸಂಸ್ಥೆಯ ಹೆಸರು. ಈ ಪದಕ್ಕೆ, ಸಂಸ್ಥೆಯ ಉದ್ದೇಶದ ಹಿನ್ನೆಲೆಯಲ್ಲಿ, ಆಳವಾದ ಮತ್ತು ವಿಸ್ತಾರವಾದ ಅರಿವಿನಿಂದ Benevolent ಎಂದು ವ್ಯಾಖ್ಯಾನಿಸಿರುವುದು ನನ್ನಂತಹವನಿಗೆ ಕಬ್ಬಿಣದ ಕಡಲೆಯೇ ಸರಿ; ಈ ರೀತಿಯ ಆಳವಾದ ಚಿಂತನೆಯಿಂದ ಅರ್ಥ-ಮಹತ್ವ ಕಲ್ಪಿಸುವುದು ಸಾಮಾನ್ಯ ಸಾಧ್ಯವಲ್ಲ. Benevolent ಎಂಬ ಒಂದೇ ಒಂದು ವ್ಯಾಖ್ಯಾನದ ಹಿಂದಿರುವ ವಿಶಾಲ ಅರ್ಥೈಕೆಯನ್ನು ಸಂಪೂರ್ಣವಾಗಿ ಅರಗಿಸಿಕೊಳ್ಳಲು ನನಗಿನ್ನೂ ಸಾಧಯವಾಗಿಲ್ಲ. ಹೀಗಿರುವಾಗ, ಉಳಿದ ವ್ಯಾಖ್ಯಾನಗಳ ಗೋಜಿಗೆ ಹೋದೇನೆ? ಸಧ್ಯಕ್ಕಂತೂ ಒಲ್ಲೆ.

Sunday, November 14, 2010

Our Pledge

After a long time, I visited my nephew who is studying in Grade III @ Kendriya Vidyala, Chennai. He has grown up so 'mature', I never was that in his age! To bug him for a while on the occasion of Children's Day, I kept on asking him what all he was taught at School. One of the many things he told me was this:
Our Pledge
India is my Country.
All Indians are my Brothers and Sisters.
I love my Country & I am proud of its rich and varied Heritage.
I shall always strive to be worthy of it.
I shall give respect to my Parents, Teachers & all Elders and treat everyone with courtesy.
I shall be kind to Plants and Animals.
To my Country and my People, I pledge my Devotion.
In their well being and prosperity alone, lies my Happiness.
JAI HIND!
Though we were taught all these at childhood, it felt 'all new' to me as he read it out. For what we 'elders' are today, I did feel ashamed and had nothing more to ask; but lots to introspect.

Happy Children's Day to all kid(do)s!!

Saturday, October 9, 2010

Blogger ನಲ್ಲಿ ಕನ್ನಡ

ಸಾಮಾನ್ಯವಾಗಿ, ಅಂತರ್ಜಾಲ (internet) ದಲ್ಲಿ ನಾವು ಇಂಗ್ಲಿಷ್ (English) ಅನ್ನು ಸಂವಹನ ಭಾಷೆ (communicating language) ಯಾಗಿ ಬಳಸುತ್ತೇವೆ. ಎಲ್ಲೋ ಒಂದು ಕಡೆ, ನಮ್ಮ ಮಾತೃಭಾಷೆ (mother tongue) ಯಲ್ಲಿರುವ ಅಂತರ್ಜಾಲ ತಾಣ (website) ವನ್ನು ನೋಡಿಬಿಟ್ಟೆವೆಂದರೆ - ವಾಹ್! ಅದರ ಖುಷಿಯೇ ಬೇರೆ!! ಅಲ್ಲವೇ?

ಹೀಗೆ, ಬ್ಲಾಗರ್ (Blogger) ನಲ್ಲಿ ತಮ್ಮ ಮಾತೃಭಾಷೆಯನ್ನು ಉಪಯೋಗಿಸುವ ಅದೆಷ್ಟೋ ಕನ್ನಡಿಗರು ಸಿಗದೇ ಇರಲು ಕಷ್ಟಸಾಧ್ಯವೇ ಸರಿ! ಅಂತರ್ಜಾಲದಲ್ಲಿ ಭಾರತೀಯ ಭಾಷೆಯಾದ ನಮ್ಮ ಕನ್ನಡವೂ ಬಳಸಲ್ಪಡುತ್ತಿರುವುದನ್ನು ನೋಡಿದರೆ, ನಾವು ನಿಜವಾಗಿಯೂ ಭಾರತೀಯರಾಗಿ, ಅದರಲ್ಲೂ ಕನ್ನಡಿಗರಾಗಿ ಹೆಮ್ಮೆ ಪಡಬೇಕು. ಬರಿಯ ಹೆಮ್ಮೆ ಪಟ್ಟುಕೊಂಡರೆ ಸಾಲದೇನೋ ಅನಿಸುತ್ತದಲ್ಲವೇ? ಹಾಗಾದರೆ ಏನು ಮಾಡಬೇಕು? ನಾವೂ ಸಹ ಅಂತರ್ಜಾಲದಲ್ಲಿ ಕನ್ನಡ ಬಳಸಲು ಮುಂದಾಗಬಾರದೇಕೆ? ಇದು, ನಾವು ನಮ್ಮ ಭಾಷೆಗೆ ತೋರುವ ಗೌರವ ಹಾಗೂ ಕನ್ನಡ ಸಾಹಿತ್ಯಕ್ಕೆ ನೀಡಬಹುದಾದ ಕೊಡುಗೆಯಲ್ಲವೆ??

ಕನ್ನಡಕ್ಕೆ ಅಂತರ್ಜಾಲದಲ್ಲಿ ಪ್ರಾಧಾನ್ಯತೆ ನೀಡುವಲ್ಲಿ Blogger ಕೊಡ ಮುಂಚೂಣಿಯಲ್ಲಿದ್ದು; ಇದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. Blogger ನಲ್ಲಿ ಕನ್ನಡ ಭಾಷೆಯನ್ನು ಬರೆಯುವುದು ಅತ್ಯಂತ ಸುಲಭ; ಹೇಗೆ ಎಂದು ತಿಳಿದುಕೊಳ್ಳೋಣ:

ಹಂತ-1:
ಮೊದಲನೆಯದಾಗಿ, ನಾವು Blogger ನಲ್ಲಿ Transliteration ಆಯ್ಕೆಯನ್ನು ಸಕ್ರಿಯಗೊಳಿಸಬೇಕು. ನಮ್ಮ Blogger Dashboard ನಿಂದ Settings => Basic ಗೆ ಹೋದರೆ, ಆ ಪುಟದಲ್ಲಿ ಕೊನೇಯ ಆಯ್ಕೆ 'Enable transliterate?' ಎಂದಿರುತ್ತದೆ. ಮೂಲತಃ ಈ ಆಯ್ಕೆಯು ಸಕ್ರಿಯವಾಗಿರದೆ 'Disable' ಆಗಿರುತ್ತದೆ. ನಾವು ಇದನ್ನು 'Enable' ಮಾಡಿ, 'Kannada - ಕನ್ನಡ' ಭಾಷೆಯನ್ನು ಆಯ್ದಕೊಂಡ ಮೇಲೆ 'Save Settings' ಗುಂಡಿಯನ್ನು ಒತ್ತಬೇಕು. ಹೀಗೆ ಮಾಡಿದಾಗ, ನಮ್ಮ Blogger ನಲ್ಲಿ 'Kannada Transliteration' ಸಕ್ರಿಯವಾಗುತ್ತದೆ.

ಹಂತ-2:
ಹಂತ-1 ರಲ್ಲಿ ತಿಳಿಸಿದಂತೆ ನಾವು ಕನ್ನಡ ಭಾಷೆ ಆಯ್ಕೆಯನ್ನು ಪೂರ್ಣಗೊಳಿಸಿದ ನಂತರ, ಹೊಸದೊಂದು ಲೇಖನ Blogger ನಲ್ಲಿ ಬರೆಯುವಾಗ 'Kannada Transliteration' ಕಿರುಗುಂಡಿಯು ಕಾಣಿಸಿದರೆ, ನಮ್ಮ ಹಂತ-1 ಯಶಸ್ವಿಯಾಗಿದೆ ಎಂದು ಪರಿಗಣಿಸಬಹುದು.

ಹಂತ-3:
ಲೇಖನ ಬರೆಯುವ ಮೊದಲು, 'Kannada Transliterate' (ಅ) ಗುಂಡಿಯನ್ನು ಒಮ್ಮೆ ಒತ್ತಬೇಕು. ಹಾಗೆ ಮಾಡಿದಾಗ, ಅದು ಚಾಲನೆ ಪಡೆದುಕೊಳ್ಳುತ್ತದೆ ಮತ್ತು ನಾವು ಕನ್ನಡದಲ್ಲಿ ಸುಲಭವಾಗಿ ಬರೆಯಲು ಸಾಧ್ಯವಾಗುತ್ತದೆ. ಚಾಲನೆಯಲ್ಲಿರುವಾಗ 'Kannada Transliterate' ಗುಂಡಿಯು ತಿಳಿ-ನೀಲಿ ಬಣ್ಣದ ಚೌಕಾಕಾರವನ್ನು ಹಿಂಬದಿಯಲ್ಲಿ ಹೊಂದಿರುತ್ತದೆ (ಮೇಲಿನ ಚಿತ್ರದಲ್ಲಿ ಗಮನಿಸಿ). ಲೇಖನದ ಮಧ್ಯಭಾಗದಲ್ಲಿ English ಬಳಸಬೇಕಾದರೆ, ಕನ್ನಡ ಕಿರುಗುಂಡಿಯನ್ನು ಒಮ್ಮೆ ಒತ್ತಿ ಸ್ಥಗಿತಗೊಳಿಸಬಹುದು. Google Transliterate ಬಳಸಿ ಕನ್ನಡದಲ್ಲಿ ಬರೆಯುವುದು ಹೇಗೆ ಎಂದು ತಿಳಿಯಲು ಈ ಲೇಖನ ಓದಿ.

ಇತರೆ ಭಾಷೆಗಳು:
Blogger ನಲ್ಲಿ ಕನ್ನಡ ಭಾಷೆಯನ್ನು ಹೊರತುಪಡಿಸಿ, ಇತರೆ ಭಾರತೀಯ ಭಾಷೆಗಳಾದ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳು ಲಭ್ಯವಿವೆ. ಅನುಕೂಲಕ್ಕೆ ತಕ್ಕಂತೆ, ಭಾಷಾಜ್ಞಾನ ಇದ್ದಲ್ಲಿ ಈ ಇನ್ನಿತರೆ ಭಾಷೆಗಳನ್ನೂ ಸಹ ಲೇಖನದಲ್ಲಿ ಬಳಸಿಕೊಳ್ಳಬಹುದು.

ಇವುಗಳಲ್ಲದೆ, Blogger ನಲ್ಲಿ ಕನ್ನಡ ಬಳಸುವ ಬಗ್ಗೆ ಇನ್ನೇನಾದರೂ ಸಂಶಯಗಳಿದ್ದಲ್ಲಿ ದಯಮಾಡಿ ತಿಳಿಸಿ. ನನಗೆ ತಿಳಿಯದಿದ್ದರೂ ಸಹ, ನಮ್ಮಲ್ಲೇ ಚರ್ಚಿಸಿ ಸೂಕ್ತ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸೋಣ. ಮತ್ತೇಕೆ ತಡ? ಇಂದೇ ನಿಮ್ಮ Blogger ನಲ್ಲಿ ಒಂದು ಕನ್ನಡ ಲೇಖನ ಬರೆಯಿರಿ.

ಎಲ್ಲಾದರು ಇರು, ಎಂತಾದರು ಇರು; ಎಂದೆಂದಿಗೂ ನೀ ಕನ್ನಡವಾಗಿರು. ಜೈ ಕರ್ನಾಟಕ ಮಾತೆ!

Sunday, July 25, 2010

'ನೀತಿ' ಪಾಠ

ನಿಯತಿ (Niyati)
ಬೆಂಗಳೂರಿನ ಜನನಿಬಿಡ ರಸ್ತೆಗಳಲ್ಲಿನ ವಾಹನ ದಟ್ಟಣೆಯಿಂದಾಗಿ ನಿನ್ನೆ ಕಛೇರಿಯಿಂದ ಮನೆಗೆ ಬರುವುದು ತಡವಾಗಿದ್ದಿತು. ಮನೆ ತಲುಪಿದವನಿಗೆ, 'ಊಟ ಮಾಡಿ ಮಲಗಿದರೆ ಸಾಕಪ್ಪಾ...' ಎನಿಸುತ್ತಿತ್ತು. ಕಾರನ್ನು ಮನೆಯೊಳಗೆ ನಿಲ್ಲಿಸುತ್ತಿದ್ದಂತೆಯೇ ಕಿಟಕಿಗೆ ಬಂದ ಎರಡು ವರ್ಷ ಹತ್ತು ತಿಂಗಳ ನನ್ನ ಅಕ್ಕನ ಮಗಳು ನಿಯತಿ "ಮಾಮ, light off ಮಾಡಿ" ಎಂದಾಗಲೇ ನನಗೆ ಅರಿವಾದದ್ದು, ಕಾರಿನ parking light ಆರಿಸಿರಲಿಲ್ಲವೆಂದು!

ಕಾರಿನಿಂದಿಳಿದು ಮನೆಯ ಒಳಗೆ ಹೊಗುತ್ತಿದ್ದವನಿಗೆ ನೀತಿ "ಮಾಮ, ನಾನು ಮಮ್ಮು ತಿಂತಾಇದೀನಿ"; ಅವಳ ಕಡೆ ನೋಡಿದ ನಾನು, 'good' ಎಂಬಂತೆ (ಬಲವಂತದಿಂದ?!) ನಕ್ಕು ಒಳಗೆ ಹೋದೆ. ಬೂಟು ಸಡಿಲಿಸುತ್ತಿದ್ದಾಗ ಪಕ್ಕಕ್ಕೆ ನಿಂತ ನೀತಿ "ಮಾಮ, good ಅನ್ನು ನೀತಿಗೆ". ಹೌದಲ್ಲ! ನಾನು good ಎನ್ನುವ ರೀತಿಯಲ್ಲಿ ನಕ್ಕಿದ್ದು ಆ ಪುಟ್ಟ ಮಗುವಿಗೆ ಹೇಗೆ ಅರ್ಥವಾಗಬೇಕು? ಮಗುವಿನೊಡನೆ ಹೇಗೆ ನಡೆದುಕೊಳ್ಳಬೇಕು ಎಂದು ನನಗೆ ತಿಳಿದಿದ್ದರೂ ಸಹ ನಾನು ಏಕೆ ಹಾಗೆ ನಡೆದುಕೊಳ್ಳಲಿಲ್ಲ? ನಾನು 'ನೀತಿ is a Good Girl' ಎನ್ನುವಷ್ಟರಲ್ಲಿ ನೀತಿ ಕಪಾಟಿನಲ್ಲಿದ್ದ ನನ್ನ ರೂಮಿನ ಕೀಲಿ ಕೈಯನ್ನು  ತಂದು ನನಗೆ ನೀಡುತ್ತಾ, "key ತಗೊಳ್ಳಿ" ಎಂದಳು. ಎದ್ದು ಹೋಗಿ ಕೀಲಿ ಕೈಯನ್ನು ತೆಗೆದುಕೊಳ್ಳದಷ್ಟು ಸೋಮಾರಿಯಾಗಿದ್ದ ನನಗೆ ಆದ ಖುಷಿ ಅಷ್ಟಿಷ್ಟಲ್ಲ! ಕೀಲಿ ಕೈ ತೆಗೆದುಕೊಂದವನು, ನೇರವಾಗಿ ನನ್ನ ರೂಮಿನ ಕಡೆ ಹೆಜ್ಜೆ ಹಾಕಿದೆ.

ಬೆಳಗಿನಿಂದ ರಾತ್ರಿಯವರೆಗಿನ ನನ್ನ ಆಯಾಸ ಮುಖದಲ್ಲಿ ಎದ್ದು ಕಾಣುತ್ತಿದ್ದಿರಬೇಕು; ನೀತಿಯನ್ನು ಬಿಟ್ಟರೆ ಮತ್ಯಾರೂ ನನ್ನನ್ನು ಮಾತನಾಡಿಸಲಿಲ್ಲ; ಬಹುಶಃ ನನಗೆ ವಿಶ್ರಾಂತಿಯ ಅಗತ್ಯವಿದೆ ಎನ್ನುವುದನ್ನು ಗ್ರಹಿಸಿದ್ದರು. ರೂಮಿನ ಕಡೆಗೆ ನಿಧಾನವಾಗಿ ನಡೆಯುತ್ತಿದ್ದ ನನ್ನನ್ನುದ್ದೇಶಿಸಿ ನಿಯತಿ, ಮುಖವನ್ನು ಸ್ವಲ್ಪ ಸಿಂಡರಿಸಿಕೊಂಡು "thank you" ಎಂದಳು. ಒಹ್! ನೀತಿ ನನಗೆ ಕೀಲಿ ಕೈ ತಂದುಕೊಟ್ಟಾಗ ನಾನು ಹೇಳಲು ಮರೆತದ್ದನ್ನು ನಿಯತಿ ನನಗೆ ನೆನಪಿಸಿದ್ದಳು.. ನಾನು 'thank you ನೀತಿ..' ಎನ್ನುತ್ತಿದ್ದಂತೆ ನೀತಿಯ ಮುಖದಲ್ಲಿ ಎಲ್ಲಿಲ್ಲದ ಸಂತೋಷ.. ಥಟ್ಟನೆ ಅಂದಳು, "thank you..";  ಅದಕ್ಕೆ ನಾನು 'thank you ಹೇಳ್ಬಾರ್ದು, welcome ಹೇಳ್ಬೇಕು ನೀತಿ' ಎಂದು ಹೇಳಿ ಮುಗಿಸುವ ಮೊದಲೇ ಆಕೆ "welcome..." ಎಂದವಳೇ, ಓಡಿಹೋಗಿ ಅಕ್ಕ ಕೊಟ್ಟ 'ಮಮ್ಮು' ತುತ್ತನ್ನು ತಿಂದು Cartoon Network ನ  'Scooby' ಯಲ್ಲಿ ಬೆರೆತುಹೋದಳು.

ಆಯಾಸವಾಗಿ ಮನೆಗೆ ಬಂದಾಗ ನನ್ನನ್ನು ಯಾರೂ ಮಾತನಾಡಿಸಬಾರದೆಂಬ ನಿಯಮವನ್ನು ಜಾರಿಗೆ ತಂದವನು ಸ್ವತಹಃ ನಾನೇ! ಹೀಗೆ ಆಯಾಸಗೊಂಡಿರುವಾಗ ಮನೆಯಲ್ಲಿ ನನ್ನನ್ನು ಯಾರಾದರೂ ಮಾತನಾಡಿಸಿಬಿಟ್ಟರೆ, ಕೋಪಗೊಂಡು ಸಿಡುಕಿ ಉತ್ತರ ಕೊಡುತ್ತಿದ್ದೆ. ಇದನ್ನು ನೋಡಿದ್ದ ಎಲ್ಲರು, ಹೊರಗಿನಿಂದ ಮನೆಗೆ ಬಂದ ತಕ್ಷಣ ನನ್ನನ್ನು ಮಾತನಾಡಿಸುತ್ತಲೇ ಇರಲಿಲ್ಲ! ಕೆಲವೊಮ್ಮೆ ನಾನು 'ಬೆಳಗಿನಿಂದ ದಣಿದು ಬಂದಿರುವ ನನ್ನನ್ನುದ್ದೇಶಿಸಿ ಪ್ರೀತಿಯಿಂದ ಒಂದೆರಡು ಮಾತನಾಡಿಸಿಬಿಟ್ಟರೆ ಏನಾಗಿಹೂಗುತ್ತದೋ?' ಎಂದುಕೊಳ್ಳದೆ ಇರುವುದಿಲ್ಲ. ಆದರೆ, ಹಿಂದಿನ ನನ್ನ ಪ್ರತಿಕ್ರಿಯೆ-ವರ್ತನೆಗಳು ಮನೆಯವರಲ್ಲಿ ನನ್ನ ಬಗ್ಗೆ ಒಂದು ರೀತಿಯ ಭಯದ ಭಾವನೆ ಉಂಟುಮಾಡಿದ್ದಿರಬೇಕು, ಇದಕ್ಕೆ ಕಾರಣಕರ್ತನೂ ನಾನೇ.

ಮನೆಯವರೊಡನೆ ಈ ರೀತಿಯ ನನ್ನ ವರ್ತನೆ ಸರಿಯಿಲ್ಲ ಎಂದು ನನಗೆ ತಿಳಿದಿದ್ದರೂ ಸಹ, ನನ್ನನ್ನು ನಾನು ಬದಲಿಸಿಕೊಳ್ಳುವ ಪ್ರಯತ್ನ ಎಂದೂ ಮಾಡಿರಲಿಲ್ಲ. ಇದು ಹೀಗೆಯೇ ಮುಂದುವರೆದಿದ್ದರೆ, ಮನೆಯಲ್ಲಿ ನಾನು, ಮನೆಯವರೊಡನೆ ಮನೆಯಲ್ಲೊಬ್ಬನಾಗಿ ಬೆರೆತು-ಬಾಳುವುದು ಕಷ್ಟವಾಗಿಬಿಡುತ್ತಿತ್ತೇನೋ.. ನನ್ನ ವ್ಯಕ್ತಿತ್ವದಲ್ಲಿದ್ದ ಈ ವ್ಯತಿರಿಕ್ತ ಪ್ರವೃತ್ತಿಗೆ ನಿಯತಿ ತನ್ನದೇ ಮುಗ್ಧ ಧಾಟಿಯಲ್ಲಿ ತಕ್ಕ ಪಾಠವನ್ನು ಕಲಿಸಿಬಿಟ್ಟಿದ್ದಳು. ಸಮಗ್ರತೆಯ ಚಿಂತನೆಯಲ್ಲಿ ಮುಳುಗಿ, ಅತೀ ಚಿಕ್ಕ-ಮುಖ್ಯ-ಸೂಕ್ಷ್ಮ  ಸಂಗತಿಗಳನ್ನು ನಿರ್ಲಕ್ಷಿಸಿದ್ದ ನನ್ನನ್ನು ತಿದ್ದಿದ 'ಪುಟ್ಟ ಹುಡುಗಿ' ನನ್ನ 'ಗುರು'ವಾಗಿದ್ದಾಳೆ ಎಂದರೆ ಆಭಾಸವಾಗಲಾರದು.

Monday, July 19, 2010

ಓದು - ಬರಹ

ಇಂದಿಗೆ ಸರಿಯಾಗಿ ಎರಡು ತಿಂಗಳ ಹಿಂದೆ, ಈ ಬ್ಲಾಗ್ ನಲ್ಲಿ ಬರೆದ ನನ್ನ ಪ್ರಪ್ರಥಮ ಬರವಣಿಗೆಗೆ ಹಿರಿಯರೊಬ್ಬರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು:

"To write some thing, you have to read many things I mean writings of great authors"

ಮೇಲಿನ ವಾಕ್ಯವನ್ನು ಓದುತ್ತಿದ್ದಂತೆಯೇ ತಿಳಿಯುತ್ತದೆ, ಅದು ಅವರ ಅನುಭವದ ಮಾತುಗಳೆಂದು. ಹೌದು, ಸಾಮಾನ್ಯವಾಗಿ ಆಗುವುದೇ ಹೀಗೆ. ಓದಿನ ಗೀಳು ಹಚ್ಚಿಕೊಂಡವರು, ತಮ್ಮ ಸದಭಿರುಚಿಗನುಗುಣವಾಗಿ ಹತ್ತು-ಹಲವು ವಿಭಿನ್ನರ ಬರವಣಿಗೆಗಳನ್ನು ಓದದೆ ಇರಲಾರರು. ಹಾಗೆಯೇ, ಹೆಚ್ಚು ಹೆಚ್ಚು ಓದಿದಂತೆಲ್ಲ ಅವರವರ ಭಾವಗಳಿಗೆ ತಕ್ಕಂತೆ, ಅವರವರ ಕಲ್ಪನೆಗೆ ತಕ್ಕಂತೆ, ಅವರಿಗರಿವಿಲ್ಲದೇ ಒಬ್ಬ 'ಬರಹಗಾರ' ಅವರೊಳಗೆಯೇ ಹುಟ್ಟಿಕೊಂಡಿರುತ್ತಾನೆ. ಓದಿ ಶೇಖರಿಸಿಟ್ಟ ಎಲ್ಲಾ ವಿಷಯ-ಅನುಭಾವಗಳು ಮನಸ್ಸಿನಲ್ಲೇ ಉಳಿಯದೆ, ಬರವಣಿಗೆಯ ರೂಪದಲ್ಲಿ ಬಿತ್ತರಗೊಳ್ಳದೆ ಇರುವುದಿಲ್ಲ.

ಬುದ್ಧಿ ತಿಳಿದಾಗಿನಿಂದಲೂ ನಾನು ಓದಿವುದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದವನಲ್ಲ. ಶಾಲೆ-ಕಾಲೇಜುಗಳಲ್ಲಿ ಅನ್ಯ ಮಾರ್ಗವಿಲ್ಲದೇ, ಪರೀಕ್ಷೆಯ ದೃಷ್ಟಿಯಿಂದ ಪುಸ್ತಕ ಹಿಡಿಯುತ್ತಿದ್ದುದು ನನ್ನ ಪ್ರವೃತ್ತಿ. ಕೆಲವೊಮ್ಮೆ ಓದಲು ಕುಳಿತರೆ, ವಾಕ್ಯದ ಅರ್ಥ ಗ್ರಹಿಸುವುದಷ್ಟಕ್ಕೆ ಮಾತ್ರ ಸೀಮಿತಗೊಳ್ಳುತ್ತಿದ್ದೆ. ಅಂದರೆ, ಒಂದು ವಾಕ್ಯದ ಪ್ರತಿಯೊಂದು ಪದವನ್ನೂ ಓದದೆ, ಬರಿಯ 'ಕೀಲಿ ಪದ' (key words) ಗಳನ್ನು ಮಾತ್ರ ಓದುತ್ತಿದ್ದೆ. ಹೀಗೆ ಓದುವುದನ್ನು 'speed reading' ಎಂದು ಕರೆಯುತ್ತಾರೆ; ಇದು ಪ್ರಯೋಜನಕಾರಿಯೂ ಹೌದೆಂದು ಕೆಲವೆಡೆ ಪ್ರತಿಪಾದಿಸಲಾಗಿದೆ.

ಇತ್ತೀಚಿಗೆ, ಇದೇ ಬ್ಲಾಗ್ ನಲ್ಲಿ ಬರೆದ ನನ್ನದೇ ಬರವಣಿಗೆಯೊಂದನ್ನು ಓದಿದೆ. ಎಂದಿನಂತೆ 'speed reading'. ಸಂಪೂರ್ಣ ಬರವಣಿಗೆ ಓದಿದ ಮೇಲೆ ನನಗನ್ನಿಸಿತು "ಮನಸ್ಸಿನಲ್ಲಿದ್ದ ಭಾವನೆಗಳು ಪ್ರಭಾವಶಾಲಿಯಾಗಿ ಬರವಣಿಗೆಯಲ್ಲಿ ಮೂಡಿಲ್ಲವೇನೋ..". ಮತ್ತೊಮ್ಮೆ, ನಿಧಾನವಾಗಿ, ತಾಳ್ಮೆಯಿಂದ, ಪ್ರತಿಯೊಂದು ಪದವನ್ನೂ ಸಹ ಮನಸ್ಸಿಟ್ಟು ಓದಿದೆ - ಬರವಣಿಗೆ ಅತ್ಯಂತ ಪ್ರಭಾವಶಾಲಿ ಎನಿಸಿತು! "ನೋಡುವ ಕಣ್ಣಿನಲ್ಲಿ ಅಂದವಿದೆ" ಎನ್ನುವ ಹಾಗೆ, "ಓದುವ ಮನಸ್ಸಿನಲ್ಲಿ ಅರ್ಥವಿರಬಹುದು" ಅಂದುಕೊಂಡೆ.

ಅಂದಿನಿಂದೀಚೆಗೆ ಓದುವ ನನ್ನ ಶೈಲಿ ಬದಲಾಗಿ, ತನ್ನ ವೇಗವನ್ನು ಕಳೆದುಕೊಂಡಿದೆ. ಓದುವಾಗ, ಪ್ರತಿಯೊಂದೂ ಪದವನ್ನು ಸಂಪೂರ್ಣ ತನ್ಮಯತೆಯಿಂದ ಓದುತ್ತೇನೆ. ಇದರಿಂದ ಈಗಿನ ನನ್ನ ಓದು ಇಷ್ಟೂ ದಿನಗಳಲ್ಲಿ ಕಾಣದ ಒಂದು ವಿಶೇಷ ಅನುಭವ-ಆನಂದವನ್ನು ನನ್ನಲ್ಲಿ ಉಂಟುಮಾಡುತ್ತಿದೆ; ಓದುವ ಗೀಳು ಹಚ್ಚಿಕೊಂಡುಬಿಟ್ಟಿದ್ದೇನೆ!

ಬರೆಯುತ್ತಾ ಬರೆಯುತ್ತಾ ನನಗರಿವಿಲ್ಲದೆಯೆ ನನ್ನೊಳಗೊಬ್ಬ 'ಓದುಗ' ಹುಟ್ಟಿಕೊಂಡಿರುವುದಂತೂ ಸತ್ಯ. ಸಾಮಾನ್ಯವಾಗಿ, ಓದಿನಿಂದ ಬರಹ ಎಂಬರ್ಥದಲ್ಲಿ 'ಓದು-ಬರಹ' ಎನ್ನುವುದಾದರೆ; ನನ್ನ ಮಟ್ಟಿಗೆ ಅದು 'ಬರಹ-ಓದು' ಎಂದಾಗಬೇಕಲ್ಲವೇ? ಎಲ್ಲಾ ಅದಲು-ಬದಲು!!

Saturday, May 29, 2010

Back to School

Summer holidays are all over and the Schools are all open!!

Atmosphere was very calm these days since our neighbour kids were been to native for summer holidays. When they are at Home, it seems to me like better they go out so that I can concentrate on something what I do. But, for the past couple of months I have been missing these kids too very much. They do not stay mum at Home, doing some or the other noise and what irritates me a lot is that they get their friends to play volley ball or foot ball in the street at around 9pm.. I just wonder what makes them to play at that time! Lot many times in the past two months I literally was waiting to hear them playing at night.. none of them turned up actually.

Whenever seeing kids, I always want to be like them. If it was possible, I would better be a school-going kid forever! Plucking flowers in the garden, scribbling on the walls, playing in the mud, forgetting to write homework, losing pencil and eraser, breaking scales, tearing pages in the book, crying in want of a chocolate - all these things I miss doing now. Sometimes I really get frustrated, "is there any one good reason for that we got to grow with time?".

Schools seem to have been reopened from last week, I see children going to school in the morning. Its a pleasure watching them - new uniform, new bag (not heavy, at least now..), new lunch basket, new water bottle, new pair of shoes, some of them wearing pant instead of half-pant (hopefully they got to higher schooling), trimmed hairs.. they totally look new and afresh. Most of the times they walk to school telling their friends how they spent their holidays, great adventures they did, new toys they bought, new games they played, etc., etc.. Every child has its own story to tell, usually animated when describing. Seeing them, I did remember my school days - never I went to school with so much of enthusiasm as what children show these days. Even today I remember the way I ran out of school on day one and reached Mom.. she was walking back Home at a fair distance after dropping me. Following summer holidays, it was a pain for me to get back to school and study. Many a times I was thinking "why not my School be always closed?", which never happened and if it ever happened, I would have not been what am today!

It is practically impossible for me to get back my childhood days, me have now grown up - I regret. There is no any better way for me than watching kids and getting involved in their happiness. That way, at least for sometime I feel "childish" - otherwise what I avoid to be.

I extend every kid a warm welcome back to School and wish all of them have a very very successful academic year ahead. Happy Schooling!

Sunday, May 23, 2010

ಅಂತರ್ಜಾಲದಲ್ಲಿ ಕನ್ನಡದ ಬಳಕೆ

ನಾನು ಕನ್ನಡದಲ್ಲಿ ಬ್ಲಾಗ್ ಬರೆಯಲು ಆರಂಭಿಸಿದಾಗ, ಕೆಲವು ಸ್ನೇಹಿತರು ನನಗೆ ಇ-ಮೇಲ್ ಮಾಡಿ "ಕನ್ನಡ ಅಕ್ಷರಗಳನ್ನು ಅಂತರ್ಜಾಲದಲ್ಲಿ ಬರೆಯುವುದು ಹೇಗೆ?" ಎಂದು ಕೇಳಿದರು. ಪ್ರತಿಯೊಬ್ಬರಿಗೂ ಇ-ಮೇಲ್ ಮಾಡುವ ಬದಲು, ಬ್ಲಾಗ್ ನಲ್ಲಿ ಇದರ ಬಗ್ಗೆ ಬರೆಯಬೇಕೆಂದು ತೀರ್ಮಾನಿಸಿದ್ದೇನೆ.

ಮೂಲಭೂತವಾಗಿ, ಗಣಕ ಯಂತ್ರವು ಕನ್ನಡ ಭಾಷೆಗೆ ಸಹಾಯ ಮಾಡಲು ಬೇಕಾದ ಸಾಧನಗಳನ್ನು ನಮ್ಮ ಗಣಕ ಯಂತ್ರದಲ್ಲಿ ಮೊದಲು ಸ್ಥಾಪಿಸಿರಬೇಕು. ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ Windows XP ಅಥವಾ Windows Vista ಉಪಯೋಗಿಸುತ್ತಿರುವುದರಿಂದ, ಅವುಗಳಲ್ಲಿ ಪ್ರಾಥಮಿಕವಾಗಿ ಕನ್ನಡ ಭಾಷೆಗೆ ಸಹಾಯ ಮಾಡುವ ಸಾಮರ್ಥ್ಯ ಇರುತ್ತದೆ. ಆದ್ದರಿಂದ, ಗಣಕ ಯಂತ್ರದಲ್ಲಿ ಕನ್ನಡ ಭಾಷೆಗೆ ಸಹಾಯವನ್ನು ಹೇಗೆ ಅನುಷ್ಠಾನಗೊಳಿಸಬೇಕೆಂಬುದರ ಬಗ್ಗೆ ಇಲ್ಲಿ ನಾನು ಹೇಳುವುದಿಲ್ಲ. ಯಾರಿಗಾದರೂ ಇದರ ಅವಶ್ಯಕತೆ ಇದ್ದರೆ ದಯಮಾಡಿ ತಿಳಿಸಿ, ಅದನ್ನೂ ಸಹ ಇಲ್ಲಿ ನಂತರ ವಿವರಿಸುತ್ತೇನೆ.

Google Transliteration
Google Transliteration ಸಾಧನದ ಸಹಾಯದಿಂದ ನಾವು ಆಂಗ್ಲ ಭಾಷೆಯನ್ನು ಹೊರೆತುಪಡಿಸಿ, ಹಲವು ಇತರೆ ಭಾಷೆಗಳಿಂದ ಅಂತರ್ಜಾಲದಲ್ಲಿ ಬರೆಯಲು ಸಾಧ್ಯವಿದೆ. ಎಂದಿನಂತೆ Google ನವರ ಈ ಸಾಧನವೂ ಸಹ ಉಚಿತವಾಗಿದೆ. ಈ ಸಾಧನವನ್ನು ಎರಡು ರೀತಿಯಲ್ಲಿ ಉಪಯೋಗಿಸಬಹುದು:
1. ಅಂತರ್ಜಾಲ ತಾಣದಿಂದ
2. ಗಣಕ ಯಂತ್ರದಲ್ಲಿ ಸ್ಥಾಪಿಕೊಳ್ಳುವುದರಿಂದ

ಅಂತರ್ಜಾಲ ತಾಣದಿಂದ
Google Transliteration ಸಾಧನವು http://www.google.com/transliterate ಇಲ್ಲಿ ಲಭ್ಯವಿದೆ. ನಾವು ನೇರವಾಗಿ ಕನ್ನಡ ಭಾಷೆಯಲ್ಲಿ ಬರೆಯಬೇಕಾದರೆ, http://www.google.com/transliterate/kannada ಇಲ್ಲಿಗೆ ಭೇಟಿ ಕೊಡಬೇಕು.

ಗಣಕ ಯಂತ್ರದಲ್ಲಿ ಸ್ಥಾಪಿಕೊಳ್ಳುವುದರಿಂದ
Google Transliteration ಸಾಧನವನ್ನು ನಮ್ಮ ಗಣಕ ಯಂತ್ರದಲ್ಲಿ ಸ್ಥಾಪಿಸಿಕೊಳ್ಳಲು http://www.google.com/ime/transliteration ಇಲ್ಲಿಗೆ ಭೇಟಿಕೊಟ್ಟು, 'Download Google IME' ಕೊಂಡಿಯ ಸಹಾಯದಿಂದ 'Installer' ಅನ್ನು ಉಳಿಸಿಕೊಳ್ಳಬೇಕು. ನಂತರ, ಅದನ್ನು ಹೇಗೆ ಸ್ಥಾಪಿಸಬೇಕು ಎಂಬುದನ್ನು ಇಲ್ಲಿ ಓದಬಹುದು - http://www.google.com/ime/transliteration/help.html#installation.

ಕನ್ನಡ ಅಕ್ಷರಗಳನ್ನು ಬರೆಯುವುದು ಹೇಗೆ?
Google Transliteration ಅನ್ನು ಉಪಯೋಗಿಸಿಕೊಂಡು ಕನ್ನಡದಲ್ಲಿ ಬರೆಯುವುದು ಬಹಳ ಸುಲಭ. ನಾವು ಏನನ್ನು ಕನ್ನಡದಲ್ಲಿ ಬರೆಯಬೇಕೋ ಅದನ್ನೂ ಆಂಗ್ಲ ಅಕ್ಷರಗಳಲ್ಲಿ ಬರೆದು ನಂತರ ಒಂದು ಬಿಳಿಯ ಜಾಗ (white space) ವನ್ನು ಕೊಟ್ಟರೆ, ತಂತಾನೇ ಆ ಅಕ್ಷರವನ್ನು ಕನ್ನಡಕ್ಕೆ ಪರಿವರ್ತಿಸುತ್ತದೆ. ಕೆಳಗೆ ಕೆಲವು ಉದಾಹರಣೆಯನ್ನು ನೋಡಿ:
1. kannada => ಕನ್ನಡ
2. aangla => ಆಂಗ್ಲ
3. nanna => ನನ್ನ

ಕೆಲವೊಮ್ಮೆ ಕನ್ನಡಕ್ಕೆ ಅಕ್ಷರ ಪರಿವರ್ತನೆಗೊಂಡಾಗ, ಅದರಲ್ಲಿ ಕೆಲವೊಂದು ವ್ಯಾಕರಣ ತಪ್ಪಾಗಿರುವ ಸಾಧ್ಯತೆ ಇರುತ್ತದೆ. 'ಕೊಲ್ಲು' ಬರೆಯಲು 'kollu' ಎಂದು ನಮೂದಿಸಿದರೆ, ಆ ಅಕ್ಷರವು 'ಕೊಳ್ಳು' ಗೆ ಪರಿವರ್ತನೆಗೊಳ್ಳುತ್ತದೆ. ಇದನ್ನು ಸರಿಪಡಿಸಲು 'ಕೊಳ್ಳು' ಅಕ್ಷರದ ಕೊನೆಯಲ್ಲಿ 'cursor' ಇಟ್ಟು, 'Back Space' ಕೀಲಿಯನ್ನು ಒಂದು ಬಾರಿ ಒತ್ತಿದರೆ ಆ ಪದಕ್ಕೆ ಹತ್ತಿರವಾದ ಇನ್ನಿತರೆ ಪದಗಳು ಮೂಡುತ್ತವೆ; ಅವುಗಳಲ್ಲಿ ನಮಗೆ ಬೇಕಾದ ಪದವನ್ನು ಆಯ್ಕೆ ಮಾಡಿ ಉಪಯೋಗಿಸಿಕೊಳ್ಳಬಹುದು.

ಬದಲಾಗಿ, ನೀವು ಈಗಾಗಲೇ ಕನ್ನಡವನ್ನು 'ಬರಹ' ಬಳಸಿ ಬರೆಯಲು ಶಕ್ತರಿದ್ದರೆ, ಅದನ್ನೂ ಸಹ Google Transliteration ನಲ್ಲಿ ಬಳಸಬಹುದು. ಉದಾಹರಣೆಯನ್ನು ನೋಡಿ:
1. kannaDa => ಕನ್ನಡ
2. sAmarthya => ಸಾಮರ್ಥ್ಯ
3. rOga => ರೋಗ

GMail ನಲ್ಲಿ Google Transliteration
GMail ಮೂಲಕ ಕನ್ನಡದಲ್ಲಿ ಇ-ಮೇಲ್ ಬರೆಯಬೇಕಾದರೆ, ಮೊದಲಿಗೆ ನಿಮ್ಮ GMail ನಲ್ಲಿ Google Transliteration ಅನ್ನು ಶಕ್ತಗೊಲಿಸಬೇಕು. ಇದಕ್ಕೆ ನೀವು ನಿಮ್ಮ GMail ಖಾತೆಯಲ್ಲಿ 'Settings => General' ಗೆ ಹೋಗಿ, ಅಲ್ಲಿ 'Language' ಪಕ್ಕ 'Gmail display language' ನಲ್ಲಿ 'ಕನ್ನಡ' ಆಯ್ಕೆ ನಾಡಿ, ನಂತರ 'Enable Transliteration' ಆಯ್ಕೆ ಮಾಡಿ, 'Default transliteration language' ಅನ್ನು 'ಕನ್ನಡ' ಗೊಳಿಸಿದ ನಂತರ 'Save Changes' ಗುಂಡಿಯನ್ನು ಒತ್ತಿ.

Blogger ನಲ್ಲಿ Google Transliteration
Blogger ನಲ್ಲಿ 'Dashboard => Settings => Basic' ಪುಟದಲ್ಲಿ ಕೊನೆಯದಾಗಿ 'Enable transliteration?' ಎಂಬುವ ಕಡೆ 'Enable' ಹಾಗು 'ಕನ್ನಡ' ಆಯ್ಕೆ ಮಾಡಿ 'SAVE SETTINGS' ಗುಂಡಿಯನ್ನು ಒತ್ತಿ. Blogger ನಲ್ಲಿ ಕನ್ನಡದ ಬಳಕೆಯ ಬಗ್ಗೆ ಬರೆದಿರುವ ನನ್ನ ಈ ಲೇಖನ ಓದಿ.

ಅಂತರ್ಜಾಲದಲ್ಲಿ ಎಲ್ಲಿಯಾದರೂ ಕನ್ನಡದಲ್ಲಿ ಬರೆಯಬೇಕಾದರೆ, ಮೊದಲು Google Transliteration ನಲ್ಲಿ ಬರೆದು, ಅದನ್ನು ನಕಲು ಮಾಡಿ ಎಲ್ಲಿ ಬೇಕೊ ಅಲ್ಲಿ ಅಂಟಿಸಿದರೆ ಆಯಿತು.

ಇದರ ಬಗ್ಗೆ ಇನ್ನೇನಾದರೂ ಮಾಹಿತಿ ಬೇಕಿದ್ದ ಪಕ್ಷದಲ್ಲಿ, ದಯಮಾಡಿ ಕೇಳಿರಿ. ನನಗೆ ತಿಳಿಯದಿದ್ದರೂ ಸಹ, ತಿಳಿದವರನ್ನು ವಿಚಾರಿಸಿ ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.