Saturday, October 9, 2010

Blogger ನಲ್ಲಿ ಕನ್ನಡ

ಸಾಮಾನ್ಯವಾಗಿ, ಅಂತರ್ಜಾಲ (internet) ದಲ್ಲಿ ನಾವು ಇಂಗ್ಲಿಷ್ (English) ಅನ್ನು ಸಂವಹನ ಭಾಷೆ (communicating language) ಯಾಗಿ ಬಳಸುತ್ತೇವೆ. ಎಲ್ಲೋ ಒಂದು ಕಡೆ, ನಮ್ಮ ಮಾತೃಭಾಷೆ (mother tongue) ಯಲ್ಲಿರುವ ಅಂತರ್ಜಾಲ ತಾಣ (website) ವನ್ನು ನೋಡಿಬಿಟ್ಟೆವೆಂದರೆ - ವಾಹ್! ಅದರ ಖುಷಿಯೇ ಬೇರೆ!! ಅಲ್ಲವೇ?

ಹೀಗೆ, ಬ್ಲಾಗರ್ (Blogger) ನಲ್ಲಿ ತಮ್ಮ ಮಾತೃಭಾಷೆಯನ್ನು ಉಪಯೋಗಿಸುವ ಅದೆಷ್ಟೋ ಕನ್ನಡಿಗರು ಸಿಗದೇ ಇರಲು ಕಷ್ಟಸಾಧ್ಯವೇ ಸರಿ! ಅಂತರ್ಜಾಲದಲ್ಲಿ ಭಾರತೀಯ ಭಾಷೆಯಾದ ನಮ್ಮ ಕನ್ನಡವೂ ಬಳಸಲ್ಪಡುತ್ತಿರುವುದನ್ನು ನೋಡಿದರೆ, ನಾವು ನಿಜವಾಗಿಯೂ ಭಾರತೀಯರಾಗಿ, ಅದರಲ್ಲೂ ಕನ್ನಡಿಗರಾಗಿ ಹೆಮ್ಮೆ ಪಡಬೇಕು. ಬರಿಯ ಹೆಮ್ಮೆ ಪಟ್ಟುಕೊಂಡರೆ ಸಾಲದೇನೋ ಅನಿಸುತ್ತದಲ್ಲವೇ? ಹಾಗಾದರೆ ಏನು ಮಾಡಬೇಕು? ನಾವೂ ಸಹ ಅಂತರ್ಜಾಲದಲ್ಲಿ ಕನ್ನಡ ಬಳಸಲು ಮುಂದಾಗಬಾರದೇಕೆ? ಇದು, ನಾವು ನಮ್ಮ ಭಾಷೆಗೆ ತೋರುವ ಗೌರವ ಹಾಗೂ ಕನ್ನಡ ಸಾಹಿತ್ಯಕ್ಕೆ ನೀಡಬಹುದಾದ ಕೊಡುಗೆಯಲ್ಲವೆ??

ಕನ್ನಡಕ್ಕೆ ಅಂತರ್ಜಾಲದಲ್ಲಿ ಪ್ರಾಧಾನ್ಯತೆ ನೀಡುವಲ್ಲಿ Blogger ಕೊಡ ಮುಂಚೂಣಿಯಲ್ಲಿದ್ದು; ಇದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. Blogger ನಲ್ಲಿ ಕನ್ನಡ ಭಾಷೆಯನ್ನು ಬರೆಯುವುದು ಅತ್ಯಂತ ಸುಲಭ; ಹೇಗೆ ಎಂದು ತಿಳಿದುಕೊಳ್ಳೋಣ:

ಹಂತ-1:
ಮೊದಲನೆಯದಾಗಿ, ನಾವು Blogger ನಲ್ಲಿ Transliteration ಆಯ್ಕೆಯನ್ನು ಸಕ್ರಿಯಗೊಳಿಸಬೇಕು. ನಮ್ಮ Blogger Dashboard ನಿಂದ Settings => Basic ಗೆ ಹೋದರೆ, ಆ ಪುಟದಲ್ಲಿ ಕೊನೇಯ ಆಯ್ಕೆ 'Enable transliterate?' ಎಂದಿರುತ್ತದೆ. ಮೂಲತಃ ಈ ಆಯ್ಕೆಯು ಸಕ್ರಿಯವಾಗಿರದೆ 'Disable' ಆಗಿರುತ್ತದೆ. ನಾವು ಇದನ್ನು 'Enable' ಮಾಡಿ, 'Kannada - ಕನ್ನಡ' ಭಾಷೆಯನ್ನು ಆಯ್ದಕೊಂಡ ಮೇಲೆ 'Save Settings' ಗುಂಡಿಯನ್ನು ಒತ್ತಬೇಕು. ಹೀಗೆ ಮಾಡಿದಾಗ, ನಮ್ಮ Blogger ನಲ್ಲಿ 'Kannada Transliteration' ಸಕ್ರಿಯವಾಗುತ್ತದೆ.

ಹಂತ-2:
ಹಂತ-1 ರಲ್ಲಿ ತಿಳಿಸಿದಂತೆ ನಾವು ಕನ್ನಡ ಭಾಷೆ ಆಯ್ಕೆಯನ್ನು ಪೂರ್ಣಗೊಳಿಸಿದ ನಂತರ, ಹೊಸದೊಂದು ಲೇಖನ Blogger ನಲ್ಲಿ ಬರೆಯುವಾಗ 'Kannada Transliteration' ಕಿರುಗುಂಡಿಯು ಕಾಣಿಸಿದರೆ, ನಮ್ಮ ಹಂತ-1 ಯಶಸ್ವಿಯಾಗಿದೆ ಎಂದು ಪರಿಗಣಿಸಬಹುದು.

ಹಂತ-3:
ಲೇಖನ ಬರೆಯುವ ಮೊದಲು, 'Kannada Transliterate' (ಅ) ಗುಂಡಿಯನ್ನು ಒಮ್ಮೆ ಒತ್ತಬೇಕು. ಹಾಗೆ ಮಾಡಿದಾಗ, ಅದು ಚಾಲನೆ ಪಡೆದುಕೊಳ್ಳುತ್ತದೆ ಮತ್ತು ನಾವು ಕನ್ನಡದಲ್ಲಿ ಸುಲಭವಾಗಿ ಬರೆಯಲು ಸಾಧ್ಯವಾಗುತ್ತದೆ. ಚಾಲನೆಯಲ್ಲಿರುವಾಗ 'Kannada Transliterate' ಗುಂಡಿಯು ತಿಳಿ-ನೀಲಿ ಬಣ್ಣದ ಚೌಕಾಕಾರವನ್ನು ಹಿಂಬದಿಯಲ್ಲಿ ಹೊಂದಿರುತ್ತದೆ (ಮೇಲಿನ ಚಿತ್ರದಲ್ಲಿ ಗಮನಿಸಿ). ಲೇಖನದ ಮಧ್ಯಭಾಗದಲ್ಲಿ English ಬಳಸಬೇಕಾದರೆ, ಕನ್ನಡ ಕಿರುಗುಂಡಿಯನ್ನು ಒಮ್ಮೆ ಒತ್ತಿ ಸ್ಥಗಿತಗೊಳಿಸಬಹುದು. Google Transliterate ಬಳಸಿ ಕನ್ನಡದಲ್ಲಿ ಬರೆಯುವುದು ಹೇಗೆ ಎಂದು ತಿಳಿಯಲು ಈ ಲೇಖನ ಓದಿ.

ಇತರೆ ಭಾಷೆಗಳು:
Blogger ನಲ್ಲಿ ಕನ್ನಡ ಭಾಷೆಯನ್ನು ಹೊರತುಪಡಿಸಿ, ಇತರೆ ಭಾರತೀಯ ಭಾಷೆಗಳಾದ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳು ಲಭ್ಯವಿವೆ. ಅನುಕೂಲಕ್ಕೆ ತಕ್ಕಂತೆ, ಭಾಷಾಜ್ಞಾನ ಇದ್ದಲ್ಲಿ ಈ ಇನ್ನಿತರೆ ಭಾಷೆಗಳನ್ನೂ ಸಹ ಲೇಖನದಲ್ಲಿ ಬಳಸಿಕೊಳ್ಳಬಹುದು.

ಇವುಗಳಲ್ಲದೆ, Blogger ನಲ್ಲಿ ಕನ್ನಡ ಬಳಸುವ ಬಗ್ಗೆ ಇನ್ನೇನಾದರೂ ಸಂಶಯಗಳಿದ್ದಲ್ಲಿ ದಯಮಾಡಿ ತಿಳಿಸಿ. ನನಗೆ ತಿಳಿಯದಿದ್ದರೂ ಸಹ, ನಮ್ಮಲ್ಲೇ ಚರ್ಚಿಸಿ ಸೂಕ್ತ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸೋಣ. ಮತ್ತೇಕೆ ತಡ? ಇಂದೇ ನಿಮ್ಮ Blogger ನಲ್ಲಿ ಒಂದು ಕನ್ನಡ ಲೇಖನ ಬರೆಯಿರಿ.

ಎಲ್ಲಾದರು ಇರು, ಎಂತಾದರು ಇರು; ಎಂದೆಂದಿಗೂ ನೀ ಕನ್ನಡವಾಗಿರು. ಜೈ ಕರ್ನಾಟಕ ಮಾತೆ!

No comments:

Post a Comment

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!