Tuesday, October 26, 2010

ಅರಗಿಣಿ

Water Painting by Me @ 10th Grade
ಬಹಳ ದಿನಗಳ ನಂತರ, ನನ್ನ ಕಪಾಟನ್ನು ಜಾಲಾಡಿ, ಶುಚಿಗೊಳಿಸುವ ಸುಸಂದರ್ಭ ಇಂದು ಒದಗಿ ಬಂದಿತ್ತು. 'ಸುಸಂದರ್ಭ' ಎಂದು ಏಕೆ ಹೇಳಿದೆ ಎಂದರೆ, ಸಾಮಾನ್ಯವಾಗಿ ನಾನು ನನ್ನ ಮೇಜು, ಕಪಾಟು, ಬಟ್ಟೆ, ಕೊಠಡಿ ಮುಂತಾದವುಗಳನ್ನು ಅಷ್ಟು ಸುಲಭದಲ್ಲಿ ಶುಚಿಗೊಳಿಸುವವನಲ್ಲ. ಶುಚಿ ಮಾಡಲೇಬೇಕಾದ ಅನಿವಾರ್ಯತೆಯಿದ್ದಲ್ಲಿ ಮಾತ್ರ ಅಂಥಹ 'ಸಾಹಸ' ಮಾಡುವ ಜಾಯಮಾನದವನು. ಏನು? 'ಸೋಮಾರಿ' ಎಂದಿರೇನು? ಅದು ನಿಮಗೆ ಇಷ್ಟೂ ದಿನ ಗೊತ್ತಿರಲಿಲ್ಲವೆ? ಆಶ್ಚರ್ಯ!!

ಮತ್ತೆ ವಿಷಯಕ್ಕೆ ಬರುತ್ತಾ, ನನ್ನ ಕಪಾಟನ್ನು ಶುಚಿಗೊಳಿಸುವಾಗ, ಕೊನೆಯಲ್ಲಿ ಒಂದು ಬಣ್ಣದ ಚಿತ್ರ ಕಾಣಿಸಿತು. ಕೈಗೆತ್ತಿಕೊಂಡೆ. Water Color ಉಪಯೋಗಿಸಿಕೊಂಡು ನಾನೇ ಬಿಡಿಸಿದ 'ಅರಗಿಣಿ'ಯ ಚಿತ್ರ. ಇದನ್ನು ಬರೆದದ್ದು ಯಾವಾಗ ಎಂದು ಯೋಚಿಸುವಷ್ಟರಲ್ಲಿ, ಅರಗಿಣಿಯ ಪಾದಗಳ ಮಧ್ಯೆ ನನ್ನ ಸಹಿ ಕಾಣಿಸಿತು; ಜೊತೆಗೆ ದಿನಾಂಕವೂ ಸಹ. ಸಹಿ ಮಾಡಿ ದಿನಾಂಕ ಬರೆದಿಡುವಷ್ಟು ಬುದ್ಧಿ ಬಲಿತಿತ್ತು ಎಂದಾಯಿತು. ದಿನಾಂಕವನ್ನು ನೋಡಿ ತಾಳೆ ಹಾಕಿದಾಗ, ನಾನು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಬರೆದ ಚಿತ್ರ ಎಂದು ತಿಳಿಯಿತು.

ಇಷ್ಟೂ ದಿನ ನನ್ನ ಸ್ಮೃತಿಯಿಂದ ದೂರವಿದ್ದ ಒಂದಂಶವು ಈ ಚಿತ್ರ ನೋಡುತ್ತಿದ್ದಂತೆಯೇ ನೆನಪಾಗಿಹೋಯಿತು. ಅದೇನೆಂದರೆ, ನನ್ನ ಹೆಸರಿನ 'ಕನ್ನಡ ಮೊಹರನ್ನು' (Kannada Seal) ನಾನೇ ಮನೆಯಲ್ಲಿ ತಯಾರಿಸಿಕೊಂಡಿದ್ದೆ; ಒಂದು ಮರದ ತುಂಡಿನಲ್ಲಿ ಕೆತ್ತನೆ ಮಾಡಿ. ಆ ಮೊಹರನ್ನು ಮೇಲಿನ ಚಿತ್ರದ ಬಲತುದಿಯಲ್ಲಿ ನಮೂದಿಸಿದ್ದೇನೆ. ಇಂದು ಅದನ್ನು ನೋಡುತ್ತಿದ್ದಂತೆಯೇ, ಬೆಳೆ-ಬೆಳೆಯುತ್ತಾ, ನಾನು ಅಪ್ಪಟ ಸೋಮಾರಿಯಾಗಿ, ನನ್ನ ಕ್ರಿಯಾತ್ಮಕ ಮನಸ್ಸು ಹೇಗೆ ಜಡವಾಗಿ ಹೋಗಿದೆ ಎಂಬ ಅರಿವಾಯಿತು. ಹಿಂದೆಲ್ಲಾ, ಚಿಕ್ಕವನಿದ್ದಾಗ, ಏನಾದರೂ ಒಂದು ವಿಶೇಷವಾದದ್ದನ್ನು ಮಾಡುವ ತವಕ ನನಗೆ. ಆದರೆ ಈಗ, ಅದರ ತದ್ವಿರುದ್ಧ! ಹೀಗೇಕೆ? ನಾನು, ಮತ್ತೆ ನಾನಾಗಬೇಕು ಎಂಬ ಪ್ರಬಲವಾದ ಆಶಯ ಹೊಂದಿದ್ದೇನೆ; ಸಾಧ್ಯವಾದೀತೆ? ಕಾದು ನೋಡೋಣ.

9 comments:

  1. One more creativity of "little master"..... Hurray!!!! Excellent art!! Keep it up Prashanth :-)

    That's all I can say :-(.... if possible, try to translate the post in English, even I would like to know what you have written!! Hope I get to know soon!!! Ha ha

    ReplyDelete
  2. Ha ha ha.. thanks for those encouraging words, Veena.

    The title 'Little Master' suits best for Sachin Tendulkar na? So, better I be just Prashanth. What say, haan? :o)

    Sure, will try to translate the post in English. Given my present tight schedule, you might want to wait for a while for that. Hope you don't mind.

    ReplyDelete
  3. Ha ha.... Sachin is the best at cricket ground and you are the best here.... so 'Little Master' suits you too!!! I don't mind to wait but before your next write-up, translate this post. :o)

    ReplyDelete
  4. Sure Veena, will try and translate; though am not all that good at it :o)

    ReplyDelete
  5. one more request for translation :)
    nice painting!

    ReplyDelete
  6. Oh! Thanks Pari :o)

    You gotten so busy? No sketches on your Blog recently?

    Ok, will definitely translate this post; though there is nothing all that interesting written :o)

    ReplyDelete
  7. = TRANSLATION =

    After very long time, I got a golden opportunity to clean my cupboard. Said 'golden opportunity' because, usually I don't clean my table, cupboard, clothes, room, etc. all that easily. If put to unavoidable mandatory circumstances only, I do such 'adventures'. What? Did you say 'Lazy'? Didn't you know that all these days? Surprise!!

    Coming back to topic, when cleaning, found a painting lying at the bottom of my cupboard. I took it. It was a painting of a 'parakeet' done by me using 'water color'. Was wondering when I painted this and happen to see my signature midst the legs of parakeet; painted date too. So, it shows that I was mature enough to sign and even write the date along. Looking at the date came to know that it was painted when I was studying in 10th standard.

    Soon after seeing this painting, one thing struck my mind, which I had almost forgotten all these days. I had prepared a 'Kannada Seal' of my name myself at Home by carving it on a piece of wood, which is being used on the right-bottom corner of the above painting. On seeing it today, could realize how lazy I have become now leaving my creative mind rusted. When young, I always wanted to do something new and special. But now, right opposite! Why so? Am very badly wanting to become myself; will it be possible? Let's wait and see.

    ReplyDelete
  8. thanks for the translation, and you are not at all bad at translating!
    well, my classes started in september-so from then its byebye rest of the world and hi-hello books,quizzes,assignments etc etc. i miss my pencils :(

    ReplyDelete
  9. Pari, got studious? Best Wishes :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!