ನಿಯತಿ (Niyati) |
ಕಾರಿನಿಂದಿಳಿದು ಮನೆಯ ಒಳಗೆ ಹೊಗುತ್ತಿದ್ದವನಿಗೆ ನೀತಿ "ಮಾಮ, ನಾನು ಮಮ್ಮು ತಿಂತಾಇದೀನಿ"; ಅವಳ ಕಡೆ ನೋಡಿದ ನಾನು, 'good' ಎಂಬಂತೆ (ಬಲವಂತದಿಂದ?!) ನಕ್ಕು ಒಳಗೆ ಹೋದೆ. ಬೂಟು ಸಡಿಲಿಸುತ್ತಿದ್ದಾಗ ಪಕ್ಕಕ್ಕೆ ನಿಂತ ನೀತಿ "ಮಾಮ, good ಅನ್ನು ನೀತಿಗೆ". ಹೌದಲ್ಲ! ನಾನು good ಎನ್ನುವ ರೀತಿಯಲ್ಲಿ ನಕ್ಕಿದ್ದು ಆ ಪುಟ್ಟ ಮಗುವಿಗೆ ಹೇಗೆ ಅರ್ಥವಾಗಬೇಕು? ಮಗುವಿನೊಡನೆ ಹೇಗೆ ನಡೆದುಕೊಳ್ಳಬೇಕು ಎಂದು ನನಗೆ ತಿಳಿದಿದ್ದರೂ ಸಹ ನಾನು ಏಕೆ ಹಾಗೆ ನಡೆದುಕೊಳ್ಳಲಿಲ್ಲ? ನಾನು 'ನೀತಿ is a Good Girl' ಎನ್ನುವಷ್ಟರಲ್ಲಿ ನೀತಿ ಕಪಾಟಿನಲ್ಲಿದ್ದ ನನ್ನ ರೂಮಿನ ಕೀಲಿ ಕೈಯನ್ನು ತಂದು ನನಗೆ ನೀಡುತ್ತಾ, "key ತಗೊಳ್ಳಿ" ಎಂದಳು. ಎದ್ದು ಹೋಗಿ ಕೀಲಿ ಕೈಯನ್ನು ತೆಗೆದುಕೊಳ್ಳದಷ್ಟು ಸೋಮಾರಿಯಾಗಿದ್ದ ನನಗೆ ಆದ ಖುಷಿ ಅಷ್ಟಿಷ್ಟಲ್ಲ! ಕೀಲಿ ಕೈ ತೆಗೆದುಕೊಂದವನು, ನೇರವಾಗಿ ನನ್ನ ರೂಮಿನ ಕಡೆ ಹೆಜ್ಜೆ ಹಾಕಿದೆ.
ಬೆಳಗಿನಿಂದ ರಾತ್ರಿಯವರೆಗಿನ ನನ್ನ ಆಯಾಸ ಮುಖದಲ್ಲಿ ಎದ್ದು ಕಾಣುತ್ತಿದ್ದಿರಬೇಕು; ನೀತಿಯನ್ನು ಬಿಟ್ಟರೆ ಮತ್ಯಾರೂ ನನ್ನನ್ನು ಮಾತನಾಡಿಸಲಿಲ್ಲ; ಬಹುಶಃ ನನಗೆ ವಿಶ್ರಾಂತಿಯ ಅಗತ್ಯವಿದೆ ಎನ್ನುವುದನ್ನು ಗ್ರಹಿಸಿದ್ದರು. ರೂಮಿನ ಕಡೆಗೆ ನಿಧಾನವಾಗಿ ನಡೆಯುತ್ತಿದ್ದ ನನ್ನನ್ನುದ್ದೇಶಿಸಿ ನಿಯತಿ, ಮುಖವನ್ನು ಸ್ವಲ್ಪ ಸಿಂಡರಿಸಿಕೊಂಡು "thank you" ಎಂದಳು. ಒಹ್! ನೀತಿ ನನಗೆ ಕೀಲಿ ಕೈ ತಂದುಕೊಟ್ಟಾಗ ನಾನು ಹೇಳಲು ಮರೆತದ್ದನ್ನು ನಿಯತಿ ನನಗೆ ನೆನಪಿಸಿದ್ದಳು.. ನಾನು 'thank you ನೀತಿ..' ಎನ್ನುತ್ತಿದ್ದಂತೆ ನೀತಿಯ ಮುಖದಲ್ಲಿ ಎಲ್ಲಿಲ್ಲದ ಸಂತೋಷ.. ಥಟ್ಟನೆ ಅಂದಳು, "thank you.."; ಅದಕ್ಕೆ ನಾನು 'thank you ಹೇಳ್ಬಾರ್ದು, welcome ಹೇಳ್ಬೇಕು ನೀತಿ' ಎಂದು ಹೇಳಿ ಮುಗಿಸುವ ಮೊದಲೇ ಆಕೆ "welcome..." ಎಂದವಳೇ, ಓಡಿಹೋಗಿ ಅಕ್ಕ ಕೊಟ್ಟ 'ಮಮ್ಮು' ತುತ್ತನ್ನು ತಿಂದು Cartoon Network ನ 'Scooby' ಯಲ್ಲಿ ಬೆರೆತುಹೋದಳು.
ಆಯಾಸವಾಗಿ ಮನೆಗೆ ಬಂದಾಗ ನನ್ನನ್ನು ಯಾರೂ ಮಾತನಾಡಿಸಬಾರದೆಂಬ ನಿಯಮವನ್ನು ಜಾರಿಗೆ ತಂದವನು ಸ್ವತಹಃ ನಾನೇ! ಹೀಗೆ ಆಯಾಸಗೊಂಡಿರುವಾಗ ಮನೆಯಲ್ಲಿ ನನ್ನನ್ನು ಯಾರಾದರೂ ಮಾತನಾಡಿಸಿಬಿಟ್ಟರೆ, ಕೋಪಗೊಂಡು ಸಿಡುಕಿ ಉತ್ತರ ಕೊಡುತ್ತಿದ್ದೆ. ಇದನ್ನು ನೋಡಿದ್ದ ಎಲ್ಲರು, ಹೊರಗಿನಿಂದ ಮನೆಗೆ ಬಂದ ತಕ್ಷಣ ನನ್ನನ್ನು ಮಾತನಾಡಿಸುತ್ತಲೇ ಇರಲಿಲ್ಲ! ಕೆಲವೊಮ್ಮೆ ನಾನು 'ಬೆಳಗಿನಿಂದ ದಣಿದು ಬಂದಿರುವ ನನ್ನನ್ನುದ್ದೇಶಿಸಿ ಪ್ರೀತಿಯಿಂದ ಒಂದೆರಡು ಮಾತನಾಡಿಸಿಬಿಟ್ಟರೆ ಏನಾಗಿಹೂಗುತ್ತದೋ?' ಎಂದುಕೊಳ್ಳದೆ ಇರುವುದಿಲ್ಲ. ಆದರೆ, ಹಿಂದಿನ ನನ್ನ ಪ್ರತಿಕ್ರಿಯೆ-ವರ್ತನೆಗಳು ಮನೆಯವರಲ್ಲಿ ನನ್ನ ಬಗ್ಗೆ ಒಂದು ರೀತಿಯ ಭಯದ ಭಾವನೆ ಉಂಟುಮಾಡಿದ್ದಿರಬೇಕು, ಇದಕ್ಕೆ ಕಾರಣಕರ್ತನೂ ನಾನೇ.
ಮನೆಯವರೊಡನೆ ಈ ರೀತಿಯ ನನ್ನ ವರ್ತನೆ ಸರಿಯಿಲ್ಲ ಎಂದು ನನಗೆ ತಿಳಿದಿದ್ದರೂ ಸಹ, ನನ್ನನ್ನು ನಾನು ಬದಲಿಸಿಕೊಳ್ಳುವ ಪ್ರಯತ್ನ ಎಂದೂ ಮಾಡಿರಲಿಲ್ಲ. ಇದು ಹೀಗೆಯೇ ಮುಂದುವರೆದಿದ್ದರೆ, ಮನೆಯಲ್ಲಿ ನಾನು, ಮನೆಯವರೊಡನೆ ಮನೆಯಲ್ಲೊಬ್ಬನಾಗಿ ಬೆರೆತು-ಬಾಳುವುದು ಕಷ್ಟವಾಗಿಬಿಡುತ್ತಿತ್ತೇನೋ.. ನನ್ನ ವ್ಯಕ್ತಿತ್ವದಲ್ಲಿದ್ದ ಈ ವ್ಯತಿರಿಕ್ತ ಪ್ರವೃತ್ತಿಗೆ ನಿಯತಿ ತನ್ನದೇ ಮುಗ್ಧ ಧಾಟಿಯಲ್ಲಿ ತಕ್ಕ ಪಾಠವನ್ನು ಕಲಿಸಿಬಿಟ್ಟಿದ್ದಳು. ಸಮಗ್ರತೆಯ ಚಿಂತನೆಯಲ್ಲಿ ಮುಳುಗಿ, ಅತೀ ಚಿಕ್ಕ-ಮುಖ್ಯ-ಸೂಕ್ಷ್ಮ ಸಂಗತಿಗಳನ್ನು ನಿರ್ಲಕ್ಷಿಸಿದ್ದ ನನ್ನನ್ನು ತಿದ್ದಿದ 'ಪುಟ್ಟ ಹುಡುಗಿ' ನನ್ನ 'ಗುರು'ವಾಗಿದ್ದಾಳೆ ಎಂದರೆ ಆಭಾಸವಾಗಲಾರದು.
ನೀವು ಎಸ್ಟೇ ಕೋಪ ಮಾಡಿಕೊಂಡು ಮನೆಗೆ ಹೋದರು ಸಹ ನಿಮ್ಮನ್ನು ಕೋಪದಿಂದ ಶಾಂತ ಸ್ತಿತಿಗೆ ತರಲು ಈ ಭೂಮಿಯ ಮೇಲೆ ಇರುತ್ತಾರೆ ಎಂಬುದನ್ನು ನೀವು ಮರೆಯಬಾರದು ಕಾರಣ ನೀವೇ ನಿಮ್ಮ ಮನೆಯಲ್ಲಿ ಎಸ್ಟೇ ಕೋಪದಿಂದ ನಿಮ್ಮ ಮನೆಯವರ (ತಂದೆ ,ತಾಯಿ ,ಅಕ್ಕ etc ) ಜೊತೆ ವರ್ತಿಸಿದರೂ ನಿಮ್ಮ ಮನೆಯಲ್ಲಿಯೇ ಇರುವ ನಿಮ್ಮ ಅಕ್ಕನ ಮಗಳ ಜೊತೆ ಮಾತ್ರ ಕೋಪದಿಂದ ವರ್ತಿಸಲು ಸಾಧ್ಯವಾಗಲಿಲ್ಲ. ಕಾರಣ ಕೆಲವಂದು ವ್ಯಕ್ತಿ ,ವಸ್ತು ಇವುಗಳ ಮೇಲೆ ಕೋಪ ಬರುವುದಿಲ್ಲ ಎಂಬುದು ತಮಗೆ ಇದರಿಂದ ತಿಳಿದು ಬರುತ್ತದೆ.
ReplyDeleteಕೋಪವು ಮನುಷ್ಯನ ಸಹಜ ಗುಣ .ಅದೇ ಕೋಪವು ಮನುಷ್ಯನನ್ನು ಕೆಲವೊಂದು ಬಾರಿ ಎಂತಹ ಸ್ತಿತಿಗೆ ತರುತ್ತದೆ ಎಂಬುದನ್ನು ತಮಗೆ ಹೇಳಲು ಬಯಸುತ್ತೇನೆ.
ರಾವಣನ ಕೋಪ ಅವನಿಗೆ ಮುಪ್ಪಾಗಿ ಬಂದಿತು. ಅದೇ ಕೋಪ ಹನುಮಂತನಿಗೆ ವರವಾಯಿತು.
ಕೋಪವು ಮನುಷ್ಯನಲ್ಲಿ ಇರಬೇಕು ನಿಜ ಕೋಪದಿಂದ ನೀವು ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾದ್ಯವಾಗಲಾರದು ಅದರಿಂದ ನಿಮ್ಮ ಭಾವನೆಗಳು ನಿಮ್ಮ ಜೊತೆಯಲ್ಲಿಯೇ ಇದ್ದು ನಿಮಗೂ ಬೇಸರವಾಗಿರಬಹುದು.ಇದರಿಂದ
ಒಬ್ಬರಿಗೆ ಹಾನಿ ಮಾಡುವ ಕೋಪ ಅದು ಮಾನವರಾದ ನಮಗೆ ಅನ್ವಹಿಸುವುದಿಲ್ಲ ಅದು ಕೇವಲ ಪ್ರಾಣಿ ಪಕ್ಷಿಗಳಿಗೆ ಸೀಮಿತ.
ನಮಗೆ ಕೋಪ ಇರಬೇಕು ನಿಜ ಅದು ರಾವಣನ ಕೋಪ ವಾಗಿರದೇ ಹನುಮಂತನ ಕೂಪವಾದರೆ ಚೆನ್ನ .ನಿಮಗೂ ಒಂದು ಒಳ್ಳೆಯ ವರ ಸಿಕ್ಕರೂ ಸಿಗಬಹುದು ಬಲ್ಲವರುಯಾರು.
ಸೋ ನೋ ಹಂಗ್ರಿ ನಾಟ್ ಹೆಂಗ್ರಿ
ಚಂದ್ರು, ನನ್ನ ಬ್ಲಾಗ್ ಗೆ ಸ್ವಾಗತ!
ReplyDeleteಮೊದಲಿಗೆ, "ಕೋಪ ಬರುತ್ತದೆ" ಎನ್ನುವುದನ್ನು ನಾನು ಒಪ್ಪುವುದೇ ಇಲ್ಲ! ವಾಸ್ತವದಲ್ಲಿ ಕೋಪ ತಂತಾನೇ ಎಲ್ಲಿಂದಲೋ ಬರುವುದಿಲ್ಲ, ಬದಲಾಗಿ ನಾವೇ ಕೋಪ ಮಾಡಿಕೊಂಡಿರುತ್ತೇವೆ, ಅಲ್ಲವೇ? ಕೋಪವು ಮಾನವರಿಗೆ ಸಭ್ಯವಲ್ಲ ಎಂಬ ನಿಮ್ಮ ಮಾತು ಅಕ್ಷರಸಹ ಸತ್ಯ. ನೀವು ನೀಡಿದ ರಾವಣ - ಹನುಮಂತರ ಉದಾಹರಣೆ ಅತ್ಯಂತ ಸಮಂಜ ಹಾಗೂ ಅರ್ಥಭರಿತವಾಗಿದೆ. ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು :o)