Sunday, May 23, 2010

ಅಂತರ್ಜಾಲದಲ್ಲಿ ಕನ್ನಡದ ಬಳಕೆ

ನಾನು ಕನ್ನಡದಲ್ಲಿ ಬ್ಲಾಗ್ ಬರೆಯಲು ಆರಂಭಿಸಿದಾಗ, ಕೆಲವು ಸ್ನೇಹಿತರು ನನಗೆ ಇ-ಮೇಲ್ ಮಾಡಿ "ಕನ್ನಡ ಅಕ್ಷರಗಳನ್ನು ಅಂತರ್ಜಾಲದಲ್ಲಿ ಬರೆಯುವುದು ಹೇಗೆ?" ಎಂದು ಕೇಳಿದರು. ಪ್ರತಿಯೊಬ್ಬರಿಗೂ ಇ-ಮೇಲ್ ಮಾಡುವ ಬದಲು, ಬ್ಲಾಗ್ ನಲ್ಲಿ ಇದರ ಬಗ್ಗೆ ಬರೆಯಬೇಕೆಂದು ತೀರ್ಮಾನಿಸಿದ್ದೇನೆ.

ಮೂಲಭೂತವಾಗಿ, ಗಣಕ ಯಂತ್ರವು ಕನ್ನಡ ಭಾಷೆಗೆ ಸಹಾಯ ಮಾಡಲು ಬೇಕಾದ ಸಾಧನಗಳನ್ನು ನಮ್ಮ ಗಣಕ ಯಂತ್ರದಲ್ಲಿ ಮೊದಲು ಸ್ಥಾಪಿಸಿರಬೇಕು. ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ Windows XP ಅಥವಾ Windows Vista ಉಪಯೋಗಿಸುತ್ತಿರುವುದರಿಂದ, ಅವುಗಳಲ್ಲಿ ಪ್ರಾಥಮಿಕವಾಗಿ ಕನ್ನಡ ಭಾಷೆಗೆ ಸಹಾಯ ಮಾಡುವ ಸಾಮರ್ಥ್ಯ ಇರುತ್ತದೆ. ಆದ್ದರಿಂದ, ಗಣಕ ಯಂತ್ರದಲ್ಲಿ ಕನ್ನಡ ಭಾಷೆಗೆ ಸಹಾಯವನ್ನು ಹೇಗೆ ಅನುಷ್ಠಾನಗೊಳಿಸಬೇಕೆಂಬುದರ ಬಗ್ಗೆ ಇಲ್ಲಿ ನಾನು ಹೇಳುವುದಿಲ್ಲ. ಯಾರಿಗಾದರೂ ಇದರ ಅವಶ್ಯಕತೆ ಇದ್ದರೆ ದಯಮಾಡಿ ತಿಳಿಸಿ, ಅದನ್ನೂ ಸಹ ಇಲ್ಲಿ ನಂತರ ವಿವರಿಸುತ್ತೇನೆ.

Google Transliteration
Google Transliteration ಸಾಧನದ ಸಹಾಯದಿಂದ ನಾವು ಆಂಗ್ಲ ಭಾಷೆಯನ್ನು ಹೊರೆತುಪಡಿಸಿ, ಹಲವು ಇತರೆ ಭಾಷೆಗಳಿಂದ ಅಂತರ್ಜಾಲದಲ್ಲಿ ಬರೆಯಲು ಸಾಧ್ಯವಿದೆ. ಎಂದಿನಂತೆ Google ನವರ ಈ ಸಾಧನವೂ ಸಹ ಉಚಿತವಾಗಿದೆ. ಈ ಸಾಧನವನ್ನು ಎರಡು ರೀತಿಯಲ್ಲಿ ಉಪಯೋಗಿಸಬಹುದು:
1. ಅಂತರ್ಜಾಲ ತಾಣದಿಂದ
2. ಗಣಕ ಯಂತ್ರದಲ್ಲಿ ಸ್ಥಾಪಿಕೊಳ್ಳುವುದರಿಂದ

ಅಂತರ್ಜಾಲ ತಾಣದಿಂದ
Google Transliteration ಸಾಧನವು http://www.google.com/transliterate ಇಲ್ಲಿ ಲಭ್ಯವಿದೆ. ನಾವು ನೇರವಾಗಿ ಕನ್ನಡ ಭಾಷೆಯಲ್ಲಿ ಬರೆಯಬೇಕಾದರೆ, http://www.google.com/transliterate/kannada ಇಲ್ಲಿಗೆ ಭೇಟಿ ಕೊಡಬೇಕು.

ಗಣಕ ಯಂತ್ರದಲ್ಲಿ ಸ್ಥಾಪಿಕೊಳ್ಳುವುದರಿಂದ
Google Transliteration ಸಾಧನವನ್ನು ನಮ್ಮ ಗಣಕ ಯಂತ್ರದಲ್ಲಿ ಸ್ಥಾಪಿಸಿಕೊಳ್ಳಲು http://www.google.com/ime/transliteration ಇಲ್ಲಿಗೆ ಭೇಟಿಕೊಟ್ಟು, 'Download Google IME' ಕೊಂಡಿಯ ಸಹಾಯದಿಂದ 'Installer' ಅನ್ನು ಉಳಿಸಿಕೊಳ್ಳಬೇಕು. ನಂತರ, ಅದನ್ನು ಹೇಗೆ ಸ್ಥಾಪಿಸಬೇಕು ಎಂಬುದನ್ನು ಇಲ್ಲಿ ಓದಬಹುದು - http://www.google.com/ime/transliteration/help.html#installation.

ಕನ್ನಡ ಅಕ್ಷರಗಳನ್ನು ಬರೆಯುವುದು ಹೇಗೆ?
Google Transliteration ಅನ್ನು ಉಪಯೋಗಿಸಿಕೊಂಡು ಕನ್ನಡದಲ್ಲಿ ಬರೆಯುವುದು ಬಹಳ ಸುಲಭ. ನಾವು ಏನನ್ನು ಕನ್ನಡದಲ್ಲಿ ಬರೆಯಬೇಕೋ ಅದನ್ನೂ ಆಂಗ್ಲ ಅಕ್ಷರಗಳಲ್ಲಿ ಬರೆದು ನಂತರ ಒಂದು ಬಿಳಿಯ ಜಾಗ (white space) ವನ್ನು ಕೊಟ್ಟರೆ, ತಂತಾನೇ ಆ ಅಕ್ಷರವನ್ನು ಕನ್ನಡಕ್ಕೆ ಪರಿವರ್ತಿಸುತ್ತದೆ. ಕೆಳಗೆ ಕೆಲವು ಉದಾಹರಣೆಯನ್ನು ನೋಡಿ:
1. kannada => ಕನ್ನಡ
2. aangla => ಆಂಗ್ಲ
3. nanna => ನನ್ನ

ಕೆಲವೊಮ್ಮೆ ಕನ್ನಡಕ್ಕೆ ಅಕ್ಷರ ಪರಿವರ್ತನೆಗೊಂಡಾಗ, ಅದರಲ್ಲಿ ಕೆಲವೊಂದು ವ್ಯಾಕರಣ ತಪ್ಪಾಗಿರುವ ಸಾಧ್ಯತೆ ಇರುತ್ತದೆ. 'ಕೊಲ್ಲು' ಬರೆಯಲು 'kollu' ಎಂದು ನಮೂದಿಸಿದರೆ, ಆ ಅಕ್ಷರವು 'ಕೊಳ್ಳು' ಗೆ ಪರಿವರ್ತನೆಗೊಳ್ಳುತ್ತದೆ. ಇದನ್ನು ಸರಿಪಡಿಸಲು 'ಕೊಳ್ಳು' ಅಕ್ಷರದ ಕೊನೆಯಲ್ಲಿ 'cursor' ಇಟ್ಟು, 'Back Space' ಕೀಲಿಯನ್ನು ಒಂದು ಬಾರಿ ಒತ್ತಿದರೆ ಆ ಪದಕ್ಕೆ ಹತ್ತಿರವಾದ ಇನ್ನಿತರೆ ಪದಗಳು ಮೂಡುತ್ತವೆ; ಅವುಗಳಲ್ಲಿ ನಮಗೆ ಬೇಕಾದ ಪದವನ್ನು ಆಯ್ಕೆ ಮಾಡಿ ಉಪಯೋಗಿಸಿಕೊಳ್ಳಬಹುದು.

ಬದಲಾಗಿ, ನೀವು ಈಗಾಗಲೇ ಕನ್ನಡವನ್ನು 'ಬರಹ' ಬಳಸಿ ಬರೆಯಲು ಶಕ್ತರಿದ್ದರೆ, ಅದನ್ನೂ ಸಹ Google Transliteration ನಲ್ಲಿ ಬಳಸಬಹುದು. ಉದಾಹರಣೆಯನ್ನು ನೋಡಿ:
1. kannaDa => ಕನ್ನಡ
2. sAmarthya => ಸಾಮರ್ಥ್ಯ
3. rOga => ರೋಗ

GMail ನಲ್ಲಿ Google Transliteration
GMail ಮೂಲಕ ಕನ್ನಡದಲ್ಲಿ ಇ-ಮೇಲ್ ಬರೆಯಬೇಕಾದರೆ, ಮೊದಲಿಗೆ ನಿಮ್ಮ GMail ನಲ್ಲಿ Google Transliteration ಅನ್ನು ಶಕ್ತಗೊಲಿಸಬೇಕು. ಇದಕ್ಕೆ ನೀವು ನಿಮ್ಮ GMail ಖಾತೆಯಲ್ಲಿ 'Settings => General' ಗೆ ಹೋಗಿ, ಅಲ್ಲಿ 'Language' ಪಕ್ಕ 'Gmail display language' ನಲ್ಲಿ 'ಕನ್ನಡ' ಆಯ್ಕೆ ನಾಡಿ, ನಂತರ 'Enable Transliteration' ಆಯ್ಕೆ ಮಾಡಿ, 'Default transliteration language' ಅನ್ನು 'ಕನ್ನಡ' ಗೊಳಿಸಿದ ನಂತರ 'Save Changes' ಗುಂಡಿಯನ್ನು ಒತ್ತಿ.

Blogger ನಲ್ಲಿ Google Transliteration
Blogger ನಲ್ಲಿ 'Dashboard => Settings => Basic' ಪುಟದಲ್ಲಿ ಕೊನೆಯದಾಗಿ 'Enable transliteration?' ಎಂಬುವ ಕಡೆ 'Enable' ಹಾಗು 'ಕನ್ನಡ' ಆಯ್ಕೆ ಮಾಡಿ 'SAVE SETTINGS' ಗುಂಡಿಯನ್ನು ಒತ್ತಿ. Blogger ನಲ್ಲಿ ಕನ್ನಡದ ಬಳಕೆಯ ಬಗ್ಗೆ ಬರೆದಿರುವ ನನ್ನ ಈ ಲೇಖನ ಓದಿ.

ಅಂತರ್ಜಾಲದಲ್ಲಿ ಎಲ್ಲಿಯಾದರೂ ಕನ್ನಡದಲ್ಲಿ ಬರೆಯಬೇಕಾದರೆ, ಮೊದಲು Google Transliteration ನಲ್ಲಿ ಬರೆದು, ಅದನ್ನು ನಕಲು ಮಾಡಿ ಎಲ್ಲಿ ಬೇಕೊ ಅಲ್ಲಿ ಅಂಟಿಸಿದರೆ ಆಯಿತು.

ಇದರ ಬಗ್ಗೆ ಇನ್ನೇನಾದರೂ ಮಾಹಿತಿ ಬೇಕಿದ್ದ ಪಕ್ಷದಲ್ಲಿ, ದಯಮಾಡಿ ಕೇಳಿರಿ. ನನಗೆ ತಿಳಿಯದಿದ್ದರೂ ಸಹ, ತಿಳಿದವರನ್ನು ವಿಚಾರಿಸಿ ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

8 comments:

  1. very helpful post, much needed for people like me

    ReplyDelete
  2. Sujatha, am really glad that you found it useful :o)

    ReplyDelete
  3. PLS TELL HOW TO UPLOAD INFORMATION TO BLOGS LINK
    THANK U

    ReplyDelete
  4. Sreedhara, welcome to my Blog!

    You need not have to upload information to blog, instead you can type it in Kannada itself. In blogger you have Kannada in the language selection list.

    ReplyDelete
  5. Thank you Sir, and welcome to my Blog :o)

    ReplyDelete
  6. ಚೆನ್ನಾಗಿ ಬರೆದಿದ್ದೀರಿ. ನನಗೂ ಹಲವರು ಕೇಳ್ತಾ ಇರ್ತಾರೆ. ಅವರಿಗೆ ಈ ಬ್ಲಾಗ್ ಕೊಂಡಿ ಕೊಡ್ತೀನಿ.

    ReplyDelete
  7. ವಿಕಾಸ್ ಅವರೇ, ನನ್ನ ಬ್ಲಾಗ್ ಗೆ ಸ್ವಾಗತ. ಇದನ್ನು ಬಹಳ ದಿನಗಳ ಹಿಂದೆ ಬರೆದದ್ದು, ಸದ್ಯ ಹಲವಾರು ಬದಲಾವಣೆಗಳು ಆಗಿವೆ. ಅವನ್ನೆಲ್ಲಾ ಒಟ್ಟುಗೂಡಿಸಿ ಉಪಯುಕ್ತ ಮಾಹಿತಿ ಕಲೆಹಾಕುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಸ್ಪೂರ್ತಿದಾಯಕ ಅನಿಸಿಕೆಗೆ ಧನ್ಯವಾದಗಳು :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!