ಪ್ರತಿ ಸೋಮವಾರನೂ ಹೀಗೇನೆ, ಒಂಥರಾ "Monday Morning Sickness" ಅನ್ನೋಹಾಗೆ ನನ್ನ ಕಥೆ. ಎಷ್ಟೋ ಸರ್ತಿ try ಮಾಡಿದ್ದೀನಿ ಸೋಮವಾರ ಬೇಗ ಎದ್ದು ready ಆಗ್ಬೇಕು ಅಂತ, but ಸಾಧ್ಯ ಆಗಿಲ್ಲ. ಆ ದಿನ 17-05-2010, again Monday! As usual late ಆಗಿತ್ತು. Urgent urgent ನಲ್ಲೇ ready ಆಗಿ ಇನ್ನೇನು ಹೊರಡ್ಬೇಕು, shoe ಹಾಕೊಳೋಕೆ ಹೋದಾಗ ತುಂಬಾ ದಿನದಿಂದ Woodlands ಹಕೊಂಡಿಲ್ಲ ಅಂತ ಅದನ್ನು ತಗೊಂಡು first right leg ಹಾಕ್ದೆ. ಒಳಗಡೆ ಏನೋ soft ಆಗಿರೋ ಹಾಗೆ ಅನ್ಸಿ, shoe ತೆಗೆದೆ. ಏನದು ಅಂತ ನೋಡೋಕೆ ಮುಂಚೇನೆ ಒಂದು ಹಲ್ಲಿ shoe ಇಂದ ನನ್ನ left leg ಮೇಲೆ ಜಿಗಿದು ಹೋಗಿತ್ತು. ಅದು ಸ್ವಲ್ಪ ದೂರ ಹೋದ್ಮೇಲೆ ನೋಡಿದೆ, black color ಇತ್ತು. Normal ಆಗಿ ನನ್ನ room ನಲ್ಲಿ ಇರೋ ಹಲ್ಲಿ light brown color ಇರ್ತಿತ್ತು. Mostly, ನಾನು ತುಳಿದಿದ್ರಿಂದ excite ಆಗಿತ್ತು ಅನ್ಸುತ್ತೆ. ಸದ್ಯ ಬದುಕಿತ್ತಲ್ಲ ಅಷ್ಟೇ ಸಾಕು ಅಂತ ನಾನು shoe ಹಾಕೊಂಡು ಹೊರಟೆ.
20-05-2010
ಮದ್ಯಾಹ್ನ 12:30 ಕ್ಕೆ office ಕೆಲಸದ್ಮೇಲೆ ಮಡಿಕೇರಿಗೆ ಹೊರಟು, ರಾತ್ರಿ 9:00 ಗಂಟೆಗೆ ತಲುಪಿದ್ವಿ. ಮತ್ತೆ ಅಲ್ಲಿಂದ 11:30 (ರಾತ್ರಿ) ಕ್ಕೆ ಹೊರಟು ಬೆಳಿಗ್ಗೆ 6:00 ಗಂಟೆಗೆ ವಾಪಾಸ್ ಬಂದು ಬೆಂಗಳೂರು ಸೇರಿದ್ದು.
22-05-2010
ಬೆಳಿಗ್ಗೆ 9:00 ಗಂಟೆಗೆ ಮತ್ತೆ office ಕೆಲಸದ್ಮೇಲೆ ಮಡಿಕೇರಿಗೆ ಹೊರಟು, ಮದ್ಯಾಹ್ನ 3:00 ಕ್ಕೆ ತಲುಪಿ, ಮತ್ತೆ ಅಲ್ಲಿಂದ 5:00 ಗಂಟೆಗೆ ಹೊರಟು ರಾತ್ರಿ 1:00 ಗಂಟೆಗೆ ವಾಪಾಸ್ ಬಂದ್ವಿ.
23-05-2010
ರಾಮನಗರದಲ್ಲಿ ನಮ್ಮ ಮಾವನ ಮಗನ್ದು ಮದುವೆ ಇತ್ತು, ಬೆಳಿಗ್ಗೆ 10:00 ಕ್ಕೆ ಹೊರಟು ಮದ್ಯಾಹ್ನ 2:00 ಗಂಟೆಗೆ return ಬಂದಿದ್ದು.
24-05-2010
ಬೆಳಿಗ್ಗೆ 5:00 ಗಂಟೆಗೆ ಮತ್ತೆ office ಕೆಲಸದ್ಮೇಲೆ ಮಡಿಕೇರಿಗೆ ಹೋಗಿ ವಾಪಸ್ಸು ಬೆಂಗಳೂರಿಗೆ ಬಂದಾಗ ರಾತ್ರಿ 11:30.
Next day, Tuesday complete rest ನಲ್ಲಿ ಇದ್ದೆ. Room ನಲ್ಲಿ ಮಲಗಿದ್ದಾಗ ಏನೋ ನೆನ್ಪಾಯ್ತು. ಎದ್ದು ಹೋಗಿ cupboard ನಲ್ಲಿ ಇಟ್ಟಿದ್ದ pocket calender ತಗೊಂಡು ಬಂದು 2-3 pages flip ಮಾಡಿದ್ಮೇಲೆ ಕಾಣಿಸಿದ್ದು: "ಹಲ್ಲಿ ಬಿದ್ದ ಶುಭಾಶುಭ ಫಲಗಳು". ನಾನು ಅದನ್ನೇ ಹುಡುಕ್ತಾ ಇದ್ದೆ. ಸರಿ, ಓದೋಕೆ ಶುರು ಮಾಡಿದೆ: "ತಲೆಯ ಮೇಲೆ ಬಿದ್ದರೆ.. , ಹಣೆಯ ಮೇಲೆ ಬಿದ್ದರೆ.., " ಹೀಗೆ ನಮ್ಮ body ಮೇಲೆ ಎಲ್ಲೇ ಬಿದ್ರೂ ಕೂಡ ಒನ್ನೂಂದು prediction ಕೊಟ್ಟಿದ್ರು. ಹಾಗೆ ಓದ್ಕೊಂಡು ಕೊನೇಗೆ ಬಂದಾಗ ಕಾಣಿಸ್ತು: "ಕಾಲುಗಳ ಮೇಲೆ ಬಿದ್ದರೆ ಪ್ರಯಾಣ" - ಒಹ್, ಹೀಗೆ ಸಮಾಚಾರ! ನನ್ನ ಈ hectic traveling ಗೆ reason ಸಿಕ್ಕಿತ್ತು. ಆದರೆ, pocket calender ನಲ್ಲಿ ಕೊಟ್ಟಿರೋ prediction ಈ level ಗೆ ನಿಜ ಆಗುತ್ತೆ ಅಂತ ಖಂಡಿತಾ ನಾನು predict ಮಾಡಿರ್ಲಿಲ್ಲ!! ಇದು ಕಾಕತಾಳೀಯ ಅನ್ಸಿದ್ರೂ, ನಿಜ ಹೌದು. ಇನ್ಮೇಲೆ shoe ಹಾಕೊಳ್ವಾಗ ಎರಡೆರಡು ಸರ್ತಿ ಕುಟ್ಟಿ check ಮಾಡಿ confirm ಮಾಡ್ಕೊಂಡು ಹಾಕೋಬೇಕು ಅಂತ decide ಮಾಡಿದ್ದೀನಿ. ಏನಂತಿರ?
No comments:
Post a Comment
ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!