2014 ರ ಏಪ್ರಿಲ್ ತಿಂಗಳ ನಂತರ ಇಲ್ಲಿನ ನನ್ನ ಬರವಣಿಗೆಗೆ ಅಲ್ಪ(?) ವಿರಾಮ ದೊರೆತಿರುವುದರ ಅರಿವಿದ್ದರೂ ಸಹ ಅದು ನಾಲ್ಕು ವರ್ಷಗಳಷ್ಟು ಸುದೀರ್ಘವಾಗಿದೆ ಎಂಬುದರ ಪರಿವೆಯೇ ಇರಲಿಲ್ಲ! ದಿನಗಳು ತ್ವರಿತವಾಗಿ ಕಳೆದುಹೋಗುತ್ತಿವೆಯೋ, ಅಥವಾ ಜೀವನವೆಂಬ ಕತ್ತಲೆ-ಬೆಳಕಿನ ಆಟದ ಕೈಗೊಂಬೆಯಾಗಿ ನಾನೇ ಕಳೆದುಹೋಗುತ್ತಿದ್ದೇನೋ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಬಹುದಿನಗಳ ನಂತರ ಇಂದು ನನ್ನನ್ನು ಭೇಟಿಮಾಡಿದ ಹಿರಿಯರೊಬ್ಬರ "ಏನು, ಕೂದ್ಲಿಗೆ ಡೈ ಹಾಕಿದ್ದೀರಾ?" ಪ್ರಶ್ನೆಗೆ ನಗುವೇ ಉತ್ತರವಾದಾಗ "ಏಜ್ ಫ್ಯಾಕ್ಟರ್.." ಎನ್ನುತ್ತಾ ಮುಗುಳ್ನಕ್ಕರು. ಆ ಮುಗುಳ್ನಗೆಯಲ್ಲಿ ವಿಶಾಲವಾದ ಜೀವನಾನುಭವದ ದಿವ್ಯದರ್ಶನವಾಯಿತು; ನಾನೂ ಮುಗುಳ್ನಕ್ಕೆ..
ಕಳೆದೆರಡು ದಿನಗಳ ಹಿಂದೆ, ....... (ಅವರನ್ನು ಏನೆಂದು ಗುರುತಿಸುವುದು? ಹೆಸರು ಹೇಳಲು ವಯಸ್ಸಿನಲ್ಲಿ ನಾನು ಹಿರಿಯನಲ್ಲ; ಸ್ನೇಹಿತರೆನ್ನಲು ಸಮವಯಸ್ಕನಲ್ಲ; ಸಹೋದ್ಯೋಗಿ ಎನ್ನಲು ಮನಸ್ಸು ಒಪ್ಪುತ್ತಿಲ್ಲ; ಸರಿ, ಹಿಗೆನ್ನೋಣ.....) ಕಳೆದೆರಡು ದಿನಗಳ ಹಿಂದೆ, ನನ್ನ ಮಾರ್ಗದರ್ಶಕರೊಬ್ಬರು 'ಬೆಳಗು' ಎಂಬ ಪದದ ಅರ್ಥವನ್ನು ಅರಸುತ್ತಾ ನನಗೆ ಕಿರುಸಂದೇಶ ಕಳುಹಿಸಿದ್ದರು. ತತ್ಕ್ಷಣಕ್ಕೆ ಏನೂ ಹೊಳೆಯದಿದ್ದಾಗ, "ಯಾವುದೇ ಪದದ ಅರ್ಥವು ಗ್ರಹಿಸುವವರನ್ನವಲಂಬಿಸಿ ವಿಸ್ತಾರವಾಗಿ ರೂಪುಗೊಳ್ಳುತ್ತದೆ. ಶಬ್ಧಕೋಶದಲ್ಲಿರುವ ಅರ್ಥವನ್ನು ನಂತರ ತಿಳಿಸುತ್ತೇನೆ" ಎಂದಷ್ಟೇ ಉತ್ತರಿಸಿದೆ. 'ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು' ಅಲ್ಲವೇ?
ನನಗೆ ಕಳುಹಿಸಲಾಗಿದ್ದ ಕಿರುಸಂದೇಶದಲ್ಲಿ 'ಬೆಳಗು' ಪದದ ಕೆಲವೊಂದು ಅರ್ಥವನ್ನು ಹೀಗೆ ವ್ಯಾಖ್ಯಾನಿಸಲಾಗಿತ್ತು: Benevolent; Efforts to contribute to; Life; Around us with; Greater; Understanding. ಮೇಲಿನ ವ್ಯಾಖ್ಯಾನಗಳನ್ನು ಪದೇ ಪದೇ ಓದಿಕೊಂಡೆ; ನನ್ನ ಊಹೆಯು ಸುಳ್ಳಾಗುತ್ತಲೇ ಹೋಯಿತು. ಪ್ರತೀ ಬಾರಿ ಓದಿಕೊಂಡಾಗಲೂ ಸಹ ಪ್ರತಿಯೊಂದು ವ್ಯಾಖ್ಯಾನವೂ ಮೂಲ ಪದದಿಂದ ಹೆಚ್ಚು ಹೆಚ್ಚು ವಿಭಿನ್ನವಾಗಿ ಗೋಚರಿಸತೊಡಗಿತು. ಎರಡು ದಿನ ಕಳೆದಿದೆ; ಇಂದಿಗೂ ಸಹ 'ಬೆಳಗು' ಪದಕ್ಕೂ, Benevolent; Efforts to contribute to; Life; Around us with; Greater; Understanding ಪದಗಳಿಗೂ ಕಿಂಚಿತ್ತೂ ಜೋಡಣೆ ನನ್ನಿಂದ ಸಾಧ್ಯವಾಗಿಲ್ಲ! ನನ್ನ ಸೀಮಿತ ಅರ್ಥಗ್ರಹಣೆಗೆ ಹೊಣೆ ಯಾರು?
ಕೊನೆಗೆ, ಶಬ್ಧಕೋಶದ ಮೊರೆಹೋದ ನನಗೆ ಸ್ವಲ್ಪ ಸಮಾಧಾನ ದೊರೆಯದೇ ಇರಲಿಲ್ಲ.
ಬೆಳಗು
ನಾಮಪದ: ಕಾಂತಿ; ಪ್ರಾತಃಕಾಲ; ಹಗಲು; ಅರಿವು; ಜ್ಞಾನ
ಕ್ರಿಯಾಪದ: ಹೊಳೆ; ಪ್ರಕಾಶಿಸುವಂತೆ ಮಾಡು; ದೀಪವನ್ನು ಹಚ್ಚು; ಸ್ವಚ್ಛಮಾಡು
ಆದರೂ, ಅಂತರಾಳದಲ್ಲಿರುವ ಅಲ್ಪಜ್ಞಾನಿಗೆ 'ಬೆಳಗು' ಪದಕ್ಕೂ, Benevolent; Efforts to contribute to; Life; Around us with; Greater; Understanding ವ್ಯಾಖ್ಯಾನಗಳಿಗೂ ಸಂಬಂಧ ಬೆಸೆಯುವ ತವಕ. ಆಪತ್ಬಾಂಧವ Google ನ ಮೊರೆ ಹೋದೆ. ಮೊದಲಿಗೆ, 'ಬೆಳಗು' ಪದದ ವ್ಯಾಖ್ಯಾನವನ್ನು ಹುಡುಕಲು, Google ಕೊಟ್ಟ ಉತ್ತರಗಳು:
outshine: ಪ್ರಕಾಶಿಸು, ಮೀರಿಸಿ-ಹೊಳೆ
illuminate: ಬೆಳಗಿಸು, ಬೆಳಕು ಮಾಡು, ಪ್ರಕಾಶಗೊಳಿಸು, ಬೆಳಕು ಕೊಡು
burnish: ಒಪ್ಪಹಾಕು, ಮೆರುಗು ಕೊಡು
elucidate: ಸ್ಪಷ್ಟಪಡಿಸು, ಪ್ರಕಾಶಬೀರು
irradiate: ಹೊಳೆ
ಎಂದಿನಂತೆ Google ತಕ್ಕಮಟ್ಟಿಗೆ ಕನ್ನಡ ಪದದ ವಿಸ್ತಾರವಾದ ಭಾವಾರ್ಥವನ್ನು ಹಿಡಿದುಕೊಡುವಲ್ಲಿ ಯಶಸ್ಸು ಗಳಿಸಿತ್ತು. ಇದರೊಂದಿಗೆ 'ಬೆಳಗು' ಪದದ ಅರ್ಥವೂ ಸಹ ನನ್ನ ಅರಿವಿನಲ್ಲಿ ವಿಸ್ತಾರವಾಗುತ್ತಾ ಸಾಗಿತ್ತು.
ಇಷ್ಟಕ್ಕೇ ಅದೇಕೋ ಸಮಾಧಾನವಿರಲಿಲ್ಲ.. ಇನ್ನೇನೋ ತಿಳಿಯುವ ತವಕ. Google ಸದಾ ಸಿದ್ಧ! Benevolent ಪದದ ಮೂಲ Google ನಲ್ಲಿ ಹೀಗಿದ್ದಿತು:
Benevolent ಪದಕ್ಕೆ Google ಕೊಟ್ಟ ಎರಡನೇ ವ್ಯಾಖ್ಯಾನ ನನ್ನನ್ನು 'ಬೆರಗು'ಗೊಳಿಸಿತ್ತು! 'ಬೆಳಗು', 'Benevolent', 'Well wishing', 'Kind', 'Charity' - ಅದೆಂಥಾ ಅರ್ಥೈಕೆ..
'ಬೆಳಗು' - ಇದು ನಮ್ಮ ಮಾರ್ಗದರ್ಶಿಗಳಾದ ಮತ್ತೊಬ್ಬ ಹಿರಿಯರು ಸ್ಥಾಪಿಸಲು ಹೊರಟಿರುವ ಸಮಾಜಸೇವಾ ಸಂಸ್ಥೆಯ ಹೆಸರು. ಈ ಪದಕ್ಕೆ, ಸಂಸ್ಥೆಯ ಉದ್ದೇಶದ ಹಿನ್ನೆಲೆಯಲ್ಲಿ, ಆಳವಾದ ಮತ್ತು ವಿಸ್ತಾರವಾದ ಅರಿವಿನಿಂದ Benevolent ಎಂದು ವ್ಯಾಖ್ಯಾನಿಸಿರುವುದು ನನ್ನಂತಹವನಿಗೆ ಕಬ್ಬಿಣದ ಕಡಲೆಯೇ ಸರಿ; ಈ ರೀತಿಯ ಆಳವಾದ ಚಿಂತನೆಯಿಂದ ಅರ್ಥ-ಮಹತ್ವ ಕಲ್ಪಿಸುವುದು ಸಾಮಾನ್ಯ ಸಾಧ್ಯವಲ್ಲ. Benevolent ಎಂಬ ಒಂದೇ ಒಂದು ವ್ಯಾಖ್ಯಾನದ ಹಿಂದಿರುವ ವಿಶಾಲ ಅರ್ಥೈಕೆಯನ್ನು ಸಂಪೂರ್ಣವಾಗಿ ಅರಗಿಸಿಕೊಳ್ಳಲು ನನಗಿನ್ನೂ ಸಾಧಯವಾಗಿಲ್ಲ. ಹೀಗಿರುವಾಗ, ಉಳಿದ ವ್ಯಾಖ್ಯಾನಗಳ ಗೋಜಿಗೆ ಹೋದೇನೆ? ಸಧ್ಯಕ್ಕಂತೂ ಒಲ್ಲೆ.

ಅರ್ಥ:
1. adjective: well meaning and kindly.
2. (of an organization) serving a charitable rather than a profit-making purpose.
(synonyms:charitable, non-profit-making, non-profit, not-for-profit) 2. (of an organization) serving a charitable rather than a profit-making purpose.
Benevolent ಪದಕ್ಕೆ Google ಕೊಟ್ಟ ಎರಡನೇ ವ್ಯಾಖ್ಯಾನ ನನ್ನನ್ನು 'ಬೆರಗು'ಗೊಳಿಸಿತ್ತು! 'ಬೆಳಗು', 'Benevolent', 'Well wishing', 'Kind', 'Charity' - ಅದೆಂಥಾ ಅರ್ಥೈಕೆ..
'ಬೆಳಗು' - ಇದು ನಮ್ಮ ಮಾರ್ಗದರ್ಶಿಗಳಾದ ಮತ್ತೊಬ್ಬ ಹಿರಿಯರು ಸ್ಥಾಪಿಸಲು ಹೊರಟಿರುವ ಸಮಾಜಸೇವಾ ಸಂಸ್ಥೆಯ ಹೆಸರು. ಈ ಪದಕ್ಕೆ, ಸಂಸ್ಥೆಯ ಉದ್ದೇಶದ ಹಿನ್ನೆಲೆಯಲ್ಲಿ, ಆಳವಾದ ಮತ್ತು ವಿಸ್ತಾರವಾದ ಅರಿವಿನಿಂದ Benevolent ಎಂದು ವ್ಯಾಖ್ಯಾನಿಸಿರುವುದು ನನ್ನಂತಹವನಿಗೆ ಕಬ್ಬಿಣದ ಕಡಲೆಯೇ ಸರಿ; ಈ ರೀತಿಯ ಆಳವಾದ ಚಿಂತನೆಯಿಂದ ಅರ್ಥ-ಮಹತ್ವ ಕಲ್ಪಿಸುವುದು ಸಾಮಾನ್ಯ ಸಾಧ್ಯವಲ್ಲ. Benevolent ಎಂಬ ಒಂದೇ ಒಂದು ವ್ಯಾಖ್ಯಾನದ ಹಿಂದಿರುವ ವಿಶಾಲ ಅರ್ಥೈಕೆಯನ್ನು ಸಂಪೂರ್ಣವಾಗಿ ಅರಗಿಸಿಕೊಳ್ಳಲು ನನಗಿನ್ನೂ ಸಾಧಯವಾಗಿಲ್ಲ. ಹೀಗಿರುವಾಗ, ಉಳಿದ ವ್ಯಾಖ್ಯಾನಗಳ ಗೋಜಿಗೆ ಹೋದೇನೆ? ಸಧ್ಯಕ್ಕಂತೂ ಒಲ್ಲೆ.
ಪ್ರಶಾಂತ್, ಲೇಖನಕ್ಕಾಗಿ ಧನ್ಯವಾದಗಳು.
ReplyDeleteಸರಳವನ್ನು ಜಟಿಲಗೊಳಿಸುವ ಬುದ್ಧಿಯ ಸಹಾಯವನ್ನು ಬಿಟ್ಟು, ಎಲ್ಲವನ್ನು ಸಹಜ, ಸರಳ, ಸುಂದರವಾಗಿಸುವ ಹೃದಯದ ಬಾಗಿಲಿನಿಂದ ನಿತ್ಯನೂತನವಾದ ಬೆಳಗನ್ನು ಸ್ವಾಗಸಿ ನೋಡಿ.
ಈ ಪುಟ್ಟ ತಾಣಕ್ಕೆ ಭೇಟಿ ಕೊಟ್ಟು, ಹೊಸ ಚಿಂತನೆ ಹಚ್ಚಿದ್ದಕ್ಕೆ ಧನ್ಯವಾದ ಮೇಡಂ. ಬುದ್ಧಿಯೇ ಮಾನವ ಅಸ್ಥಿತ್ವದ ಜೀವಾಳ ಎಂಬ ನಂಬಿಕೆಯಿಂದ ಹೊರಬರಲು ಹೋರಾಟ ಮಾಡಬೇಕೇನೋ.. ಖಂಡಿತಾ ಪ್ರಯತ್ನಿಸುತ್ತೇನೆ.
Deleteನಿಮ್ಮ ಹುಡುಕಾಟಕ್ಕೆ ಧನ್ಯವಾದಗಳು.
ReplyDelete