Friday, December 10, 2010

ನವಜೀವನ

we ~ just after Muhurtham on 28-11-2010
ಸಡಗರ, ಸಂಭ್ರಮ, ನಿಯಮ, ಆನಂದ, ಆತುರ, ಕುತೂಹಲ, ಜವಾಬ್ದಾರಿ, ಆತಂಕ, ಸಮಾಧಾನ - ಅದೊಂದು ವಿಶಿಷ್ಟ ಅನುಭವ. ನನಗೆ ಜೀವನದಲ್ಲಿ, ಒಂದು ಕೇಂದ್ರಬಿಂದು ಸ್ಥಾನವನ್ನು ಅಲಂಕರಿಸುವ ಅವಕಾಶ ಸಿಕ್ಕಿದ್ದು ಬಹುಶಃ ಇದೇ ಮೊದಲ ಬಾರಿ. ಇದುವರೆವಿಗೂ ಜನರಿಂದ ಗುರುತಿಸಲ್ಪಡುವಂಥಹ ಅದ್ಭುತ ಸಾಧನೆಯನ್ನೇನೂ ನಾನು ಜೀವನದಲ್ಲಿ ಮಾಡಿಲ್ಲವಾದ್ದರಿಂದ, ನಾಲ್ಕಾರು ಜನರ ಮಧ್ಯೆ ಇದ್ದು, ಅವರೆಲ್ಲರ ಪ್ರೀತಿ, ಕಾಳಜಿ ಹಾಗೂ ಆಶೀರ್ವಾದವನ್ನು ಪಡೆಯುವುದರಲ್ಲಿರುವ ಆನಂದದ ಪರಿವೆಯೇ ಇರಲಿಲ್ಲ ನನಗೆ. ಆ ಸುಸಂದರ್ಭ ಒದಗಿಬಂದದ್ದು ನಮ್ಮ ಮದುವೆಯ ಸಮಾರಂಭದಲ್ಲಿ.

ಒಗ್ಗಟ್ಟು; ಬೆಂಬಲ; ಸಂಬಂಧ; ಆತ್ಮೀಯತೆ; ಸಂಪ್ರದಾಯ - ಇವುಗಳ ಅರ್ಥಗಳೇ ತಿಳಿಯದಿದ್ದ ನನಗೆ, ಮದುವೆಯು ಒಂದು ಉತ್ತಮ ಪಾಠವನ್ನೇ ಕಲಿಸಿದೆ. ತಂದೆ-ತಾಯಿ, ಅಕ್ಕ-ಭಾವ, ಅಣ್ಣ-ಅತ್ತಿಗೆ, ಅತ್ತೆ-ಮಾವ, ತಮ್ಮ-ತಂಗಿ, ಬಂಧು-ಸ್ನೇಹಿತರಿಂದ ಕೂಡಿ ಪ್ರತಿಯೊಬ್ಬರೂ ಈ ಸಮಾರಂಭದಲ್ಲಿ ತಾವೇ ವಹಿಸಿಕೊಂಡ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ ರೀತಿಯನ್ನು ನಾವು ಈ ಜೀವಮಾನದಲ್ಲಿ ಮರೆಯುವಂತಿಲ್ಲ. ಇವೆಲ್ಲವುಗಳಿಗೂ ಆ ದೈವಪ್ರೇರಣೆ ಇಲ್ಲದಿಲ್ಲ. ಅವರೆಲ್ಲರ ಮುಖದಲ್ಲಿನ ಆ ಆನಂದ-ಸಂಭ್ರಮವನ್ನು ಅನುಭವಿಸಿಯೇ ತಿಳಿಯಬೇಕು; ಅದನ್ನು ಮನದಣಿಯೆ ಅನುಭವಿಸಿದ ನಾವೇ ಧನ್ಯರು.

ದಿಕ್ಕೆಟ್ಟು ಅಲೆಯುತ್ತಿದ್ದ ಜಿವಕ್ಕೊಂದು ದಾರಿ ದೊರೆತಿದೆ, ಮಸುಕಾಗಿದ್ದ ಕಂಗಳಿಗೊಂದು ಸ್ಪಷ್ಟ ಗುರಿ ಮೂಡಿದೆ, ಮೈಮರೆತಿದ್ದ ಮನಸ್ಸು ಎಚ್ಚೆತ್ತುಕೊಂಡಿದೆ. ಸಮಾಜದಲ್ಲಿ ನಮ್ಮದೇ ಆದ ಅಸ್ತಿತ್ವವನ್ನು ಕಂಡುಕೊಳ್ಳುವ ಆಶಯ ಬಲವಾಗಿದೆ. ಸಾವಿರ ಮಾತುಗಳಲ್ಲಿ ಹೇಳಬಹುದಾದದ್ದನ್ನು ಬದುಕಿ ತೋರಿಸುವ ಹಂಬಲವಿದೆ. ಪ್ರಮುಖ ತಿರುವೊಂದನ್ನು ಪಡೆದುಕೊಂಡ ಜೀವನದ ಹೊಸದೊಂದು ದಾರಿಯಲಿ ಸಾಗಿರುವ ನಮ್ಮ ಬಾಳ ಪಯಣಕೆ ನಿಮ್ಮೆಲ್ಲರ ಪ್ರೀತಿಪೂರ್ವಕ ಆಶೀರ್ವಾದದ ಅಗತ್ಯವಿದೆ!

12 comments:

  1. Congrats Prasahanth.. Wishing you a very happy married life!! :)

    ReplyDelete
  2. Congrats Dear Prasahanth sir Wishing you a very happy married life.
    Nice Pair.

    ReplyDelete
  3. ನವವಿವಾಹದ ನವ ವದು ವರರಿಗೆ ಹೃತ್ಪೂರ್ವಕ ಅಭಿನಂದನೆಗಳು!!! ಹಾಗು ಶುಭಾಶಯಗಳು .ನಿಮ್ಮ ಮದುವೆಯ ಪೋಟೋವನ್ನು ನೋಡಿದಾಗ ಈ ರೀತಿಯ ಭಾವನೆ ಮೂಡಿತು .ಹೆಣ್ಣು ಚಿಕ್ಕದಾಗಿ ಚೊಕ್ಕವಾಗಿ, ಗುಂಡು ಗುಂಡಗೆ ಅಂದವಾಗಿ ಕಂಡರೆ ,ಗಂಡು ನೀಳವಾದ ಶರೀರದ ತೆಳ್ಳನೆಯ ಕೋಲುಮುಖ ನಿಸ್ತೇಜ ವಾಗಿ ಕಂಡುಬಂತು .ಏಕೆಂದರೆ ಹುಡುಗ ಮದುವೆಯ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಓಡಾಟ ಮಾಡಿದ್ದರಿಂದ ಬಳಲಿಕೆಯಿಂದ ಈಗೆ ಕಾಣುತ್ತಿರಬಹುದು .ಮುಂದೆ ಇದು ರಿವೆರ್ಸ್ ಆಗುವ ಸಂಭವ ವಾಗಬಹುದು .ಇದು ನನ್ನ ಅನಸಿಕೆ ಯಷ್ಟೇ .ಇದನ್ನು ಇಬ್ಬರು ಬೆಜಾರುಮಾದಿಕೊಲ್ಲುವುದಿಲ್ಲವೆಂದು ತಿಳಿಯುತ್ತೇನೆ .ಮುಂದೆ ನವರಸದಿಂದ ಕೂಡಿ ಕಾಂತಿಯುತವಾಗಿ ಇಬ್ಬರೂ ಹೊಳೆಯಲಿ ಎಂದು ಹಾರೈಸುತ್ತೇನೆ .

    ReplyDelete
  4. ನಿಮ್ಮ ಅಭಿನಂದನಾ ಆಶೀರ್ವಾದಗಳಿಗೆ ಧನ್ಯವಾದಗಳು ಸರ್ :o)

    ReplyDelete
  5. ನಿಮ್ಮ ನವ ಜೀವನ ಸದಾ ಹಸಿರಾಗಿರಲಿ, ನಿಮ್ಮ ಹಿತವಾದ ನಗು ಬತ್ತದಿರಲಿ, ನಿಮ್ಮ ಪ್ರೌಢ ಬರವಣಿಗೆ ನಿಲ್ಲದಿರಲಿ ಎಂಬ ಆಶಯದೊಡನೆ, ಶುಭಾಶಯಗಳೊಂದಿಗೆ

    ReplyDelete
  6. ದಯಾನಂದ್ ಸರ್, ನನ್ನ Blog ಗೆ ಆತ್ಮೀಯ ಸ್ವಾಗತ.
    ನಿಮ್ಮ ಪ್ರೀತಿಪೂರ್ವಕ ಶುಭಾಶಯಗಳಿಗೆ ಅತ್ಯಾನಂತ ವಂದನೆಗಳು :o)

    ReplyDelete
  7. Congratulations! I still regret missing out on the great occasion! :-(
    Both of you make a wonderful couple :-)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!