Courtesy : Google Images |
ಇಂದು ಸಂಜೆ ಇದ್ದಕ್ಕಿದ್ದ ಹಾಗೆ ಬೆಂಗಳೂರಿನಲ್ಲಿ ಅಲ್ಲಲ್ಲಿ ಮೆಳೆಯಾಯಿತು; ಮೆಳೆ ಅಕಾಲಿಕವೆನಿಸಿದರೂ, ಬಿಸಿಲಿನ ಬೇಗೆಯಿಂದ ಬಳಲಿದ್ದ ಜೀವಗಳಿಗೆ ತಂಪನ್ನು ತಂದಿತು. ಕಳೆದ ಮೂರ್ನಾಲ್ಕು ದಿನಗಳಿಂದ ನೀಲಿ ಆಕಾಶವನ್ನು ಮರೆಮಾಚುತ್ತಿದ್ದ ದಟ್ಟ ಕಪ್ಪು ಮೋಡಗಳು ಇಂದು ದಯೆತೋರಿ ಧರೆಗಿಳಿದಿದ್ದವು. Bike ನಲ್ಲಿ ಹೋಗುತ್ತಿದ್ದ ನಾನು, ಮೆಳೆಯಲ್ಲಿ ನೆನೆಯಬಾರದೆಂದು ರಸ್ತೆ ಬದಿಯ ಮರವೊಂದರ ಕೆಳಗೆ ಆಶ್ರಯ ಪಡೆದು ನಿಂತೆ. ಭೂಮಿಗೆ ನೋವಾದೀತೆಂಬಂತೆ ಬಾನಿನಿಂದ ನಯವಾಗಿ ಜಾರುತ್ತಿದ್ದ ಮಳೆಹನಿಗಳ ಜೊತೆಗೆ ನನ್ನ ಮನಸ್ಸು ಬಾಲ್ಯದ ಸವಿನೆನಪುಗಳೆಡೆಗೆ ಜಾರಿಕೊಂಡಿತು..
ಬಾಲ್ಯದ ಸವಿನೆನಪುಗಳಲ್ಲಿ ಮುಳುಗಿಹೋಗಿದ್ದ ನನ್ನನ್ನು ರಸ್ತೆಗಿಳಿದಿದ್ದ ವಾಹನಗಳ horn ಸದ್ದು ಎಚ್ಚರಿಸಿತು. ಮಳೆ ನಿಂತಿದ್ದರಿಂದ bike ಸವಾರರೆಲ್ಲ ಆತುರಾತುರವಾಗಿ ಮನೆ ಸೇರುವ ತವಕದಲ್ಲಿ ಇತರೆ ವಾಹನಗಳಿಗಡ್ಡಲಾಗಿ ಸಾಗುತ್ತಿದ್ದರು. ಮರದ ಎಲೆಗಳ ಅಂಚಿನಿಂದ ಜಾರುತ್ತಿದ್ದ ಮಳೆಯ ಹನಿಗಳು ನನ್ನನ್ನು ಸಾಕಷ್ಟು ನೆನೆಸಿದ್ದವು. ಬೇರೆ ದಾರಿ ಇಲ್ಲದೆ ಹಿತವೆನಿಸುತ್ತಿದ್ದ ಮರದ ಆಶ್ರಯದಿಂದ, ಬೆಚ್ಚಗಿನ ಬಾಲ್ಯದ ಸವಿನೆನಪುಗಳಿಂದ ಹೊರಬಂದು bike ಏರಿ ಮನೆಯ ದಾರಿ ಹಿಡಿದು ಹೊರಟೆ..
ಧೋooo ಎಂದು ಸುರಿಯುತ್ತಿದ್ದ ಮೆಳೆಯ ಸೊಬಗನ್ನು ಅರ್ಧ ತೆರೆದ ಕಿಟಕಿಯಿಂದ ಇಣುಕಿ ನೋಡುತ್ತಿದ್ದ ನೆನಪು..
ರಸ್ತೆಯ ಬದಿಗುಂಟ ಹರಿಯುತ್ತಿದ್ದ ಮೆಳೆ ನೀರಿನಲ್ಲಿ 'paper boat' ಮಾಡಿ ಬಿಡುತ್ತಿದ್ದ ನೆನಪು..
ಸಜ್ಜೆಯಿಂದ ಪೈಪಿನಲ್ಲಿ ಸುರಿಯುತ್ತಿದ್ದ ಮಳೆನೀರಿಗೆ ಕೈ ಅಡ್ಡ ಹಿಡಿದು ನಲಿಯುತ್ತಿದ್ದ ನೆನಪು..
ಮೆಳೆಯಲ್ಲಿ 'foot ball' ಆಡಿ ಶನಿವಾರದ 'white uniform' ಕೊಳೆಮಾಡಿಕೊಂಡು ಅಮ್ಮನಿಂದ ಏಟು ತಿನ್ನುತ್ತಿದ್ದ ನೆನಪು..
ಬ್ಯಾಗಿನಲ್ಲಿದ್ದ ಕೊಡೆಯನ್ನು ಬಿಡಿಸದೆ, ಮಳೆಯಲ್ಲಿ ನೆನೆಯುತ್ತಾ ಶಾಲೆಯಿಂದ ಮೆನೆಗೆ ನಡೆದು ಬರುತ್ತಿದ್ದ ನೆನಪು..
ರಸ್ತೆಯಲ್ಲಿ ಹರಿಯುವ ಮಳೆನೀರಿಗಡ್ಡಲಾಗಿ ನಡೆದು shoes ನೆನೆಸಿಕೊಳ್ಳುತ್ತಿದ್ದ ನೆನಪು..
ಮಳೆಯಲ್ಲಿ ನೆಂದು, ಜ್ವರ ಬಂದು ಶಾಲೆಗೆ ಚಕ್ಕರ್ ಹಾಕಿ ಮನೆಯಲ್ಲೇ ಇದ್ದು TV ನೋಡುತ್ತಿದ್ದ ನೆನಪು..
ರಸ್ತೆಯಲ್ಲಿ ನಿಂತ ಮೆಳೆ ನೀರನ್ನು ಸಿಡಿಸುತ್ತಾ ಜೋರಾಗಿ bicycle ಓಡಿಸುತ್ತಿದ್ದ ನೆನಪು..
ಜೋರು ಮಳೆಯಲ್ಲೂ ಬಸ್ಸಿನ ಕಿಟಕಿ ಮುಚ್ಚದೆ ಕುಳಿತು ಇತರರಿಂದ ಬೈಸಿಕೊಳ್ಳುತ್ತಿದ್ದ ನೆನಪು..
ಮಳೆಯಿಂದ current ಇಲ್ಲದಾಗ, candle ಬೆಳಕಿನಲ್ಲಿ ಗೋಡೆಯ ಮೇಲೆ shadow parrot ಮಾಡಿ ನಲಿಯುತ್ತಿದ್ದ ನೆನಪು..
ಕಿಟಕಿಯಿಂದಾಚೆಗೆ ಮಳೆಹನಿಗಳನ್ನು ದಿಟ್ಟಿಸುತ್ತಾ, ಮಳೆಯ ಸದ್ದಿನ ಜೋಗುಳಕ್ಕೆ ಸೋತು ಅಮ್ಮನ ಮಡಿಲಿನಲ್ಲಿ ಬೆಚ್ಚಗೆ ನಿದ್ರೆ ಮಾಡುತ್ತಿದ್ದ ನೆನಪು..