Monday, June 20, 2011

ಬಾಯ್ ಚಿನ್ನ..

ಹಲೋ..
( ...ಅತ್ತಲಿಂದ ಮಾತು... )
ಏನ್ ಚಿನ್ನ.. ಮಧ್ಯಹ್ನದಿಂದ phone ಮಾಡ್ತಿದ್ದೀನಿ, receive ಮಡ್ಕೊತಿಲ್ಲ??
( ...... )
ಹಾಗಲ್ಲ, receive ಮಾಡ್ಬಿಟ್ಟು busy ಅಂತ ಹೇಳಿದ್ರೆ ಸಾಕು..
( ...... )
ಮತ್ತೆ..? Coffee ಕುಡಿದ್ಯಾ?
( ...... )
ನಾನು ಬೆಳಿಗ್ಗೆ ಇಂದ ಏನೂ ತಿಂದಿಲ್ಲ. ಮದ್ಯಾಹ್ನದಿಂದ ತುಂಬಾ ತಲೆ ನೋವು.. ತಲೆನ ಎಲ್ಲಾದ್ರೂ ಜಜ್ಕೊಳ್ಳೋಣ ಅನ್ಸ್ತಿದೆ. ನೀನೂ ಬೇರೆ call answer ಮಾಡಿಲ್ಲ..
( ...... )
ನಾಳೆ ಬಂದ್ಬಿಡ್ಲ ಸಾಗರಕ್ಕೆ?
( ...... )
ನಿನ್ನೆ ಅಷ್ಟೆಲ್ಲ ಹೇಳಿದ್ದೀನಿ.. ಮತ್ತೆ ಯಾಕೆ ಅಂತ ಕೇಳ್ತಿಯ ಚಿನ್ನ??
( ...... )
ಜೀವ ತೆಗಿತಾರ? ನಿನ್ ಜೀವ ಹೋದ್ರೆ, ನಂದೂ ಹೋಗುತ್ತೆ..
( ...... )
ಅಮ್ಮಂಗೆ ಗೊತ್ತಾಗೋ ಮುಂಚೆ ನಿಂಗೆ ಬಿಡ್ಸ್ಕೊಡ್ತೀನಿ..
( ...... )
ಈ ವಿಷ್ಯ ನಂಗೆ-ನಿಂಗೆ ಮಾತ್ರ ಗೊತ್ತಿರ್ಲಿ, ಆಯ್ತಾ?
( ...... )
ನಾಳೆ ಬೇಡ್ವ? ಸರಿ, saturday ಬರ್ತೀನಿ.
( ...... )
ರಾತ್ರಿ ನಿಮ್ ಮನೇಲಿ ಇದ್ದರೆ problem ಇಲ್ಲ ತಾನೆ?
( ...... )
ಒಹ್! ರಾತ್ರಿ ಊಟ ಖರ್ಚಾಗುತ್ತೆ ಅಂತನಾ?.. ಹ್ಹ ಹ್ಹ ಹ್ಹ.. ಇಲ್ಲ ಬಿಡು ಚಿನ್ನ, ನಿಂಗೆ ತೊಂದ್ರೆ ಕೊಡಲ್ಲ.
( ...... )
Uma Gold ಬೇಕಾ?? ಬೇಗ್ನೆ ಬಿಡ್ಸ್ಕೊಡ್ತೀನಿ ಅಂತ ಹೇಳಿದ್ನಲ್ಲ.. ನನ್ಮೇಲೆ ನಂಬ್ಕೆ ಇಲ್ವಾ ಚಿನ್ನ ನಿನ್ಗೆ??
( ...... )
ಇಲ್ಲಿ ಬಸ್ಸು ತುಂಬಾ rush ಇದೆ, traffic ಬೇರೆ.. ಶೆಕೆ ಆಗ್ತಾ ಇದೆ.. ಊಟ ಬೇರೆ ತಿಂದಿಲ್ಲ..
( ...... )
Currency ಕಡ್ಮೆ ಇದೆ, cut ಆದ್ರೆ ರಾತ್ರಿ ಮತ್ತೆ ಮಾಡ್ತೀನಿ ಆಯ್ತಾ?
( ...... )
Saturday ಪಕ್ಕ ತಾನೆ?
( ...... )
ಮತ್ತೊಂದ್ ಸಲ phone ಯಾಕೆ? Saturday ಬಂದ್ಬಿಡ್ತೀನಿ..
( ...... )
ನಿನ್ ಉಪಕಾರ ಯಾವತ್ತೂ ಮರೆಯಲ್ಲ ಚಿನ್ನ..
( ...... )
ಹೂuu ಮತ್ತೆ.. ಕಷ್ಟದಲ್ಲಿ ಯಾರೂ ಉಪಕಾರ ಮಾಡಲ್ಲ ಗೊತ್ತಾ?? ತುಂಬಾ tension ಅಗ್ಹೋಗಿತ್ತು ಮೊನ್ನೆ ಇಂದ.. ನೀನು help ಮಾಡೇ ಮಾಡ್ತಿಯ ಅಂತ ಗೊತ್ತಿತ್ತು..
( ...... )
ಹೇಳಿದ್ನಲ್ಲ.. ಅದಷ್ಟೂ ಬೇಗ ಬಿಡ್ಸ್ಕೊಡ್ತೀನಿ ಅಂತ..
( ...... )
ಈಗ mind ಸ್ವಲ್ಪ free ಆಯ್ತು.. ಹೊಟ್ಟೆ ಹಸಿತಾ ಇದೆ..
( ...... )
ಆಯ್ತು, ನೀನು ಹೇಳಿದ್ಮೇಲೆ ಇಲ್ಲ ಅಂತೀನ ಹೇಳು? ಬಸ್ ಇಂದ ಇಳಿದ್ಕೂಡ್ಲೆ ಏನಾದ್ರು ತಿಂತೀನಿ..ಇಡ್ಲಾ?
( ...... )
ಬಾಯ್ ಚಿನ್ನ..
BMTC ಬಸ್ಸಿನಲ್ಲಿ ನನ್ನ ಪಕ್ಕಕ್ಕೆ ಕುಳಿತಿದ್ದ 20ರ ಆಸುಪಾಸಿನ ಯುವಕ ತನ್ನ ಫೋನಿನಲ್ಲಿ ನಡೆಸಿದ ಸಂಭಾಷಣೆಯಿದು.

ಪ್ರೀತಿಯನ್ನು ಒಂದು ಅಸ್ತ್ರವಾಗಿ ಎಂದೆಂದೂ ಬಳಸಬಾರದೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೇನು ಮಾಡಲು ಸಾಧ್ಯ? "ಪ್ರೀತಿ ಕುರುಡು" ಎನ್ನುತ್ತಾರಲ್ಲ..

6 comments:

 1. :) Nimma moral ginta BMTC li kelskolla nanna abhyasa nimgu idyala adu nange santhosha aythu...

  anyways preeti kurdu bidi adru bagge no comments! :D

  ReplyDelete
 2. Ramya, nange 'kelskollo' abhyasa khandita illa. Aadre, avnu pakkadalli kutkondu higella matadiddu nan kivige bithu ashte :o)

  And, preeti kurdu andra? illa illa.. it just sees what matters, ashte :D

  ReplyDelete
 3. ಅಬ್ಬ! ಆ ಮನುಷ್ಯ ಶಾಶ್ವತವಾಗಿ ಬಾಯ್ ಹೇಳದಿದ್ರೆ ಸಾಕು.. ನನ್ನ ಅನಿಸಿಕೆಯೂ ಅದೇ.. ಪ್ರೀತಿಯನ್ನ ಅಸ್ತ್ರವಾಗಿ ಬಳಸಿ ಪ್ರೀತಿಸಿದ ಹೃದಯಕ್ಕೆ ನೋವು ಕೊಡಬಾರದು.. ಪ್ರೀತಿ 'ಜಾಣ ಕುರುಡು' ಅಷ್ಟೇ.. ಆ ಮನುಷ್ಯ ಒಳ್ಳೆಯವನು.. ಅದ್ಯೇನನ್ನು ಬಿಡಿಸಿಕೊದಬೇಕೋ.. ಅದನ್ನು ಕೊಡುತ್ತಾನೆ ಎಂದು ನಂಬು ಎನುತ್ತಿದೆ ಮನಸು..

  ಸಲಹೆ:
  -ಪಿಂಕ್ ಬಣ್ಣ ಸ್ವಲ್ಪ ಕಣ್ಣಿಗೆ ಹೊಡೆದಂತೆ ಆಗುತ್ತದೆ ಮತ್ತೆ ಸ್ಪಷ್ಟವಾಗಿ ಅಕ್ಷರಗಳು ಕಾಣುವುದಿಲ್ಲ.. ಬೇರೆ ಬಣ್ಣ ಬಳಕೆ ಚಂದ ಕಾಣತ್ತ ನೋಡಿ..
  Currency currenty Typo ಆಗಿದೆ ನೋಡಿ..

  ReplyDelete
 4. ಸಹನಾ ಅವರೇ, pink ಬಣ್ಣ ಉಪಯೋಗಿಸಿರುವುದು ಆ ಕಡೆಯ ಧ್ವನಿ ಹುಡುಗಿಯದ್ದು ಎಂಬ ಸೂಚಕವಾಗಿ. ಆದಾಗ್ಯೂ, ನಿಮ್ಮ ಅನಿಸಿಕೆಯನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ಖಂಡಿತಾ ಗಮನಿಸುತ್ತೇನೆ. ಹಾಗೂ, typo ಸರಿಪಡಿಸಿದ್ದೇನೆ; ಧನ್ಯವಾದಗಳು :o)

  ReplyDelete
 5. Haha! Amazing! Seriously, love is never an instrument, because one cannot and should not play with it! :-)
  Above all, love is not only blind, but deaf and 'dumb' too, for the kind of guys you have mentioned in your post :-)

  ReplyDelete
 6. Divya, very true; Love isn't an instrument to play with. It's just 'divine' :o)

  ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!