ಬೆಂಗಳೂರಿನ ಸುಂದರ ಸಂಜೆ, ಸಮಯ 5:30 ರ ಸುಮಾರು. ಬನಶಂಕರಿಯಲ್ಲಿನ ಹೂವಿನ ಮಾರುಕಟ್ಟೆ ಎಂದಿನಂತೆ ಜನರಿಂದ ತುಂಬಿಹೋಗಿತ್ತು. ತಮ್ಮ ಗುರುವಾರದ ದಿನಚರಿಯಂತೆ, ಇಂದೂ ಸಹ ಸರಿಯಾದ ಸಮಯಕ್ಕೆ ಅದೇ ಹೂವಿನ ಅಂಗಡಿಯಲ್ಲಿ ಹಾಜರಿದ್ದರು ವೆಂಕಟರಾಯರು. ರಾಯರದ್ದು ಎಂಭತ್ತರ ಆಸು-ಪಾಸಿನ ಜೀವ, ನಿವೃತ್ತಿಯ ನಂತರವೂ ಶಿಸ್ತಿನ ಜೀವನ ನಡೆಸುತ್ತಿರುವ ಸರ್ಕಾರಿ ನೌಕರ. ಸಂಬಳದ ದಿನಗಳಿಂದ ಪಿಂಚಿಣಿಯವರೆಗೂ ಲೆಕ್ಕಾಚಾರದ ಮನುಷ್ಯ. ಆರಕ್ಕೇರದ, ಮೂರಕ್ಕಿಳಿಯದ ಇವರ ತುಂಬು ಬದುಕಿನ ಒಡನಾಡಿ ಲಕ್ಷಮ್ಮ, ರಾಯರ ಅರ್ಧಾಂಗಿ.
ಲಕ್ಷ್ಮಮ್ಮನವರದ್ದು ಜೀವನದುದ್ದಕ್ಕೂ ಎರಡೇ ಕಾಯಕ; ಒಂದು ಪತಿಯಾರಾಧನೆ, ಮತ್ತೊಂದು ದೈವಾರಾಧನೆ. ಮದುವೆಯಾದ ಹೊಸತರಲ್ಲಿ ಮಕ್ಕಳಿಲ್ಲದ ಕಾರಣ ದೇವರ ಮೊರೆಹೋದ ಲಕ್ಷ್ಮಮ್ಮನವರು ಹಿಂದಕ್ಕೆ ತಿರುಗಿ ನೋಡಿದ್ದಿಲ್ಲ. ಮಕ್ಕಳಿಲ್ಲದ ಕೊರಗನ್ನು ಪತಿ-ದೈವನ ಪರಮ ಭಕ್ತಿಯ ಆರಾಧನೆಯಲ್ಲಿ ಮರೆಯುವುದು ಇಲ್ಲಿಗೆ ಚೆನ್ನಾಗಿ ಅಭ್ಯಾಸವಾಗಿಹೋಗಿರುವ ಆ ತಾಯಿಯು, ತಾಯಿಯಾಗದೇ ಹೋದದ್ದು ಒಂದು ವಿಷಾಧ.
'ಬನ್ನಿ ರಾಯ್ರೆ, ಕಾಫಿ ಆಯ್ತಾ?' ಹೂವಿನಂಗಡಿಯವನು ರಾಯರನ್ನು ಎಂದಿನಂತೆ ಉಪಚರಿಸುತ್ತಾ, ಎರಡು ಸುಗಂಧರಾಜ ಹಾರಗಳನ್ನು, ಐದು ಮೊಳ ಮಲ್ಲಿಗೆ ಮತ್ತು ಕಾಲು ಕೇಜಿ ಬಿಡಿ ಸೇವಂತಿಗೆಯನ್ನು ಕಟ್ಟಿಟ್ಟ. 'ಆಯ್ತಪ್ಪ, ನಿಂಗೆ ಕಾಫಿ ಕುಡ್ಯೋಕೂ ಪುರುಸೊತ್ತೇ ಇಲ್ವೇನೋ?' ರಾಯರು ಹೂವಿನ ಕಟ್ಟನ್ನು ತೆಗೆದುಕೊಳ್ಳುತ್ತಾ ಅಂಗಡಿಯವನನ್ನು ವಿಚಾರಿಸಿದರು. 'ಇಲ್ಲಾ ರಾಯ್ರೆ, ಜನ ವಿಪರೀತ. ನಾಳೆ ಶುಕ್ರವಾರ ನೋಡಿ.. ಚಿಲ್ರೆ ಇಲ್ವಾ?'. ಇಲ್ಲವೆಂಬಂತೆ ರಾಯರು ತಲೆಯಾಡಿಸಲು, 'ಹಾರಗಳಿಗೆ ನೀವೇ ಖಾಯಂ ಗಿರಾಕಿ ನೋಡಿ ಸಾರ್' ಎನ್ನುತ್ತಾ ತನ್ನಲ್ಲಿದ್ದ ಚಿಲ್ಲರೆಗಳನ್ನು ಜೋಡಿಸಿ ರಾಯರಿಗೆ ಕೊಟ್ಟ. 'ಶುಕ್ರವಾರ ದೇವರಿಗೆ ಹಾರ ಹಾಕಿ ಭಕ್ತಿಯಿಂದ ಪೂಜೆ ಮಾಡಿದ್ರೆನೇ ನನ್ನಾಕೆಗೆ ಸಮಾಧಾನ' ಎಂದು ಹೇಳಿ, ಧನ್ಯವಾದಗಳೆಂಬಂತೆ ಕೈಸನ್ನೆ ಮಾಡಿದ ರಾಯರು ಮನೆಯ ದಾರಿ ಹಿಡಿದರು. ಅಂಗಡಿಯಾತ ನಗುತ್ತಾ ಬೀಳ್ಕೊಟ್ಟ.
ರಾಯರ ಕಣ್ಮುಂದೆಯೇ ಬೆಂಗಳೂರು ಬೃಹದಾಕಾರಕ್ಕೆ ಬೆಳೆದಿತ್ತು. ತೊಂಭತ್ತರ ದಶಕದಲ್ಲಿ ಬಿ.ಡಿ.ಎ. ಇಂದ ದೊರೆತ ನಿವೇಶನದಲ್ಲಿ ಹೆಚ್.ಡಿ.ಎಪ್ಹ್.ಸಿ. ಸಾಲ ಪಡೆದು ರಾಯರು ಚಿಕ್ಕದೊಂದು ಮನೆ ಕಟ್ಟಿಸಿದಾಗಿನ ಬೆಂಗಳೂರೇ ಬೇರೆ. ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಬೆಂಗಳೂರಿನ ವೇಗಕ್ಕೆ ಸಾಟಿ ಎಂಬಂತೆ ತಲೆ ಎತ್ತುತ್ತಿರುವ 'ನಮ್ಮ ಮೆಟ್ರೋ' ಕಾಮಗಾರಿಯ ಅಡಚಣೆಗಳ ನಡುವೆ ನಿಧಾನವಾಗಿ ಹಾದು ಬಂದ ರಾಯರು ಬಿ.ಎಮ್.ಟಿ.ಸಿ. ಬಸ್ ಏರಿದರು. 'ಕೋಣನಕುಂಟೆಗೆ ಒಂದು ಟಿಕೆಟ್, ಸೀನಿಯರ್ ಸಿಟಿಜನ್ ಕಾರ್ಡ್ ಇದೆ' ಎಂದ ರಾಯರ ಕೈಗೆ ವಿನಾಯಿತಿ ದರದ ಚೀಟಿ ಕೊಟ್ಟ ಬಸ್ಸಿನ ನಿರ್ವಾಹಕ ಕೊಪದಿಂದಲೆಂಬಂತೆ ಅವರನ್ನು 'ಒಳಗೆ ಹೋಗಿ' ಎನ್ನುತ್ತಾ ಕಿಕ್ಕಿರಿದಿದ್ದ ಜನರ ಮಧ್ಯೆ ದೂಡಿದ. ಯುವಕನೊಬ್ಬ ಹಿರಿಯ ನಾಗರೀಕರಿಗೆ ಮೀಸಲಿಟ್ಟ ಆಸನವನ್ನು ರಾಯರಿಗೆ ಬಿಟ್ಟುಕೊಟ್ಟ. 'ಮುಂದಿನ ನಿಲ್ದಾಣ ಸಾರಕ್ಕಿ; Next stop is Sarakki', ಬಸ್ಸಿನಲ್ಲಿ ಪಯಣ ಸಾಗಿತ್ತು.
ಮುಂದಿನ ಆಸನದಲ್ಲಿ ಬಿಡಿ ಹೂಗಳನ್ನು ಕಟ್ಟುತ್ತಾ ಕುಳಿತು ಮಾತನಾಡುತ್ತಿದ್ದ ಮಹಿಳೆಯರಿಬ್ಬರ ಮಾತುಗಳು ರಾಯರ ಕಿವಿಗೆ ಬಿಳುತ್ತಿದ್ದವು. 'ಏನಮ್ಮಾ, ಇವತ್ತು ಊವ ಮಾತಾಡ್ಸಕಾಗಲ್ಲ'... 'ಇಂಗಾದ್ರೆ ನಾವು ವ್ಯಾಪಾರ ಮಾಡ್ದಂಗೆನೆ. ಅಸ್ಲೂ ಗಿಟ್ಟಲ್ಲ'.. 'ನೀನು ಹಾರ ಆಕಲ್ವಾ?'... 'ಆಕ್ತಿನಿ, ಆದ್ರೆ ಬನಶಂಕ್ರಿ ಮಾರ್ಕೆಟ್ಟಲ್ಲಿ ಹಾರ ತಗಳಂಗಿಲ್ಲ.. ಮಾರ್ಚರಿಯಿಂದ ಸೆಕೆಂಡ್ಸ್ ಬತ್ತವಮ್ಮಾ'... ಆ ಮಾತುಗಳು ಕಿವಿಗೆ ಬೀಳುತ್ತಿದ್ದಂತೆಯೇ ರಾಯರು ಕುಳಿತಲ್ಲೇ ಕುಸಿದುಹೋದರು. ಹಿಡಿದಿದ್ದ ಹೂವಿನ ಹಾರದ ಪೊಟ್ಟಣ ಅವರ ಕೈಜಾರಿ ಕೆಳಗೆ ಬಿದ್ದಿತ್ತು; ವೆಂಕಟರಾಯರ ಕಿವಿಯ ತುಂಬೆಲ್ಲಾ ಲಕ್ಷ್ಮಮ್ಮನವರ ಸ್ತೋತ್ರ-ಪಠಣ, ಪೂಜಾ ಘಂಟನಾದಗಳ ಸದ್ದು ಮೊಳಗುತ್ತಿತ್ತು..
ಇದೇನಿದು ಪ್ರಶಾಂತ, ನಿಮ್ಮ tag ಗಳು? ಕಾಲ್ಪನಿಕ ಮತ್ತು ವಾಸ್ತವ ಎರಡೂ ಇದೆ? ಸಮಸ್ಯೆ ವಾಸ್ತವ, ಕಥೆ ಕಾಲ್ಪನಿಕ ಅಂತನಾ? ಬಹಳ ಚನ್ನಾಗಿ ಪದಗಳನ್ನು ಪೋಣಿಸಿದ್ದೀರ.. ಕಥೆಯ flow ಬಹಳಾನೇ smooth ಇದೆ..
ReplyDeleteಹೌದು, ಕಥೆ ಕಾಲ್ಪನಿಕ; ಆದರೆ ಅದರ ಹುರುಳು ವಾಸ್ತವ. ಈ ವಿಷಯವು ನನ್ನ ಗಮನಕ್ಕೆ ಬಂದಾಗ, ಅದನ್ನು ಹೇಗಾದರೂ ಸಮಾಜದ ಅರಿವಿಗೆ ತರಬೇಕು ಎನ್ನಿಸಿತು. ಆದ್ದರಿಂದ ಈ ಪ್ರಯತ್ನ. ವಾಸ್ತವವನ್ನು ಬಿಚ್ಚಿಡಲು ಕಾಲ್ಪನಿಕವಾದ ಒಂದು ಕಥೆಯನ್ನು ಹೆಣೆದು ಸಾಥನವಾಗಿಸಿಕೊಂಡಿದ್ದೇನೆ ಅಷ್ಟೇ.
ReplyDeleteಸಹನಾ ಅವರೆ, ಬರವಣಿಗೆಯ ಅಂತರಾರ್ಥವು ಅದಕ್ಕೆ ನೀಡಿರುವ ಹಣೆಪಟ್ಟಿಗಳಲ್ಲಿರುತ್ತದೆ. ನೀವು ಇದನ್ನು ಬಹಳ ಚೆನ್ನಾಗಿ ಗಮನಿಸಿ, ಅರಿತುಕೊಂಡಿದ್ದೀರಿ. ಬರವಣಿಗೆಯ ಬಗೆಗೆ ನೀವಾಡಿರುವ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದ :0)
Witty ಹಣೆಪಟ್ಟಿಯನ್ನು ಗಮನಿಸಿದೆ.. ಪದಗಳ ಜೊತೆ ಆಟ ಆಡಿ ಏನು ತಿಳಿಸಬೇಕೋ ಅದನ್ನು ತಿಳಿಸಿದರೆ ಅದರ kick ಏ ಬೇರೆ..
ReplyDeleteಹಾಗೆಯೇ, ಪದಗಳ ಬಳಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದರ kick ಸಹ ಬೇರೆಯೇ ಆಗಿರುತ್ತದೆ :D
ReplyDeleteHummm......Cannot read a bit(Lang prob) :(
ReplyDeletePrashanth..I think it might be better if u use some translate widget so that we(who cannot undrstnd lang) can translate this and read..or els..hehe u should take pain to make me learn kannada :) ;) choose one! ;)
Gowthami, for me, it wouldn't be a pain teaching Kannada. Even my wife can't read Kannada and every time I write a post in Kannada, it should be read out and translated to English. Both my wife and you can start attending my Kannada classes.
ReplyDeleteThanks for your interest on Kannada writeup :o)
haha nice photo..nice post..
ReplyDeleteNimmava,
Raghu
Raghu, welcome to my Blog :o)
ReplyDeleteI just picked up two different images and merged them together. Thanks for your compliments about the picture and post :o)
I remember a similar incident worst than this!
ReplyDeletewe college friends had gone out for junk foods, Girls pestered boys for GOLA (ICE pieces dipped in different flavors) Boys got but dint buy for them self once we completed it they asked us if it was good when we said yes very tasty!!!
they told these ICE are from Cold Storage!!! and that to from Mortuary :( :( can never forget it!!!
Ramya, true! Even we always order for 'WITHOUT ICE' when having juice in any eatery. We never know, from where the ICE actually came from?!
ReplyDeleteIt isn't the blame of any particular vendor, but a curse on the entire system. With such things, don't ever know where we are heading towards..??!!
Best ever seen.
ReplyDelete