Saturday, May 29, 2010

Back to School

Summer holidays are all over and the Schools are all open!!

Atmosphere was very calm these days since our neighbour kids were been to native for summer holidays. When they are at Home, it seems to me like better they go out so that I can concentrate on something what I do. But, for the past couple of months I have been missing these kids too very much. They do not stay mum at Home, doing some or the other noise and what irritates me a lot is that they get their friends to play volley ball or foot ball in the street at around 9pm.. I just wonder what makes them to play at that time! Lot many times in the past two months I literally was waiting to hear them playing at night.. none of them turned up actually.

Whenever seeing kids, I always want to be like them. If it was possible, I would better be a school-going kid forever! Plucking flowers in the garden, scribbling on the walls, playing in the mud, forgetting to write homework, losing pencil and eraser, breaking scales, tearing pages in the book, crying in want of a chocolate - all these things I miss doing now. Sometimes I really get frustrated, "is there any one good reason for that we got to grow with time?".

Schools seem to have been reopened from last week, I see children going to school in the morning. Its a pleasure watching them - new uniform, new bag (not heavy, at least now..), new lunch basket, new water bottle, new pair of shoes, some of them wearing pant instead of half-pant (hopefully they got to higher schooling), trimmed hairs.. they totally look new and afresh. Most of the times they walk to school telling their friends how they spent their holidays, great adventures they did, new toys they bought, new games they played, etc., etc.. Every child has its own story to tell, usually animated when describing. Seeing them, I did remember my school days - never I went to school with so much of enthusiasm as what children show these days. Even today I remember the way I ran out of school on day one and reached Mom.. she was walking back Home at a fair distance after dropping me. Following summer holidays, it was a pain for me to get back to school and study. Many a times I was thinking "why not my School be always closed?", which never happened and if it ever happened, I would have not been what am today!

It is practically impossible for me to get back my childhood days, me have now grown up - I regret. There is no any better way for me than watching kids and getting involved in their happiness. That way, at least for sometime I feel "childish" - otherwise what I avoid to be.

I extend every kid a warm welcome back to School and wish all of them have a very very successful academic year ahead. Happy Schooling!

Thursday, May 27, 2010

Hectic ಪ್ರಯಾಣ..

ಪ್ರತಿ ಸೋಮವಾರನೂ ಹೀಗೇನೆ, ಒಂಥರಾ "Monday Morning Sickness" ಅನ್ನೋಹಾಗೆ ನನ್ನ ಕಥೆ. ಎಷ್ಟೋ ಸರ್ತಿ try ಮಾಡಿದ್ದೀನಿ ಸೋಮವಾರ ಬೇಗ ಎದ್ದು ready ಆಗ್ಬೇಕು ಅಂತ, but ಸಾಧ್ಯ ಆಗಿಲ್ಲ. ಆ ದಿನ 17-05-2010, again Monday! As usual late ಆಗಿತ್ತು. Urgent urgent ನಲ್ಲೇ ready ಆಗಿ ಇನ್ನೇನು ಹೊರಡ್ಬೇಕು, shoe ಹಾಕೊಳೋಕೆ ಹೋದಾಗ ತುಂಬಾ ದಿನದಿಂದ Woodlands ಹಕೊಂಡಿಲ್ಲ ಅಂತ ಅದನ್ನು ತಗೊಂಡು first right leg ಹಾಕ್ದೆ. ಒಳಗಡೆ ಏನೋ soft ಆಗಿರೋ ಹಾಗೆ ಅನ್ಸಿ, shoe ತೆಗೆದೆ. ಏನದು ಅಂತ ನೋಡೋಕೆ ಮುಂಚೇನೆ ಒಂದು ಹಲ್ಲಿ shoe ಇಂದ ನನ್ನ left leg ಮೇಲೆ ಜಿಗಿದು ಹೋಗಿತ್ತು. ಅದು ಸ್ವಲ್ಪ ದೂರ ಹೋದ್ಮೇಲೆ ನೋಡಿದೆ, black color ಇತ್ತು. Normal ಆಗಿ  ನನ್ನ room ನಲ್ಲಿ ಇರೋ ಹಲ್ಲಿ light brown color ಇರ್ತಿತ್ತು. Mostly, ನಾನು ತುಳಿದಿದ್ರಿಂದ excite ಆಗಿತ್ತು ಅನ್ಸುತ್ತೆ. ಸದ್ಯ ಬದುಕಿತ್ತಲ್ಲ ಅಷ್ಟೇ ಸಾಕು ಅಂತ ನಾನು shoe ಹಾಕೊಂಡು ಹೊರಟೆ.

20-05-2010
ಮದ್ಯಾಹ್ನ 12:30 ಕ್ಕೆ office ಕೆಲಸದ್ಮೇಲೆ ಮಡಿಕೇರಿಗೆ ಹೊರಟು, ರಾತ್ರಿ 9:00 ಗಂಟೆಗೆ ತಲುಪಿದ್ವಿ. ಮತ್ತೆ ಅಲ್ಲಿಂದ 11:30 (ರಾತ್ರಿ) ಕ್ಕೆ ಹೊರಟು ಬೆಳಿಗ್ಗೆ 6:00 ಗಂಟೆಗೆ ವಾಪಾಸ್ ಬಂದು ಬೆಂಗಳೂರು ಸೇರಿದ್ದು.

22-05-2010
ಬೆಳಿಗ್ಗೆ 9:00 ಗಂಟೆಗೆ ಮತ್ತೆ office ಕೆಲಸದ್ಮೇಲೆ ಮಡಿಕೇರಿಗೆ ಹೊರಟು, ಮದ್ಯಾಹ್ನ 3:00 ಕ್ಕೆ ತಲುಪಿ, ಮತ್ತೆ ಅಲ್ಲಿಂದ 5:00 ಗಂಟೆಗೆ  ಹೊರಟು ರಾತ್ರಿ 1:00 ಗಂಟೆಗೆ ವಾಪಾಸ್ ಬಂದ್ವಿ.

23-05-2010
ರಾಮನಗರದಲ್ಲಿ ನಮ್ಮ ಮಾವನ ಮಗನ್ದು ಮದುವೆ ಇತ್ತು, ಬೆಳಿಗ್ಗೆ 10:00 ಕ್ಕೆ  ಹೊರಟು ಮದ್ಯಾಹ್ನ 2:00 ಗಂಟೆಗೆ return ಬಂದಿದ್ದು.

24-05-2010
ಬೆಳಿಗ್ಗೆ 5:00 ಗಂಟೆಗೆ ಮತ್ತೆ office ಕೆಲಸದ್ಮೇಲೆ ಮಡಿಕೇರಿಗೆ ಹೋಗಿ ವಾಪಸ್ಸು ಬೆಂಗಳೂರಿಗೆ ಬಂದಾಗ ರಾತ್ರಿ 11:30.

Next day, Tuesday complete rest ನಲ್ಲಿ ಇದ್ದೆ. Room ನಲ್ಲಿ ಮಲಗಿದ್ದಾಗ ಏನೋ ನೆನ್ಪಾಯ್ತು. ಎದ್ದು ಹೋಗಿ cupboard ನಲ್ಲಿ ಇಟ್ಟಿದ್ದ pocket calender ತಗೊಂಡು ಬಂದು 2-3 pages flip ಮಾಡಿದ್ಮೇಲೆ ಕಾಣಿಸಿದ್ದು: "ಹಲ್ಲಿ ಬಿದ್ದ ಶುಭಾಶುಭ ಫಲಗಳು". ನಾನು ಅದನ್ನೇ ಹುಡುಕ್ತಾ ಇದ್ದೆ. ಸರಿ, ಓದೋಕೆ ಶುರು ಮಾಡಿದೆ: "ತಲೆಯ ಮೇಲೆ ಬಿದ್ದರೆ.. , ಹಣೆಯ ಮೇಲೆ ಬಿದ್ದರೆ.., " ಹೀಗೆ ನಮ್ಮ body ಮೇಲೆ ಎಲ್ಲೇ ಬಿದ್ರೂ ಕೂಡ ಒನ್ನೂಂದು prediction ಕೊಟ್ಟಿದ್ರು. ಹಾಗೆ ಓದ್ಕೊಂಡು ಕೊನೇಗೆ ಬಂದಾಗ ಕಾಣಿಸ್ತು: "ಕಾಲುಗಳ ಮೇಲೆ ಬಿದ್ದರೆ ಪ್ರಯಾಣ" - ಒಹ್, ಹೀಗೆ ಸಮಾಚಾರ! ನನ್ನ ಈ hectic traveling ಗೆ reason ಸಿಕ್ಕಿತ್ತು. ಆದರೆ, pocket calender ನಲ್ಲಿ ಕೊಟ್ಟಿರೋ prediction ಈ level ಗೆ  ನಿಜ ಆಗುತ್ತೆ ಅಂತ ಖಂಡಿತಾ ನಾನು predict ಮಾಡಿರ್ಲಿಲ್ಲ!! ಇದು ಕಾಕತಾಳೀಯ ಅನ್ಸಿದ್ರೂ, ನಿಜ ಹೌದು. ಇನ್ಮೇಲೆ shoe ಹಾಕೊಳ್ವಾಗ ಎರಡೆರಡು ಸರ್ತಿ ಕುಟ್ಟಿ check ಮಾಡಿ confirm ಮಾಡ್ಕೊಂಡು ಹಾಕೋಬೇಕು ಅಂತ decide ಮಾಡಿದ್ದೀನಿ. ಏನಂತಿರ?

Tuesday, May 25, 2010

ಕರೆಯೋಲೆಯ ಕ್ರಿಯಾತ್ಮಕ ವಿನ್ಯಾಸ

"Great people don't do new things; But they often do the same thing in a different way"

ಎಲ್ಲೋ ಓದಿದ ನೆನಪು. ಅದು ಇಂದು ಮತ್ತೆ ನೆನಪಾಗಿದ್ದು ನನ್ನ ಆತ್ಮಿಯ ಸ್ನೇಹಿತನ ಕ್ರಿಯಾತ್ಮಕತೆಯಿಂದ. ನಾನು ಮಾತನಾಡುತ್ತಿರುವುದು ನನ್ನ ಸ್ನೇಹಿತನಾದ ನಾಗೇಂದ್ರ ಭಾರದ್ವಾಜ್ ಬಗ್ಗೆ. ನಿಜ ಹೇಳಬೇಕೆಂದರೆ, ಈತನಿಗೆ ಕನ್ನಡ ಹಾಗೂ ಚಿತ್ರರಂಗದ ಮೇಲೆ ಅದಮ್ಯ ಪ್ರೀತಿ-ಅಭಿಮಾನ. ನಮ್ಮಿಬ್ಬರ ಭೇಟಿಯಾದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಇವನ ಕನ್ನಡ ಹಾಗೂ ಸಿನಿಮ ಅಭಿಮಾನವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ, ಇಂದು ಈತ ನನ್ನನ್ನು ಮೂಕಮುಗ್ಧನಾಗಿಸಿದ್ದಾನೆ. ಕಾರಣ - ಅತ ತನ್ನ ಮದುವೆಯ ಆಮಂತ್ರಣವನ್ನು ವಿನ್ಯಾಸ ಮಾಡಿರುವ ರೀತಿ. ನನ್ನ ಭಾಷೆಗೆ ಅದನ್ನು ಸಾಕ್ಷಾತ್ ವರ್ಣಿಸುವ ಶಕ್ತಿ ಇಲ್ಲವೆಂದು ತೋರುತ್ತದೆ, ಅದ್ದರಿಂದ, ನೀವೇ ಅದನ್ನು ನೋಡಬೇಕು. ಇದು ನಿಮ್ಮಲ್ಲಿ ನನ್ನ ಸವಿನಯ ಕೋರಿಕೆಯೂ ಹೌದು.

http://www.youtube.com/watch?v=duFRYf6EPvw

ಭಗವಂತನು ಇವರ ದಾಂಪತ್ಯ ಜೀವನವನ್ನು ಇವರ ಮದುವೆಯ ಕರೆಯೋಲೆಯಂತೆಯೇ ಅತ್ಯಂತ ಸುಂದರವಾಗಿಸಲಿ ಎಂದು ಮನಸಾರ ಹಾರೈಸುತ್ತೇನೆ.

Sunday, May 23, 2010

ಅಂತರ್ಜಾಲದಲ್ಲಿ ಕನ್ನಡದ ಬಳಕೆ

ನಾನು ಕನ್ನಡದಲ್ಲಿ ಬ್ಲಾಗ್ ಬರೆಯಲು ಆರಂಭಿಸಿದಾಗ, ಕೆಲವು ಸ್ನೇಹಿತರು ನನಗೆ ಇ-ಮೇಲ್ ಮಾಡಿ "ಕನ್ನಡ ಅಕ್ಷರಗಳನ್ನು ಅಂತರ್ಜಾಲದಲ್ಲಿ ಬರೆಯುವುದು ಹೇಗೆ?" ಎಂದು ಕೇಳಿದರು. ಪ್ರತಿಯೊಬ್ಬರಿಗೂ ಇ-ಮೇಲ್ ಮಾಡುವ ಬದಲು, ಬ್ಲಾಗ್ ನಲ್ಲಿ ಇದರ ಬಗ್ಗೆ ಬರೆಯಬೇಕೆಂದು ತೀರ್ಮಾನಿಸಿದ್ದೇನೆ.

ಮೂಲಭೂತವಾಗಿ, ಗಣಕ ಯಂತ್ರವು ಕನ್ನಡ ಭಾಷೆಗೆ ಸಹಾಯ ಮಾಡಲು ಬೇಕಾದ ಸಾಧನಗಳನ್ನು ನಮ್ಮ ಗಣಕ ಯಂತ್ರದಲ್ಲಿ ಮೊದಲು ಸ್ಥಾಪಿಸಿರಬೇಕು. ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ Windows XP ಅಥವಾ Windows Vista ಉಪಯೋಗಿಸುತ್ತಿರುವುದರಿಂದ, ಅವುಗಳಲ್ಲಿ ಪ್ರಾಥಮಿಕವಾಗಿ ಕನ್ನಡ ಭಾಷೆಗೆ ಸಹಾಯ ಮಾಡುವ ಸಾಮರ್ಥ್ಯ ಇರುತ್ತದೆ. ಆದ್ದರಿಂದ, ಗಣಕ ಯಂತ್ರದಲ್ಲಿ ಕನ್ನಡ ಭಾಷೆಗೆ ಸಹಾಯವನ್ನು ಹೇಗೆ ಅನುಷ್ಠಾನಗೊಳಿಸಬೇಕೆಂಬುದರ ಬಗ್ಗೆ ಇಲ್ಲಿ ನಾನು ಹೇಳುವುದಿಲ್ಲ. ಯಾರಿಗಾದರೂ ಇದರ ಅವಶ್ಯಕತೆ ಇದ್ದರೆ ದಯಮಾಡಿ ತಿಳಿಸಿ, ಅದನ್ನೂ ಸಹ ಇಲ್ಲಿ ನಂತರ ವಿವರಿಸುತ್ತೇನೆ.

Google Transliteration
Google Transliteration ಸಾಧನದ ಸಹಾಯದಿಂದ ನಾವು ಆಂಗ್ಲ ಭಾಷೆಯನ್ನು ಹೊರೆತುಪಡಿಸಿ, ಹಲವು ಇತರೆ ಭಾಷೆಗಳಿಂದ ಅಂತರ್ಜಾಲದಲ್ಲಿ ಬರೆಯಲು ಸಾಧ್ಯವಿದೆ. ಎಂದಿನಂತೆ Google ನವರ ಈ ಸಾಧನವೂ ಸಹ ಉಚಿತವಾಗಿದೆ. ಈ ಸಾಧನವನ್ನು ಎರಡು ರೀತಿಯಲ್ಲಿ ಉಪಯೋಗಿಸಬಹುದು:
1. ಅಂತರ್ಜಾಲ ತಾಣದಿಂದ
2. ಗಣಕ ಯಂತ್ರದಲ್ಲಿ ಸ್ಥಾಪಿಕೊಳ್ಳುವುದರಿಂದ

ಅಂತರ್ಜಾಲ ತಾಣದಿಂದ
Google Transliteration ಸಾಧನವು http://www.google.com/transliterate ಇಲ್ಲಿ ಲಭ್ಯವಿದೆ. ನಾವು ನೇರವಾಗಿ ಕನ್ನಡ ಭಾಷೆಯಲ್ಲಿ ಬರೆಯಬೇಕಾದರೆ, http://www.google.com/transliterate/kannada ಇಲ್ಲಿಗೆ ಭೇಟಿ ಕೊಡಬೇಕು.

ಗಣಕ ಯಂತ್ರದಲ್ಲಿ ಸ್ಥಾಪಿಕೊಳ್ಳುವುದರಿಂದ
Google Transliteration ಸಾಧನವನ್ನು ನಮ್ಮ ಗಣಕ ಯಂತ್ರದಲ್ಲಿ ಸ್ಥಾಪಿಸಿಕೊಳ್ಳಲು http://www.google.com/ime/transliteration ಇಲ್ಲಿಗೆ ಭೇಟಿಕೊಟ್ಟು, 'Download Google IME' ಕೊಂಡಿಯ ಸಹಾಯದಿಂದ 'Installer' ಅನ್ನು ಉಳಿಸಿಕೊಳ್ಳಬೇಕು. ನಂತರ, ಅದನ್ನು ಹೇಗೆ ಸ್ಥಾಪಿಸಬೇಕು ಎಂಬುದನ್ನು ಇಲ್ಲಿ ಓದಬಹುದು - http://www.google.com/ime/transliteration/help.html#installation.

ಕನ್ನಡ ಅಕ್ಷರಗಳನ್ನು ಬರೆಯುವುದು ಹೇಗೆ?
Google Transliteration ಅನ್ನು ಉಪಯೋಗಿಸಿಕೊಂಡು ಕನ್ನಡದಲ್ಲಿ ಬರೆಯುವುದು ಬಹಳ ಸುಲಭ. ನಾವು ಏನನ್ನು ಕನ್ನಡದಲ್ಲಿ ಬರೆಯಬೇಕೋ ಅದನ್ನೂ ಆಂಗ್ಲ ಅಕ್ಷರಗಳಲ್ಲಿ ಬರೆದು ನಂತರ ಒಂದು ಬಿಳಿಯ ಜಾಗ (white space) ವನ್ನು ಕೊಟ್ಟರೆ, ತಂತಾನೇ ಆ ಅಕ್ಷರವನ್ನು ಕನ್ನಡಕ್ಕೆ ಪರಿವರ್ತಿಸುತ್ತದೆ. ಕೆಳಗೆ ಕೆಲವು ಉದಾಹರಣೆಯನ್ನು ನೋಡಿ:
1. kannada => ಕನ್ನಡ
2. aangla => ಆಂಗ್ಲ
3. nanna => ನನ್ನ

ಕೆಲವೊಮ್ಮೆ ಕನ್ನಡಕ್ಕೆ ಅಕ್ಷರ ಪರಿವರ್ತನೆಗೊಂಡಾಗ, ಅದರಲ್ಲಿ ಕೆಲವೊಂದು ವ್ಯಾಕರಣ ತಪ್ಪಾಗಿರುವ ಸಾಧ್ಯತೆ ಇರುತ್ತದೆ. 'ಕೊಲ್ಲು' ಬರೆಯಲು 'kollu' ಎಂದು ನಮೂದಿಸಿದರೆ, ಆ ಅಕ್ಷರವು 'ಕೊಳ್ಳು' ಗೆ ಪರಿವರ್ತನೆಗೊಳ್ಳುತ್ತದೆ. ಇದನ್ನು ಸರಿಪಡಿಸಲು 'ಕೊಳ್ಳು' ಅಕ್ಷರದ ಕೊನೆಯಲ್ಲಿ 'cursor' ಇಟ್ಟು, 'Back Space' ಕೀಲಿಯನ್ನು ಒಂದು ಬಾರಿ ಒತ್ತಿದರೆ ಆ ಪದಕ್ಕೆ ಹತ್ತಿರವಾದ ಇನ್ನಿತರೆ ಪದಗಳು ಮೂಡುತ್ತವೆ; ಅವುಗಳಲ್ಲಿ ನಮಗೆ ಬೇಕಾದ ಪದವನ್ನು ಆಯ್ಕೆ ಮಾಡಿ ಉಪಯೋಗಿಸಿಕೊಳ್ಳಬಹುದು.

ಬದಲಾಗಿ, ನೀವು ಈಗಾಗಲೇ ಕನ್ನಡವನ್ನು 'ಬರಹ' ಬಳಸಿ ಬರೆಯಲು ಶಕ್ತರಿದ್ದರೆ, ಅದನ್ನೂ ಸಹ Google Transliteration ನಲ್ಲಿ ಬಳಸಬಹುದು. ಉದಾಹರಣೆಯನ್ನು ನೋಡಿ:
1. kannaDa => ಕನ್ನಡ
2. sAmarthya => ಸಾಮರ್ಥ್ಯ
3. rOga => ರೋಗ

GMail ನಲ್ಲಿ Google Transliteration
GMail ಮೂಲಕ ಕನ್ನಡದಲ್ಲಿ ಇ-ಮೇಲ್ ಬರೆಯಬೇಕಾದರೆ, ಮೊದಲಿಗೆ ನಿಮ್ಮ GMail ನಲ್ಲಿ Google Transliteration ಅನ್ನು ಶಕ್ತಗೊಲಿಸಬೇಕು. ಇದಕ್ಕೆ ನೀವು ನಿಮ್ಮ GMail ಖಾತೆಯಲ್ಲಿ 'Settings => General' ಗೆ ಹೋಗಿ, ಅಲ್ಲಿ 'Language' ಪಕ್ಕ 'Gmail display language' ನಲ್ಲಿ 'ಕನ್ನಡ' ಆಯ್ಕೆ ನಾಡಿ, ನಂತರ 'Enable Transliteration' ಆಯ್ಕೆ ಮಾಡಿ, 'Default transliteration language' ಅನ್ನು 'ಕನ್ನಡ' ಗೊಳಿಸಿದ ನಂತರ 'Save Changes' ಗುಂಡಿಯನ್ನು ಒತ್ತಿ.

Blogger ನಲ್ಲಿ Google Transliteration
Blogger ನಲ್ಲಿ 'Dashboard => Settings => Basic' ಪುಟದಲ್ಲಿ ಕೊನೆಯದಾಗಿ 'Enable transliteration?' ಎಂಬುವ ಕಡೆ 'Enable' ಹಾಗು 'ಕನ್ನಡ' ಆಯ್ಕೆ ಮಾಡಿ 'SAVE SETTINGS' ಗುಂಡಿಯನ್ನು ಒತ್ತಿ. Blogger ನಲ್ಲಿ ಕನ್ನಡದ ಬಳಕೆಯ ಬಗ್ಗೆ ಬರೆದಿರುವ ನನ್ನ ಈ ಲೇಖನ ಓದಿ.

ಅಂತರ್ಜಾಲದಲ್ಲಿ ಎಲ್ಲಿಯಾದರೂ ಕನ್ನಡದಲ್ಲಿ ಬರೆಯಬೇಕಾದರೆ, ಮೊದಲು Google Transliteration ನಲ್ಲಿ ಬರೆದು, ಅದನ್ನು ನಕಲು ಮಾಡಿ ಎಲ್ಲಿ ಬೇಕೊ ಅಲ್ಲಿ ಅಂಟಿಸಿದರೆ ಆಯಿತು.

ಇದರ ಬಗ್ಗೆ ಇನ್ನೇನಾದರೂ ಮಾಹಿತಿ ಬೇಕಿದ್ದ ಪಕ್ಷದಲ್ಲಿ, ದಯಮಾಡಿ ಕೇಳಿರಿ. ನನಗೆ ತಿಳಿಯದಿದ್ದರೂ ಸಹ, ತಿಳಿದವರನ್ನು ವಿಚಾರಿಸಿ ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

Friday, May 21, 2010

'ನೈಸ್ ರಸ್ತೆ'ಯ nice ವಿವಾದ

'ನೈಸ್ ಕಾರಿಡಾರ್ ಯೋಜನೆ'ಯು ಬೇರೆ ಬೇರೆ ಕಾರಣಗಳಿಂದ ಸುದ್ದಿಯಲ್ಲಿದೆ. ನಿನ್ನೆ, ಅಂದರೆ 20 -05 -2010 ರಂದು ಇದೇ ನೈಸ್ ರಸ್ತೆಯಲ್ಲಿ ಪ್ರಯಾಣ ಮಾಡಬೇಕಾದ ಪ್ರಮೇಯ ಒದಗಿ ಬಂತು. ನೈಸ್ ರಸ್ತೆಯಲ್ಲಿ ನಾನು ಸಂಚರಿಸುತ್ತಿರುವುದು ಇದು ಮೊದಲನೆಯ ಬಾರಿಯೇನಲ್ಲ, ಸ್ವಂತ ವಾಹನದಲ್ಲಿ ಹಲವಾರು ಬಾರಿ ಓಡಾಡಿದ್ದೇನೆ. ನಿನ್ನೆ, ಕಛೇರಿ ಕೆಲಸದ ಮೇಲೆ ಮೈಸೂರಿನ ಕಡೆಗೆ ಪ್ರಯಾಣಿಸುತ್ತಿದ್ದರಿಂದ ಸರ್ಕಾರಿ ವಾಹನದಲ್ಲೇ ಹೊರಟಿದ್ದೆ. ನನಗೆ ತಿಳಿದ ಮಟ್ಟಿಗೆ ದೇಶದ ಯಾವುದೇ ಹೆದ್ದಾರಿ/ಕಾರಿಡಾರ್ ರಸ್ತೆಗಳಲ್ಲಿ ಸಂಚರಿಸುವಾಗ ಸರ್ಕಾರಿ ವಾಹನಗಳಿಗೆ TOLL ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ, ನಿನ್ನೆ ನನಗೆ ಆದ ಅನುಭವವೇ ಬೇರೆ:
ಸರಿ ಸುಮಾರು ಮಧ್ಯಾಹ್ನ 1 ಗಂಟೆ, ಕಛೇರಿಯ ವಾಹನದಲ್ಲಿ ನಾವು ನೈಸ್ ರಸ್ತೆಯನ್ನು ನೆಲಮಂಗಲ ಕಡೆಯಿಂದ ಪ್ರವೆಶಿಸಿದ್ದೆವು. ಕಛೇರಿ ಕೆಲಸವಾದ್ದರಿಂದ, ಕೆಲವು ದಾಖಲಾತಿಗಳನ್ನು ತಿರುವಿಹಾಕುತ್ತಾ ಕುಳಿತಿದ್ದೆ. TOLL BOOTH ನಲ್ಲಿದ್ದ ವ್ಯಕ್ತಿ ನಮ್ಮ ಚಾಲಕರಿಗೆ ಹಣ ಪಾವತಿಸಿ ಎನ್ನುತ್ತಿದ್ದ. ಇದು ನನಗೆ ಮಾತ್ರವಲ್ಲ, ನಮ್ಮ ಚಾಲಕರಿಗೂ ಆಶ್ಚರ್ಯವನ್ನುಂಟುಮಾಡಿತ್ತು.
Driver: "ಇದು govt. ಗಾಡಿನಪ್ಪ, ದುಡ್ಡು ಕೊಡೊಹಾಗಿಲ್ಲ".
TOLL Person: "white boardಗೆ free, ನಿಮ್ದು yellow board, ದುಡ್ಡು ಕಟ್ಬೇಕು".
Driver: "ಹೇ.. ಇಲ್ಲಾಪ್ಪ, ನಾವು ಕೊಡೋಹಾಗಿಲ್ಲ".
ಅಷ್ಟರಲ್ಲಿ ಹಿಂದಿನಿಂದ ವಾಹನವೊಂದು ತನಗೆ ತಡವಾಗುತ್ತಿದೆ ಎಂದು ನಮಗೆ ತಿಳಿಸುವಂತೆ ಜೋರಾಗಿ ಶಬ್ಧ ಮಾಡಿತು.
TOLL Person: (ಸೆಕ್ಯುರಿಟಿಯನ್ನು ಕೂಗಿ ಕರೆದು) "ASO ಕರಿ ಸ್ವಲ್ಪ".
ನಾನು, ಯಾರಿರಬಹುದು ಈ ASO? ಅವರ ಪದನಾಮ (designation) ಏನಿರಬಹುದೆಂದು ಯೋಚಿಸುತ್ತಾ ಸೆಕ್ಯೂರಿಟಿಯತ್ತ ತಿರುಗಿ ನೋಡಿದೆ, ಅತ ಯಾರಿಗೋ ಸನ್ನೆ ಮಾಡಿ ಕರೆಯುತ್ತಿದ್ದ.
TOLL Person: (ಸೆಕ್ಯುರಿಟಿಯ ಸನ್ನೆಯನ್ನು ASO ನೋಡಿಲ್ಲವೇನೋ, ಈತ TOLL BOOTH ನಿಂದ ತಲೆಯನ್ನು ಹೊರಹಾಕಿ ಕೈ ಬೀಸಿ ಜೋರಾಗಿ ಕೂಗಿದ) "ಸಾaaaaaರ್......".
ಆತ ಕೈ ಬೀಸಿ ಸನ್ನೆ ಮಾಡಿದ ಕಡೆಗೆ ನಾನು ನೋಡಿದೆ, ASO ಇರಬೇಕು, ವಾಕಿ-ಟಾಕಿ ಹಿಡಿದು ಯತ್ತಲೋ ಹೋಗುತ್ತಿದ್ದವರು ಈತನ ಕೂಗನ್ನು ಕೇಳಿ ನಮ್ಮತ್ತ ಹೆಜ್ಜೆ ಹಾಕಿದರು. ASO ಬರುವುದಕ್ಕೂ, ಹಿಂದಿನ ಲಾರಿಯ ಚಾಲಕ ಇಳಿದು ಬರುವುದಕ್ಕೂ ಒಂದೇ ಆಗಿ,
Lorry Driver: "ಏನ್ರಿ, ನಿಮ್ ರೋಡಲ್ಲಿ time save ಆಗುತ್ತೆ ಅಂತ ಬಂದ್ರೆ ಇಲ್ಲೂ ಅದೇ ಗೋಳು.., sideಗೆ ಹಾಕ್ಸಿ ಇವ್ನನ್ನ" - ನಮ್ಮ ವಾಹನವನ್ನು ಕುರಿತು ಹೇಳಿದ.
TOLL GATE ನಿಂದ ಸ್ವಲ್ಪ ಮುಂದೆ ಸಾಗಿ, ಎಡಗಡೆಗೆ ವಾಹನ ನಿಲ್ಲಿಸಿದರು John (ನಮ್ಮ ಚಾಲಕರು, ಹೆಸರು ಬದಲಿಸಲಾಗಿದೆ, ಹಾಗೆ ಸುಮ್ಮನೆ...). ASO ನಮ್ಮಲ್ಲಿಗೆ ಬರಲು, John ಇಳಿದು ಹೋಗಿ ಅವರೊಂದಿಗೆ ಹೇಳತೊಡಗಿದರು:
John: "ಸಾರ್, ನಮ್ದು govt. vehicle, ದುಡ್ಡು ಕಟ್ಟೋಹಾಗಿಲ್ಲ".
ASO: "ನೋಡಿ, ನಾವು ಯಾರನ್ನೂ ಬಿಟ್ಟಿಲ್ಲ, railway dept. vehicleಗೂ ನೆನ್ನೆ ಕಟ್ಸಿದಿವಿ".
John: "ಇಲ್ಲ ಸಾರ್, ನಾವು ಎಲ್ಲಿ ಹೋದ್ರು ಕಟ್ಟಲ್ಲ..".
ಇವರ ವಾದ ಬಗೆಹರಿಯುವಂತೆ ಕಾಣಲಿಲ್ಲವಾದ್ದರಿಂದ, ನಾನು ಕೊಡ ಅವರಲ್ಲಿಗೆ ಹೋದೆ.
Me: "ಏನಪ್ಪಾ John?".
John: "ಸಾರ್, ದುಡ್ಡು ಕಟ್ಬೇಕಂತೆ..".
ASO: (ನನ್ನನ್ನುದ್ದೇಶಿಸಿ) "ನೋಡಿ, ನಾವು ಹಾಗೆಲ್ಲ ಸುಮ್ಮನೆ ದುಡ್ಡು ತಗೋಳಲ್ಲ, ನಾನು ex-servicemen, ನಮ್ಮ Defence officer ಒಬ್ರು transfer ಆಗಿ ಸಾಮಾನೆಲ್ಲ Defence ಗಾಡೀಲಿ ಹಾಕೊಂಡು ಬಂದ್ರು, ಅವ್ರು transfer order, ID card ತೋರ್ಸೋವರ್ಗು ಬಿಡ್ಲಿಲ್ಲ".
Me: "ನಾನು ಸಹ officer, office ಕೆಲಸದ್ಮೇಲೆ govt. ಗಾಡಿನಲ್ಲೇ ಹೋಗ್ತಿದ್ದೀನಿ, ನಂದು ID card ನೋಡ್ತಿರ?".
ASO: (ಹುಡುಗನಂತೆ ಕಾಣುತ್ತಿದ್ದ ನಾನು ಒಬ್ಬ ಅಧಿಕಾರಿಯಿರಬಹುದೆಂದು ಆತ ಊಹಿಸಿರಲಿಲ್ಲವೇನೋ, ಮಾತಿನ ಧಾಟಿ ಸ್ವಲ್ಪ ಬದಲಾಗಿ) "ಅಲ್ಲ ಅಲ್ಲ ಸಾರ್, ನಾನೂ ಒಬ್ಬ govt. servant, ಆದ್ರೆ rules ಮೀರಿ ಹೋಗೋಕಾಗುತ್ತ?".
Me: "ಸರಿ, yellow board ಇರೋ govt. vehicle not exempted from TOLL FARE ಅಂತ ಇರೋ ruleನ ಒಂದು ಕಾಪಿ ನನಗೆ ಕೊಡಿ, TOLL FARE ಕಟ್ತೀನಿ".
ASO: "copy ಹೇಗೆ ಕೊಡ್ಲಿ ಸಾರ್?".
Me: "Xerox ಇಲ್ವಾ?".
ASO: "ಇಲ್ಲ ಸಾರ್?".
Me: "At least ಒಂದ್ copy ತೋರ್ಸಿ".
ASO: "copy ಇಲ್ಲಿ ಇಲ್ಲ ಸಾರ್, ಈಗ ನನ್ನ duty ಇದೆ ನಾನು ಬಿಟ್ಬಿಡ್ತೀನಿ, ಆದ್ರೆ ನಿಮ್ಗೆ ಬೇರೆ TOLL ನಲ್ಲಿ ತೊಂದ್ರೆ ಆಗೇ ಆಗುತ್ತೆ. ಒಂದ್ಕೆಲ್ಸ ಮಾಡಿ, ನೀವು ಯಾವ್ಕಡೆ ಹೋಗ್ಬೇಕು?".
Me: "Mysore ಕಡೆಗೆ".
ASO: "ಸರಿ, mysore road exitಗಿಂತ ಸ್ವಲ್ಪ ಮುಂದೆ 4km ಹೋದ್ರೆ ನಮ್ಮ office ಇದೆ, ಅಲ್ಲಿ confirm ಮಾಡ್ಕೊಳ್ಳಿ ಸಾರ್".
Me: "Thank you ..".
ASO: "Ok ಸಾರ್..".
ನಮ್ಮ ವಾಹನವು ನೈಸ್ ರಸ್ತೆಯಲ್ಲಿ ಸಾಗುತ್ತಿತ್ತು:
John: "ಏನ್ ಸಾರ್, ದುಡ್ಡು ಕಟ್ಬೇಕಂತೆ.. govt. vehicle ಅಂತ ಗೊತ್ತಿಲ್ವ?".
Me: "ಅವ್ರ officeಗೆ ಹೋಗಿ ವಿಚಾರ್ಸೋಣ ಬಿಡಿ".
ಮಾತು ನಿಲ್ಲಿಸಿದ John ವಾಹನ ಚಲಿಸುವಲ್ಲಿ ಮಗ್ನರಾದರು. ನಾನು ದಾಖಲಾತಿಗಳನ್ನು ನೋಡುತ್ತಾ ಕುಳಿತೆ.
ವಾಹನವು ಮೈಸೂರು ರಸ್ತೆಗೆ ಸೇರುವ ತಿರುವನ್ನು ತಲುಪಿತ್ತು. ವಾಹನವನ್ನು ಮೈಸೂರಿನ ಕಡೆಗೆ ತಿರುಗಿಸುತ್ತಿದ್ದ Johnರನ್ನು ತಡೆದು:
Me: "ಅವ್ರ officeಗೆ ಹೋಗೋಣ.. straight ಆಗಿ ಹೋಗಿ..". ನನ್ನ ಮುಖವನ್ನು ಆಶ್ಚರ್ಯವೆನ್ನುವ ಭಾವದಿಂದ ನೋಡಿದ John ವಾಹನವನ್ನು ನೈಸ್ ರಸ್ತೆಯಲ್ಲಿ ಮುಂದೆ ನಡೆಸಿದರು. ಕೇವಲ ಎರಡು ನಿಮಿಷಗಳ ಬಳಿಕ ನಾವು ನೈಸ್ ಕಛೇರಿ ತಲುಪಿದ್ದೆವು. ಮುಖ್ಯದ್ವಾರದ ಮುಂದೆ ನಿಂತ ನಮ್ಮ ವಾಹನದ ಕಡೆಗೆ ಸೆಕ್ಯುರಿಟಿ ಓಡಿಬಂದು "आगे चलो.. आगे चलो.." ಎಂದ.
Me: "I want to meet your officer..".
Security: "क्या?..". ಅಷ್ಟರಲ್ಲಿ ಆತನಿಗೆ ಇಂಗ್ಲಿಷ್ ಅರ್ಥವಾಗುವುದಿಲ್ಲವೆಂದು ತಿಳಿದ ನಾನು, ನನ್ನ ಅಲ್ಪ-ಸ್ವಲ್ಪ ಹಿಂದಿ ಭಾಷೆಯಲ್ಲಿ "ನಮಗೆ ಸ್ವಲ್ಪ ತೊಂದರೆಯಾಗಿದೆ, ಕಚೇರಿಯಲ್ಲಿ ಮಾತನಾಡಬೇಕು" ಎಂದು ಹೇಳಿದೆ. ಆತ ಮೊದಲಿಗೆ ಇಲ್ಲವೆಂದನಾದರೂ, ಕೊನೆಗೆ ನನ್ನೋಬ್ಬನನ್ನು ಒಳಗೆ ಕಳುಹಿಸಲು ಒಪ್ಪಿದ. "ಸರ್, U -turn ಮಾಡ್ಕೊಂಡ್ ಬರ್ತೀನಿ" ಎಂದರು John, ಸರಿಯೆಂದು ನಾನು ಒಳಗೆ ಹೊರಟೆ.
ನೈಸ್ ಕಛೇರಿ ಆವರಣದಲ್ಲಿ ಅದೇನೋ ನಡೆಯುತ್ತಿತ್ತು. ವಾಹನಗಳು, ಜನರ ಸಂಖ್ಯೆ ಹೆಚ್ಚಿತ್ತು. ಕಛೇರಿಯ ಬಾಗಿಲ ಮುಂದೆ ಸುಮಾರು 30 -50 ಜನರ ಗುಂಪೊಂದು ಇದ್ದಿತು. ಗುಂಪಿನ ಮಧ್ಯದಲ್ಲಿ ಚಿತ್ರನಟ-ಶಾಸಕ ಶ್ರೀ. ಅಂಬರೀಶ್ ಕಾಣಿಸಿದರು. ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಿಸಿದ್ದ ಕಾರಣ ಶ್ರೀ. ಅಂಬರೀಶ್ ಹಾಗು NICE CEO ಶ್ರೀ. ಖೇಣಿ (ಕಾಂಗ್ರೆಸ್ ಗೂ, ಅಂಬರೀಶ್ ಗೂ, ಖೇಣಿ ಗೂ ಏನು ಸಂಬಂಧ? ಈ ತರ್ಕ ಪ್ರಸ್ತುತ ವಿಷಯವಸ್ತುವಿನ ಚೌಕಟ್ಟನ್ನು ಮೀರಿದ್ದು..) ಇಬ್ಬರಿಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ನಾನು ಕಛೇರಿಗೆ ಹೋಗಿ ಯಾರನ್ನು ಮಾತನಾಡಿಸಬೇಕು ಎಂದು ನೋಡಿದೆ - ಎಲ್ಲ ಕುರ್ಚಿಗಳೂ ಖಾಲಿ, ಇದೇನಚ್ಚರಿ!! ಪ್ರಾಂಗಣದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಮಂದಿ ಇದ್ದರೂ ಸಹ, ಕಛೇರಿಯ ಕುರ್ಚಿಗಳಲ್ಲಿ ಯಾರು ಇಲ್ಲ. ಅಷ್ಟೊಂದು ಜನರಲ್ಲಿ ಸಾರ್ವಜನಿಕರು ಯಾರು, ಸಿಬ್ಬಂದಿ ವರ್ಗದವರು ಯಾರು ಎಂದು ಗುರುತಿಸುವುದು ಸಾಧ್ಯವಾಗದೆ ಅಸಹಾಯಕನಾಗಿ ನಿಂತಿದ್ದಾಗ, ಅಲ್ಲಿಗೆ ಬಂದ ಸೆಕ್ಯುರಿಟಿ ಅನ್ನು ತಡೆದು ನಾನು "ನಿಮ್ಮ officer ಜೊತೆ ಮಾತಾದ್ಬೇಕಲ್ಲ" ಎಂದೆ. ಅದಕ್ಕೆ ಆತ "ಇವತ್ತು ಯಾರು ಸಿಕ್ಕಲ್ಲ ಸಾರ್, ಮಿಟಿಂಗ್ ಇದೆ" ಅಂದುಬಿಟ್ಟ. ಸ್ವಲ್ಪ ಸಮಯ ಅಲ್ಲೇ ಕಾದನಂತರ ಕಛೇರಿಯೊಳಗೆ ಬಂದ ಒಬ್ಬರನ್ನು ವಿಚಾರಿಸಲು, ನಾನು ಶ್ರೀ. ಪಾಟೀಲ್ ಎಂಬುವವರನ್ನು ಭೇಟಿ ಮಾಡಿ ಮಾತನಾಡಬೇಕೆಂದು ತಿಳಿಸಿದರು. ಸರಿ, ಸುಮಾರು 15-20 ನಿಮಿಷಗಳ ನಂತರ ಶ್ರೀ. ಪಾಟೀಲ್ ತಮ್ಮ ಕುರ್ಚಿಯಲ್ಲಿ ಕಾಣಿಸಿಕೊಂಡರು.
Me: "ನಮಸ್ತೆ ಸರ್".
ಅವರು "ಏನು?" ಎಂಬಂತೆ ತಲೆಯಾಡಿಸಿದರು. ನನ್ನ ಸ್ಥೂಲ ಪರಿಚಯ ಮಾಡಿಕೊಂಡ ನಂತರ ನಮ್ಮ TOLL FARE ವಿಚಾರವನ್ನು ತಿಳಿಸಿದೆ.
Patil: "ನಿಮ್ ಗಾಡಿ ನಂಬರ್ ಎನೈತ್ರಿ?".
ಓಹ್! ಅಚ್ಚ ಕನ್ನಡ ಭಾಷೆ! ಬಹುಶಃ ಉತ್ತರ ಕನ್ನಡದವರಿರಬೇಕು. ಅವರ ಮೇಲಿನ ನನ್ನ ಅಭಿಮಾನ ಇಮ್ಮಡಿಸಿತು. ನಾನು ಇನ್ನೂ ವಿನಯದಿಂದ "KA-01 G-XXXX ಸರ್" ಎಂದೆ.
Patil: "G registration ಇದ್ದ್ರ ಏನೂ charges ಇಲ್ಲ್ರಿ".
Me: "ಇಲ್ಲ ಸರ್, ನೆಲಮಂಗಲ TOLL GATE ನಲ್ಲಿ ಸುಮಾರು 15 ನಿಮಿಷ ನಮ್ಮನ್ನು ನಿಲ್ಸಿದ್ದ್ರು".
Patil: "number ಇನ್ನೊಮ್ ಹೇಳ್ರಿ".
Me: "KA-01 G-XXXX ಸರ್".
Patil: "XXXX, ಹೇಳ್ತಿನ್ ಬಿಡ್ರಿ..".
Me: "ಇಲ್ಲ ಸರ್, ನಮ್ಗೆ ಮತ್ತೆ ತೊಂದರೆ..."
ಸರ್ಕಾರಿ ವಾಹನಗಳಿಗೆ ವಿನಾಯಿತಿ ಘೋಷಿಸಿರುವ ಒಂದು ದಾಖಲೆಯನ್ನು ಕೇಳಬೇಕೆನ್ನುವ ನನ್ನನ್ನು ತಡೆದು ಪಾಟೀಲರು "ನಾ ಹೇಳ್ತಿನ್ ಬಿಡ್ರಿ" ಎಂದರು. ಅವರ ಮಾತಿನ ಧಾಟಿ "ಇನ್ನು ನೀವು ಹೋಗಬಹುದು" ಎಂದು ಸೂಚಿಸುವಂತಿತ್ತು. ಒಲ್ಲದ ಮನಸ್ಸಿನಿಂದ ನಾನು "thank you ಸರ್" ಎಂದು ಹೇಳಿ ಕಛೇರಿಯಿಂದ ಹೊರನಡೆದೆ.

ಪ್ರಾಂಗಣದಲ್ಲಿ ಇನ್ನೂ ಅಭಿನಂದನಾ ಸಮಾರಂಭ ನಡೆಯುತ್ತಿತ್ತು, ಗದ್ದಲ ಕೇಳಿಸುತ್ತಿತ್ತು. ನಾನು ನೋಡಿಯೂ ನೋಡದವನಂತೆ ಮುಖ್ಯದ್ವಾರದ ಬಳಿ ಬಂದೆ. ಅದೇ ಸೆಕ್ಯುರಿಟಿ ಇನ್ಯಾರ ವಾಹನವನ್ನೋ ತಡೆದು ಅದೇನೋ ನಿರ್ದೇಶನ ನೀಡುತ್ತಿದ್ದ. ಗಣ್ಯರಿದ್ದರೂ ಸಹ ನನ್ನನ್ನು ಒಳಹೋಗಲು ಬಿಟ್ಟಿದ್ದಕ್ಕೆ ಅವನಿಗೆ ಧನ್ಯವಾದ ಹೇಳಬೇಕೆನ್ನಿಸಿತು. ಕಾದೆ. ಆತ ಎಲ್ಲವನ್ನು ಹೇಳಿ ನನ್ನೆಡೆಗೆ ನೋಡಿದಾಗ - "thank you" ಎಂದೆ. ಆತ ಖುಷಿಯಿಂದ ಬೀಳ್ಕೊಟ್ಟ.

ರಸ್ತೆಯ ಇನ್ನೊಂದು ಬದಿಯಲ್ಲಿ ನಿಲ್ಲಿಸಿದ್ದ ನಮ್ಮ ವಾಹನವನ್ನು ಗಮನಿಸಿದ ನಾನು ರಸ್ತೆಯನ್ನು ದಾಟಲು ಮುಂದಾದೆ. ಜಾಗರೂಕನಾಗಿ ರಸ್ತೆ ದಾಟುತ್ತಿದ್ದ ನನ್ನನ್ನು ಎಚ್ಚರಿಸಲೆಂದು ವಾಹನ ಚಾಲಕರು ಶಬ್ದ ಮಾಡುತ್ತಿದ್ದರು. ನಾನು ಅವರ ಎಚ್ಚರಿಕೆಗೆ ಸ್ಪಂದಿಸುತ್ತಿದ್ದೆನೆಂದು ತೋರಿಸುವ ಸಲುವಾಗಿ ಬಿರುಸಾಗಿ ನಡೆದು ರಸ್ತೆ ದಾಟಿದೆ. ನಾನು ವಾಹನದೊಳಗೆ ಕುಳಿತುಕೊಳ್ಳುತ್ತಿದ್ದಂತೆ John "ಏನಂತೆ ಸಾರ್?" ಎಂದರು. ನಾನು "G registration ಗಾಡಿಗೆ free ಅಂತೆ" ಎನ್ನುವಷ್ಟರಲ್ಲಿ ವಾಹನ ಚಲಿಸುತ್ತಿತ್ತು. John ಮುಖದಲ್ಲಿ ಹಣ ಪಾವತಿಸಬೇಕಾಗಿಲ್ಲ ಎಂಬ ಖುಷಿಯಿಂದ ಮಂದಹಾಸ ಮೂಡಿದರೆ, ನಾನು ಏನೋ ಸಾಧಿಸಿದವನಂತೆ ನಕ್ಕೆ. ಇಷ್ಟಾಗುವ ಹೊತ್ತಿಗೆ ಸಮಯ 2:45 ರ ಆಸುಪಾಸಿನಲ್ಲಿತ್ತು. ನನ್ನ ತಲೆಯಲ್ಲಿ ನೂರೊಂದು ವಿಚಾರಗಳು - "ಸುಮ್ಮನೆ ವಿನಾಕಾರಣ ನಮ್ಮನ್ನು ತಡೆದರಲ್ಲ, ನಮ್ಮ ಸಮಯ ವ್ಯರ್ಥವಯಿತಲ್ಲ, ಹಿಗಾಗಿಲ್ಲದಿದ್ದರೆ ನಾವು ಇಷ್ಟರಲ್ಲಿ ಉಟ ಮುಗಿಸಿ ಸುಮಾರು ದೂರ ಹೊಗಿರಬಹುದಿತ್ತಲ್ಲ, ಸರಿಯಾದ ಅರಿವು ಇಲ್ಲದೆ ಅದು ಹೇಗೆ ಬೇಜವಬ್ದಾರಿಯಿಂದ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರಲ್ಲ , ಸುಮ್ಮನೆ ಹೆದರಿಸಿ ಹಣ ವಸೂಲಿ ಮಾಡುತ್ತಾರಲ್ಲ, ಇದು ಸರಿಯೇ? ಮತ್ತೆ ನಮ್ಮನ್ನು TOLL GATE ನಲ್ಲಿ ತಡೆದರೆ ಏನು ಮಾಡುವುದು, ಪಾಟೀಲ್ ಗೆ ದೂರವಾಣಿ ಮೂಲಕ ಮಾತನಾಡಿ ಎಂದರೆ ಆಯ್ತು" ಎಂದು ಯೋಚಿಸುವಷ್ಟರಲ್ಲಿ ನಾವು TOLL GATE ನಿರ್ಗಮನಕ್ಕೆ ಬಂದು ಸೇರಿದ್ದವು.

John ವಾಹನವನ್ನು TOLL GATE ಬಳಿ ನಿಲ್ಲಿಸಿದರು, TOLL GATE ಸಿಬ್ಬಂದಿ ವಾಹನ ಸಂಖ್ಯೆಯನ್ನು ಗಮನಿಸಿದರು. "ಅವರು ಈಗ ಏನು ಕೇಳಬಹುದು?" ಎಂದು ನಾನು ಯೋಚಿಸುತ್ತಿರುವಾಗಲೇ ನಾವು ನಿಂತಿದ್ದ TOLL GATE ನ ಕೆಂಪು ದೀಪ ಹಸಿರಾಗಿತ್ತು, ಬಾಗಿಲು ತಾನಾಗಿಯೇ ಮೇಲಕ್ಕೆ ಸರಿದು ನಮಗೆ ಹೊರಹೋಗಲು ದಾರಿ ಮಾಡಿಕೊಟ್ಟಿತ್ತು, ನಾನು ನಿಟ್ಟುಸಿರಿಟ್ಟೆ, ನಮ್ಮ ಪಯಣ ನೈಸ್ ರಸ್ತೆಯಿಂದಾಚೆಗೆ ಸಾಗಿತ್ತು...

Wednesday, May 19, 2010

ಪ್ರಪ್ರಥಮ ಬರವಣಿಗೆ

ಹೌದು! ಕೊನೆಗೂ ನಾನು 24 ಗಂಟೆಗೂ ಮೀರಿದ ನನ್ನ ಮಾನಸಿಕ ತೊಳಲಾಟದಿಂದ ಹೊರಬಂದು, ಪ್ರಪ್ರಥಮ ಬರವಣಿಗೆಯೊಂದನ್ನು ಬಿತ್ತರಿಸಲು ಸಜ್ಜಾಗಿದ್ದೇನೆ. ಆದರೆ, ಏನು ಬರೆಯಬೇಕೆಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ ನನಗೆ. ಈ ಹಿಂದೆ ಹಲವರ ಪ್ರಥಮ ಬರವಣಿಗೆಗಳನ್ನು ಓದುವಾಗ ಅನಿಸುತಿತ್ತು - ಪ್ರಥಮವಾಗಿ ಬರೆಯುವಾಗ ಏಕೆ ಇವರು ಇಷ್ಟೊಂದು ಭಾವುಕರಾಗಿದ್ದಾರೆ? ಉದ್ವೇಗಕ್ಕೊಳಗಾಗಿದ್ದಾರೆ? ಇಂದು ನನಗೂ ಅದರ ಅನುಭವವಾಗಿ ಮುಗುಳ್ನಕ್ಕೆ.

ಯಾವ ವಿಷಯದ ಬಗ್ಗೆ ಪ್ರಥಮವಾಗಿ ಬರೆಯಬೇಕೆಂಬ ನನ್ನ ಸತತ ಚಿಂತನೆ ವ್ಯರ್ಥವಾಯಿತಾದರೂ, ಕನ್ನಡದಲ್ಲೇ ಬರೆಯಬೇಕೆಂಬ ಬಯಕೆ ಮಾತ್ರ ಸ್ವಷ್ಟ ಅದಮ್ಯವಾಗಿದೆ. ಕೆಲವೊಮ್ಮೆ ನನಗೇ ಅತ್ಯಂತ ಆಶ್ಚರ್ಯ ಮೂಡಿಸುವ ಸಂಗತಿಯೇನೆಂದರೆ, ಕನ್ನಡದ ಬಗ್ಗೆ ಅದೆಲ್ಲಿಂದ ಇಷ್ಟೊಂದು ಅಭಿಮಾನ ಹುಟ್ಟಿತು ನನ್ನಲ್ಲಿ?! ಮಾತೃಭಾಷೆ ವ್ಯಕ್ತಿಯಲ್ಲಿ ರಕ್ತಗತವಾಗಿರುತ್ತದೆನ್ನುವುದು ಇದಕ್ಕೇ ಇರಬೇಕು. ಒಂದು ಮಾತ್ರ ಸತ್ಯ : 'ಎಲ್ಲಾದರು ಇರು, ಎಂತಾದರು ಇರು; ಎಂದೆಂದಿಗೂ ನೀ ಕನ್ನಡವಾಗಿರು' - ಕುವೆಂಪುರವರ ಈ ಮಾತುಗಳು ನನ್ನ ಮೇಲೆ ಅತಿಯಾದ ಪ್ರಭಾವ ಬಿರಿರುವುದು. ಇದು ವ್ಯಕ್ತಿತ್ವದ ಶಕ್ತಿಯೋ, ಕನ್ನಡ ಭಾಷೆಯ ವೈಶಿಷ್ಟ್ಯತೆಯೋ, ಅಥವಾ ಇವರಡೂ ಹೌದೋ, ತಿಳಿಯದು.

ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಕಾಲ ಕಳೆದಂತೆಲ್ಲ ಮನುಷ್ಯ ವಿವೇಕಿಯಾಗಿ, ಪ್ರೌಢನಾಗಿ, ಜ್ಞಾನಿಯಾಗಿ, ಜಗತ್ತಿನ ಎಲ್ಲಾ ಜಟಿಲಗಳನ್ನು ಭೇದಿಸಿ ಉತ್ತರ ಕಂಡುಕೊಂಡಿರುವುದನ್ನು ಕಾಣುತ್ತೇವೆ. ಆದರೆ, ವೈಯಕ್ತಿಕವಾಗಿ ನಾನು ಬೆಳೆದಂತೆಲ್ಲ, ದಿನಗಳು ಕಳೆದಂತೆಲ್ಲ, ಋತುಮಾನಗಳು ಉರುಳಿದಂತೆಲ್ಲ, ಬುದ್ಧಿ ಬಲಿತಂತೆಲ್ಲ, ಜೀವನವೇ ಒಂದು ಪ್ರಶ್ನೆಗಳ ಗೂಡಾಗಿ, ಒಳಹೊಕ್ಕಂತೆಲ್ಲ ಜಟಿಲವಾಗಿ, ದಿಕ್ಕೇ ತೋಚದಂತಾಗಿದೆ. ದಿನನಿತ್ಯದ ಬದುಕಿನಲ್ಲಿ ಏಳುವ ಸಾಮಾನ್ಯ ಪ್ರಶ್ನೆಗಳ ಬೆನ್ನತ್ತಿ ಉತ್ತರವನ್ನು ಹುಡುಕುತ್ತಾ ಹೊರಟಂತೆಲ್ಲ, ಪ್ರಶ್ನೆಗಳಿಗೆ ಉತ್ತರವಾಗಿ ಪ್ರಶ್ನೆಗಳೇ ಮೂಡಿ, ಒಂದಕ್ಕೊಂದು ಬೆಸೆದುಕೊಂಡು ಸೃಷ್ಟಿಸಿದ ಚಕ್ರವ್ಯೂಹವನ್ನು ಭೇದಿಸುವ ಪ್ರಯತ್ನ ಇಲ್ಲಿ ನಾನು ಮಾಡಿದರೆ ಆಶ್ಚರ್ಯವಿಲ್ಲ.

ಕೇವಲ ದ್ವಂದ್ವಗಳನ್ನೊಳಗೊಂಡ (ಅ)ವಿವೇಕ ಚಿಂತನೆಗಳಿಂದ ನನ್ನ ಪ್ರಪ್ರಥಮ ಬರವಣಿಗೆಯೇ ನೀವು ಓದುವ ನನ್ನ ಕೊನೆಯ ಬರವಣಿಗೆಯಾಗುವ ಮೊದಲು, ನಿಮ್ಮನ್ನು ಈ ಧರ್ಮಸಂಕಟದಿಂದ ಪಾರುಮಾಡುವುದೇ ಒಳಿತೆಂಬುದು ನನ್ನ ಅಭಿಪ್ರಾಯ. 15 ನೇ ಅಗಸ್ಟ್, 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಲೂ ಸಹ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಾರತೀಯರ ಮುಖದಲ್ಲಿ ಈಗ ನಿಮ್ಮ ಮುಖದಲ್ಲಿ ಕಾಣುತ್ತಿರುವ ಗೆಲುವು ಕಂಡಿರಲಿಕ್ಕಿಲ್ಲವೇನೊ! ಈ ಗೆಲುವು ನಿಮ್ಮಲ್ಲಿ ಸದಾ ಹಸಿರಾಗಿರಲೆಂದು ಹಾರೈಸುವ..

- ಪ್ರಶಾಂತ.