Saturday, October 16, 2010

ದಸರಾ - 400 ಸುವರ್ಣ ವರ್ಷಗಳು

ಮೈಸೂರು ಅರಮನೆ
'ದಸರಾ' ಎಂದರೆ 'ಮೈಸೂರು' ಎನ್ನುವಷ್ಟು ಪ್ರಖ್ಯಾತಿ ಪಡೆದಿದೆ ಮೈಸೂರಿನ ನವರಾತ್ರಿ ಆಚರಣೆ. ಒಂಭತ್ತು ದಿನಗಳ ಕಾಲ ವಿಜೃ೦ಭಣೆಯಿಂದ ನಡೆಯುವ ದಸರಾ ಮಹೋತ್ಸವ, ವಿಜಯದಶಮಿಯ ದಿನದಂದು ಜಗತ್ಪ್ರಸಿದ್ಧ 'ಜಂಬೂ ಸವಾರಿ' ಯಲ್ಲಿ ಕೊನೆಗೊಳ್ಳುತ್ತದೆ. ಈ ಹಬ್ಬವನ್ನು ಹಿಂದಿನ ಮೈಸೂರು ಮಹಾರಾಜ ವಂಶಸ್ಥರ ಸಂಪ್ರದಾಯದ ಪ್ರಕಾರವೇ ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಮೈಸೂರಿನ ದಸರಾ ಸಡಗರದಲ್ಲಿ ಬರಿಯ ಕರ್ನಾಟಕ ಮಾತ್ರವಲ್ಲ, ಇಡೀ ಪ್ರಪಂಚವೇ ಪಾಲ್ಗೊಳ್ಳುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.

ಮೈಸೂರು - ಕನ್ನಡಿಗರೆಲ್ಲರ ಹೃದಯದಲ್ಲಿ ವಿಶಿಷ್ಟವಾದ ಸ್ಥಾನ ಪಡೆದುಕೊಂಡಿರುವ ಸುಂದರ ನಗರಿ. ಕರ್ನಾಟಕದ ರಾಜಧಾನಿ ಬೆಂಗಳೂರಾದರೂ, ಮೈಸೂರು ಕರ್ನಾಟಕದ 'ಸಾಂಸ್ಕೃತಿಕ ರಾಜಧಾನಿ' ಎಂದೇ ಪ್ರಸಿದ್ಧಿ ಪಡೆದಿದೆ. ತನ್ನಲ್ಲಿರುವ ಪ್ರಕೃತಿ ಸಹಜವಾದ ಸೌಂದರ್ಯ ಹಾಗೂ ಐತಿಹಾಸಿಕ ಸ್ಥಳವಸ್ತುಗಳಿಂದ ಮೈಸೂರು ಪ್ರಪಂಚದಾದ್ಯಂತ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಮೈಸೂರಿಗೆ ಭೇಟಿಕೊಟ್ಟ ಪ್ರವಾಸಿಗರು ತಮ್ಮ ಅನುಭವವನ್ನು ಜೀವಿತಾವಧಿಯಲ್ಲಿ ಮರೆಯಲು ಸಾಧ್ಯವೇ ಇಲ್ಲ!

ಜಂಬೂ ಸವಾರಿ
ಮೈಸೂರಿನ ದಸರಾ ಉತ್ಸವವು ಮೂಲಭೂತವಾಗಿ ಚಾಮುಂಡಿ ದೇವಿಯು ಮಹಿಷಾಸುರನನ್ನು ಕೊಂದ ಹಿನ್ನೆಲೆಯಲ್ಲಿ ಆಚರಿಸಲ್ಪಟ್ಟರೂ ಸಹ, ಅದು ಕೇವಲ ದೈವಾರಾಧನೆಗಷ್ಟೇ ಸೀಮಿತಗೊಳ್ಳದಿರುವುದು ವಿಶೇಷ. ಒಂಭತ್ತು ದಿನಗಳು ಅರಮನೆ ದರ್ಬಾರಿನಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಾಕ್ರಮಗಳ ರಸದೌತಣವು ಮೈಸೂರು ದಸರಾ ಉತ್ಸವದ ವಿಶಿಷ್ಟತೆಯೂ ಹೌದು. ಈ ಉತ್ಸವದ ಬಹುಮುಖ್ಯ ಆಕರ್ಷಣೆಯಾದ 'ಜಂಬೂ ಸವಾರಿ' ಯ ಚೆಂದವನ್ನು ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು. ಕಿಕ್ಕಿರಿದು ತುಂಬಿರುವ ಜನಸ್ತೋಮದ ನಡುವೆ ಸೌಮ್ಯವಾಗಿ ಸಾಗುವ ಆನೆಗಳ 'ಗಜಗಾಂಭೀರ್ಯ'ವನ್ನು ಮೆಚ್ಚಲೇಬೇಕು.

ಐತಿಹಾಸಿಕ ಮೈಸೂರು ದಸರಾ ನಾಡಹಬ್ಬದ ಆಚರಣೆಗೊಂದು ಐತಿಹಾಸಿಕ ಮಹತ್ವ; 1610 ರಿಂದ ಪ್ರಾರಂಭಗೊಂಡು ಇಂದಿಗೆ 400 ವರ್ಷಗಳು! ಇಂದಿಗೂ ಸಹ ಎಂದಿನಂತೆ ತನ್ನ ವೈಭವಾಚರಣೆಯಿಂದ, ಸಾಂಸ್ಕೃತಿಕ ಸೋಗಡಿನಿಂದ ಮೈಸೂರು ದಸರಾ ಉತ್ಸವವು ಜಗತ್ತಿನಾದ್ಯಂತ ಮನೆಮಾತಾಗಿದೆ. ಈ ಉತ್ಸವವು ಬರಿಯ ಆಚರಣೆಯಾಗಿ ಉಳಿಯದೆ, ಕರ್ನಾಟಕದಲ್ಲಿರುವ ಕಲೆ ಹಾಗೂ ಸಂಸ್ಕೃತಿಯ ಬಗೆಗಿನ ಅಪಾರವಾದ ಶ್ರದ್ಧೆ, ನಂಬಿಕೆಯ ಸಂಕೇತವಾಗಿದೆ ಎಂದರೆ ತಪ್ಪಾಗಲಾರದು. ನಮ್ಮ ಐತಿಹಾಸಿಕ, ಶ್ರೀಮಂತ ಕಲಾಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಕನ್ನಡಿಗರಾದ ನಾವೆಲ್ಲರೂ ಪ್ರಶಂಸಾರ್ಹರು.

ನಿಮಗೆಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು!

11 comments:

  1. ಪ್ರಶಾಂತ್ , ನಿನ್ನ ದಸರಾ ಬಗ್ಗೆ ಬರೆದ ಲೇಖನ ಈಗಸ್ಟೇ ನೋಡಿದೆ .ಅರಮನೆಯ ಫೋಟೋ ಚೆನ್ನಾಗಿದೆ !.ಇದರ ಜೊತೆಗೆ ಸ್ತಬ್ದ ಚಿತ್ರಗಳ ಫೋಟೋ ಹಾಕಿದ್ದರೆ ಚೆನ್ನಾಗಿತ್ತು .ದಸರಾ ಮೆರವಣಿಗೆ ಮತ್ತುಸ್ತಬ್ದ ಚಿತ್ರಗಳನ್ನು ನೋಡಲು ಬಂದ ಜನಜಂಗುಳಿಯನ್ನು ನೋಡಬೇಕು !!!.ಎಲ್ಲಿನೋಡಿದರೂ ಸಾಗರೋಪಾದಿಯಲ್ಲಿ ನಿಂತಿರುತ್ತಾರೆ .ಬಹುಮಹಡಿಯ ಕಟ್ಟಡಗಳು ,ಮರಗಳ ಮೇಲೆ ,ಸಾಧ್ಯವಿರುವ ಎತ್ತರದ ಸ್ಥಳಗಲ್ಲಿ ನಿಂತುಈ ಮೆರವಣಿಗೆಯನ್ನು ನೋಡಲು ಅಪಾಯವನ್ನು ಮರೆತು ನಿಂತಿರುವವರನ್ನು ದೂರದರ್ಶನ ದಲ್ಲಿ ನೋಡಿದಾಗ ಮೈ ಜುಮ್ಮೆನುಸುತ್ತದೆ .ಅಷ್ಟು ಕಷ್ಟಪಟ್ಟು ಈ ಮೆರವಣಿಗೆಯನ್ನು ನೋಡಬಯಿಸುತ್ತಾರೆ!!?. ಬನ್ನಿಮoಟಪದಲ್ಲಿ ಯನಡೆಯುವ ಬೆಂಕಿಯ ಕ್ರೀಡೆಗಳು ,ಮೋಟಾರ್ byke ಸವಾರ ರ ಮೈನವಿರೆರುಸುವ ಚಮಕ್ತಾರಾಗಳು ನೋಡುಗರ ಕಣ್ಣಿಗೆ ರಸದೌತಣವನ್ನು ನೀಡುತ್ತವೆ .ದಸರಾ ಸಮಯದಲ್ಲಿನ ಚಾಮುಂಡಿ ಬೆಟ್ಟದ ಶೃಂಗಾರ , k R S ನ ವಿಶೇಷ ವೈಭವ ಎಷ್ಟು ನೋಡಿದರು ಸಾಲದು .ಹೀಗಾಗಿ ಇದು ಕರ್ನಾಟಕದ ಸುಂದರ , ಪ್ರಸಿದ್ದ ಇತಿಹಾಸಿಕ ,ಪುರಾಣಿಕ ಸಾಂಸ್ಕೃತಿಕ,ಪ್ರಾಚೀನ ದೇವಾಲಯಗಳನ್ನು ಹೊಂದಿರುವ,ಪ್ರಪಂಚದಾದ್ಯಂತ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವ ಯಾತ್ರಸ್ತಳವಾಗಿದೆ. ಮೈಸೂರಿಗೆ ಭೇಟಿಕೊಟ್ಟ ಪ್ರವಾಸಿಗರು ತಮ್ಮ ಅನುಭವವನ್ನು ನಿಜವಾಗಿಯೂ ಎಂದೂ ಮರೆಯಲು ಸಾಧ್ಯವಾಗದು ?.ನಾನು ಸಹ ಅಲ್ಲಿಗೆ ಅನೇಕ ಬಾರಿ ಬೇಟಿ ಕೊಟ್ಟಿದ್ದರೂ ಇನ್ನೊಮ್ಮೆ ಹೋಗಿ ನೋಡುವ ಆಸೆಯಾಗುತ್ತದೆ.

    ReplyDelete
  2. ಧನ್ಯವಾದಗಳು ಸರ್!
    ಮೈಸೂರಿನ ದಸರಾ ವೈಭವವನ್ನು ನೀವು ಪದಗಳಲ್ಲೇ ಅತ್ಯಂತ ಪ್ರಭಾವಶಾಲಿಯಾಗಿ ಮೇಲಿನ ಅನಿಸಿಕೆಯಲ್ಲಿ ಹಿಡಿದಿಟ್ಟಿದ್ದೀರಿ. ಜನಸಾಗರವನ್ನು ಚಿತ್ರದಲ್ಲಿ ನೋಡುವುದಕ್ಕಿಂತ ಪ್ರತ್ಯಕ್ಷ ಮೈಸೂರಿಗೇ ಹೋಗಿ ನೋಡಿದರೆ, ರೋಮಾಂಚನವಾಗದೇ ಇರಲಾರದು. ನಾಳೆ ಹೇಗಿದ್ದರೂ 'ಜಂಬೂ ಸವಾರಿ', ಮೈಸೂರಿಗೆ ಹೋಗಿಬರೋಣವೇ ಸರ್?

    ReplyDelete
  3. Is that Mysore Palace in the picture?

    ReplyDelete
  4. Yes Deepa. It is Mysore Palace :o)

    ReplyDelete
  5. ಮೂದಲಿಗೆ ತಮಗೆ ದಸರಾ ಹಬ್ಬದ ಶುಭಾಶಯಗಳು

    ReplyDelete
  6. ದಸರಾ ಹಬ್ಬ ನಾಡಿನ ಹಿರಿಮೆಗೆ ಪ್ರತಿಷ್ಟಿತದ ಸಂಕೇತ.ಇಂತಹ ನಾಡ ಹಬ್ಬದ ಬಗ್ಗೆ ಪ್ರಪಂಚದಲ್ಲಿ ಯಾವ ರಾಷ್ಟ್ರದಲ್ಲಿ ಕೇಳಿದರೂ ಸಹ ಮೈಸೂರು ದಸರಾ ಹಬ್ಬದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯವಾಗಿದೆ. ಇಂತಹ ವಿಷಯದ ಬಗ್ಗೆ ಪ್ರಸ್ತಾಪಿಸಲು ನಮಗೆಲ್ಲಾ ತುಂಬಾ ಹೆಮ್ಮೆಯೆನಿಸುತ್ತದೆ. ಕನ್ನಡಿಗರಾದ ನಮಗೆ ಇಂತಹ ರಾಜ್ಯದಲ್ಲಿ ಜನಿಸಿರುವ ನಾವು ನಿಜಕ್ಕೂ ಹೆಮ್ಮೆ ಪಡುವಂತಹ ವಿಷಯವಾಗಿದೆ.
    ಇಂತಹ ವಿಷಯವನ್ನು ನೀವು ಪ್ರಸ್ತಪಿಸಿರುವುದಕ್ಕೆ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
    ಇದರ ಜೊತೆಗೆ ತಾವು ನಮ್ಮ ನಾಡಿನ ಸಂಸ್ಕೃತಿಯನ್ನು ನಾಡಿನಲ್ಲಿ, ಜನರಲ್ಲಿ, ಮತ್ತು ತಿಳಿಯದಿದ್ದವರಲ್ಲಿ ಇಂತಹ ಬರವಣಿಗೆಗಳಿಂದ ಅವರ ಹೃದಯಕ್ಕೆ ನಾಟುವಂತೆ ಮಾಡಿರುತ್ತೀರಿ.ನಮ್ಮ ಜನರು ನಮ್ಮ ನೆಲ, ಜಲ, ಸಂಸ್ಕೃತಿ,ಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಕನ್ನಡ ನಾಡನ್ನು ಮರೆತ ಜನರು ಇದನ್ನು ಓದಿದರೆ ಅವರು ತಕ್ಕ ಮಟ್ಟಿಗೆ ನಮ್ಮ ಸಂಸ್ಕೃತಿಗೆ ತಲೆ ಬಾಗಿ ವಾಪಸ್ಸು ನಮ್ಮ ತಾಯ್ನಾಡಿನ ಬಗ್ಗೆ ಗೌರವ ಬಂದು ವಾಪಾಸ್ಸಾದರೆ ಇದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ .

    ReplyDelete
  7. ಚಂದು, ನನ್ನ ಪುಟ್ಟ ಹಾಗೂ ಸಾಮಾನ್ಯ ಬರವಣಿಗೆಯ ಬಗೆಗೆ ನೀವು ಪ್ರಬುದ್ಧವಾಗಿ ಅರ್ಥೈಸಿ ನಿಮ್ಮ ಅನಿಸಿಕೆ ಬರೆದಿದ್ದೀರಿ; ಧನ್ಯವಾದಗಳು.

    'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ಎನ್ನುವ ನುಡಿಯಂತೆ, ಪಾಶ್ಚಾತ್ಯ ಸಂಸ್ಕೃತಿ ನೋಡಲಷ್ಟೇ ಯೋಗ್ಯ; ಪಾಲಿಸಲು ಅಲ್ಲ. ಅದು ಎಂದಿಗೂ ಸ್ವಂತದ್ದಾಗುವುದಿಲ್ಲ, ಎಂದೆಂದಿಗೂ ಪರಕೀಯವೇ ಸರಿ. ನಿಮ್ಮಲ್ಲಿರುವ ನಾಡು-ನುಡಿಯ ಬಗೆಗಿನ ಅಭಿಮಾನ-ಗೌರವ ಸಂತಸ ತಂದಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ.

    ReplyDelete
  8. Prashant bahala chenagi bardidiri,

    you are very true naavu yavathu nammalli irro richness na arthane madkolodilla adella mugidu hogo volagadru naavella artha madikondu respect madkobeku!!!

    ReplyDelete
  9. ನಿಮ್ಮ comment ನೋಡಿ ತುಂಬಾ ಖುಷಿ ಆಯಿತು ರಮ್ಯ. ಧನ್ಯವಾದಗಳು.

    ಪ್ರತಿಯೊಬ್ಬ ಕನ್ನಡಿಗರೂ ಸಹ ಹೀಗೇ ಯೋಚಿಸುತ್ತೇವೆ, ನಮಗೆಲ್ಲಾ ಗೊತ್ತಿದೆ ನಮ್ಮ ಸಂಸ್ಕೃತಿ ಬಹಳ ಶ್ರೀಮಂತವಾಗಿದೆ ಎಂದು. ಆದರೆ, ನಾವು ಯೋಚಿಸಿದ್ದನ್ನು ಕಾರ್ಯಗತಗೊಳಿಸುವಲ್ಲಿ ವಿಫಲರಾಗುತ್ತಿದ್ದೆವೇನೋ ಎಂಬ ಸಂಶಯ ನನಗೆ?!

    ReplyDelete
  10. ನಿಮ್ಮ ಮಾತು ಅಕ್ಷರ ಸಹ ನಿಜ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಆದರೂ ನಮ್ಮ ಜನರು ಕೇಳ ಬೇಕಲ್ಲ.
    ಅಲ್ಲಿಗೆ ಹೋಗಿ ಅಲ್ಲಿನ ಕಲ್ಲು ಮುಳ್ಳುಗಳ ಜೊತೆ ಕಾಲ ಕಳೆದು ಅದರಿಂದ ಬೇಸತ್ತು ನಮ್ಮ ನದಿಗೆ ಬರುವ ಕಾಲ ಯಾವಾಗ ಬರುತ್ತದೆ ?
    ಎದುರು ನೋಡುತ್ತಾ ಕಾಯೋಣ.
    ಕಲಾಯ ತಸ್ಮೈ ನಮಃ,
    ಶೀಘ್ರವೇ ವಾಪಸ್ಸು ಅಂತಹ ಕಾಲ ಬರಲಿ ಎಂದು ಕಾಯೋಣ. ಬೇರೆದಾರಿ ನಮಗೆ ಇಲ್ಲ ಅಲ್ವ.

    ReplyDelete
  11. ಚಂದು, ಏನನ್ನಾದರೂ ಹೊಸತನ್ನು ನೋಡಿದಾಗ ಅಥವಾ ಕೇಳಿದಾಗ ನಾವು ಅದರ ಬಗ್ಗೆ ಆಸಕ್ತಿ ತೋರಿ, ಅದರಿಂದ ಪ್ರಭಾವಿತರಾಗುವುದು ಸಹಜ - ಇದನ್ನು ಮಾನವನ ಸ್ವಾಭಾವಿಕ ಗುಣ ಎನ್ನಲೂಬಹುದು. ಆದರೆ, ಹೊಸತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೊದಲು ಅದರ ಪೂರ್ವಾಪರಗಳ ಬಗ್ಗೆ ಚಿಂತನೆ ಅಗತ್ಯ. ಬಹುತೇಕ ಮಂದಿ ಇದನ್ನು ಕಡೆಗಣಿಸುತ್ತಾರೇನೋ ಎನ್ನುವುದು ನನ್ನ ಸಂಶಯ?!

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!