Thursday, November 11, 2010

ಕತ್ತಲೆಗೆ ದೂಡಿತು ಬೆಳಕಿನ ಹಬ್ಬ

ಹಬ್ಬಗಳೆಂದರೆ ನಮಗೆಲ್ಲಾ ಎಲ್ಲಿಲ್ಲದ ಸಂಭ್ರಮ; ಅದರಲ್ಲೂ ದೀಪಾವಳಿ ಬಂತೆಂದರೆ, ನಮ್ಮ ಸಡಗರ ಹೇಳತೀರದು. ಅಮ್ಮ ತಯಾರಿಸುವ ರುಚಿಕರ ಬಿಸಿ-ಬಿಸಿ ಕಜ್ಜಾಯದ ಸವಿ ಒಂದೆಡೆಯಾದರೆ, ಅಪ್ಪ ತಂದ ಪಟಾಕಿಗಳ ಅಬ್ಬರ ಮತ್ತೊಂದೆಡೆ; ಹೊಟ್ಟೆಗೂ ಆನಂದ, ಮನಸ್ಸಿಗೂ ಉಲ್ಲಾಸ. ಹಬ್ಬವೆಂದರೆ ಇದಲ್ಲವೇ..!

ಪಟಾಕಿಗಳು ಹಿರಿಯರು-ಕಿರಿಯರು ಎಂಬ ಭೇದವಿಲ್ಲದೆ, ಎಲ್ಲರಲ್ಲೂ ಸಂತಸ-ಹರುಷ ತರುವಂಥವು. ಪಟಾಕಿ ಸಿಡಿಸುವುದರಿಂದ ಹೊರಹೊಮ್ಮುವ Sulphur dioxide ಅನಿಲವು ವರ್ಷದ ಈ ಋತುವಿನಲ್ಲಿ ಪರಿಸರದಲ್ಲಿರುವ ಸಾಂಕ್ರಾಮಿಕ ರೋಗಗಳನ್ನು ಹರಡಬಹುದಾದ ಸೊಳ್ಳೆಗಳಂಥಹ ಅಪಾಯಕಾರಿ ಕೀಟಗಳನ್ನು ನಾಶಪದಿಸುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ, ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾದಲ್ಲಿ, Sulphur dioxide ಅನಿಲವು ಮಾನವರಾದ ನಮಗೂ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಸುದ್ದಿ ಮಾಧ್ಯಮಗಳು ಈ ವರ್ಷ ಬೆಂಗಳೂರಿನಲ್ಲಿ ದೀಪಾವಳಿ ಪ್ರಯುಕ್ತದ ವಾಯು ಹಾಗೂ ಶಬ್ಧ ಮಾಲಿನ್ಯಗಳು ಕಳೆದ ವರ್ಷಕ್ಕಿಂತ ಕಡಿಮೆ ಎಂದು ಅಂಕಿ-ಅಂಶಗಳ ಮೂಲಕ ಪ್ರತಿಪಾದಿಸಿದವು. ಇದು ಮೇಲ್ನೋಟಕ್ಕೆ ಸರಿಯೆನಿಸಿದರೂ ಸಹ, ಎಡೆಬಿಡದೆ ಸುರಿದ ಮಳೆಯಿಂದಾಗಿ ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವವರ ಸಡಗರಕ್ಕೆ ಕಡಿವಾಣ ಬಿದ್ದಿದ್ದಂತೂ ಸತ್ಯ.

ಇವೆಲ್ಲಕ್ಕಿಂತ ಮುಖ್ಯವಾಗಿ, ಈ ಪಟಾಕಿಗಳು ತಂದೊಡ್ಡುವ ಗಂಡಾಂತರಗಳು ಅಷ್ಟಿಷ್ಟಲ್ಲ. ಕಳೆದ ವಾರ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗಳಾಗಿ ಚಿಕಿತ್ಸೆ ಪಡೆದವರ ಸಂಖ್ಯೆ 40 ಎಂದು ಮಿಂಟೋ ಕಣ್ಣಾಸ್ಪತ್ರೆ ಮೂಲಗಳು ತಿಳಿಸಿವೆ. ಅದರಲ್ಲೂ, ಮೂವರು ಪುಟ್ಟ ಬಾಲಕರ ಸ್ಥಿತಿ ಗಂಭೀರವಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಗಳೂ ಇವೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ದುರಾದೃಷ್ಟವೆಂದರೆ, ಈ ಮೂರೂ ಬಾಲಕರ ದೃಷ್ಟಿ ಊನಗೊಳಿಸಿದ್ದು  ಇತರರು ಸಿಡಿಸಿದ ಪಟಾಕಿಗಳು. ನಾವು ಎಷ್ಟೇ ಎಚ್ಚರಿಕೆಯಿಂದ ಪಟಾಕಿ ಸಿಡಿಸಿದರೂ ಸಹ, ಅವುಗಳಿಂದ ಆಗಬಹುದಾದ ಅನಾಹುತಗಳು ಊಹಿಸಲಸಾಥ್ಯ. ಈ ಬಾಲಕರು ದೃಷ್ಟಿ ಕಳೆದುಕೊಂಡಲ್ಲಿ ಬೃ.ಬೆಂ.ಮ.ಪಾ. ಮೇಯರ್ ನಿಧಿಯಿಂದ ತಲಾ 50 ಸಾವಿರ ರುಪಾಯಿಗಳನ್ನು ಪರಿಹಾರ ಧನವಾಗಿ ನಿಡಲಾಗುವುದೆಂದು ಘೋಷಿಸಿದ್ದರೂ ಸಹ, ಅದು ಕಮರಿಹೋದ ಬಾಳಿನ ಬೆಳಕನ್ನು ಮತ್ತೆ ಬೆಳಗಿಸಲಾರದೆಂಬುದು ವಾಸ್ತವ.

ಪಟಾಕಿಗಳಿಂದ ಇಂಥಹ ಎಷ್ಟೋ ಅಮಾಯಕ ಜೀವಗಳು ತಮ್ಮ ದೃಷ್ಟಿ ಕಳೆದುಕೊಂಡು, ಕತ್ತಲೆಯನ್ನೇ ದಿಟ್ಟಿಸಿಕೊಂಡು ಜೀವನ ಸಾಗಿಸುವಂತಾಗಿರುವುದು ದುಖದ ಸಂಗತಿ. ಬೆಳಕಿನ ಈ ಹಬ್ಬವು ಹಲವರ ಬದುಕನ್ನು ಶಾಶ್ವತವಾಗಿ ಕತ್ತಲೆಗೆ ದೂಡಿರುವುದು ದುರಂತ. ದೀಪಾವಳಿ ಹಬ್ಬಾಚರಣೆಯಲ್ಲಿ ಪಟಾಕಿಗಳು ಅನಿವಾರ್ಯವೇ? ದೃಷ್ಟಿ ಕಳೆದುಕೊಂಡವರ ಬಾಳಿನ ಶೋಕಕ್ಕೆ ಸಾಂತ್ವಾನ ಹೇಳುವವರ್ಯಾರು? ಕತ್ತಲಾವರಿಸಿದ ಬದುಕಿಗೆ ಬೆಳಕು ನೀಡುವವರ್ಯಾರು? ನಯನವಿಲ್ಲದೆ ಕಳೆಗುಂದಿದ ಮುಖದಲ್ಲಿ ನಗುವಿನ ರೇಖೆ ಮೂಡಿಸುವವರ್ಯಾರು?

5 comments:

  1. ಪ್ರಶಾಂತ್ ,ಈ ದೀಪಾವಳಿಯ ಸಂದರ್ಭದಲ್ಲಿ ಅನೇಕ ಮಕ್ಕಳು ಪಟಾಕಿಯನ್ನು ಹೊಡೆದೋ ಅಥವಾ ಹೊಡಿಯುವವರ ಹತ್ತಿರ ಹೋದಾಗ ,ಆಕಸ್ಮಿಕವಾಗಿ ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಅವರ ಗ್ರಹಚಾರ ಪಲದಿಂದ ಸಿಡಿದ ಪಟಾಕಿಯಿಂದ ದೃಷ್ಟಿ ಕಳೆದುಕೊಂಡವರನ್ನು,ಗಾಯಗೊಂಡವರನ್ನು , ದಿನಪತ್ರಿಕೆ ,ದೂರದರ್ಶನದಲ್ಲಿ ನೋಡಿ ಬಹಳ ನೋವಾಯಿತು .ಇದಕ್ಕೆಲ್ಲಾ ಕಾರಣ ಮಕ್ಕಳ ಪಟಾಕಿ ಹುಚ್ಚು ಮತ್ತು ದೊಡ್ಡವರ ಎಲ್ಲಮನೆಯವರಿಗಿಂತ ಹೆಚ್ಚು ಪಟಾಕಿ ಹೊಡೆಸಬೇಕೆಂಬ ಹುಚ್ಚು ಹಂಬಲ !.ಇದರಿಂದಾಗಿ ಶಬ್ಧಮಾಲಿನ್ಯ ,ಪರಿಸರಮಾಲಿನ್ಯ ,ಮತ್ತು ಮಕ್ಕಳಿಗೆ ಅಂಗವಿಕಲತೆ ಯನ್ನು ಉಂಟುಮಾಡುವ ಒಂದು ಸಾಧನವಾಗಿ ಪರಿಣಮಿಸಿದೆ !.ಅನೇಕ ಹೃದಯಸಂಬಂದಿ,ಸ್ವಾಶಕೋಶದ ರೋಗಿಗಳು ,ಶಬ್ದ ಹಾಗು ಹೊಗೆಯಿಂದ ರೋಗ ಉಲ್ಬಣಗೊಂಡು ತೊಂದರೆಯನ್ನು ಪಡುವುದನ್ನು ಕಾಣುತಿದ್ದೇವೆ?.ಈ ಎಲ್ಲಾ ವಿಷಯಗಳು ವಿದ್ಯಾವಂತವರಾದ ನಮಗೆಲ್ಲರಿಗೂ ಗೊತ್ತಿದ್ದೂ ಇದನ್ನು ಮುಂದವರಿಸಿಕೊಂಡು ಹೋಗುತಿದ್ದೇವೆ .!ನನ್ನಮಟ್ಟಿಗೆ ಹೇಳಬೇಕೆಂದರೆ ಈ ಸಾರಿ ನಾನು ಯಾವುದೇ ಒಂದು ಪಟಾಕಿಯನ್ನು ನಮ್ಮಮನೆಯವರಿಂದ ಹೊಡಸದೆ ಬರೀ ದೀಪಗಳನ್ನು ಮಾತ್ರ ಹಚ್ಚಿ , ಶಬ್ಧಮಾಲಿನ್ಯ ,ಪರಿಸರಮಾಲಿನ್ಯವನ್ನು ಕಾಪದಿದ್ದೇನೆ .ಮುಂದೆಯೂ ಇದೇರೀತಿ ನಡೆದುಕೊಳ್ಳುತ್ತೇನೆ ,ಇದರಿಂದಾಗಿ ಆಗುವ ಅನಾಹುತಗಳು ,ಮತ್ತು ತೊಂದರೆಗಳು ತಪ್ಪುತ್ತವೆ !ಇನ್ನುಮುಂದೆಯಾದರೂ ಮುನ್ನೆಚ್ಚರಿಕೆ ತೆಗದುಕೊಂಡು ,ಇದನ್ನು ಪಾಲಿಸಲು ಎಲ್ಲರೂ ಸಹಕರಿಸುವರೆಂದು ಭಾವಿಸುತ್ತೇನೆ .ಗಾಯಗೊಂಡ ,ದೃಷ್ಟಿ ಕಳೆದುಕೊಂಡ ಮಕ್ಕಳೆಲ್ಲರೂ ಬೇಗಗುಣಮುಖರಾಗಲಿ ಎಂದು ದೇವರಲ್ಲಿ ಈ ಮೂಲಕ ಪ್ರಾರ್ಥಿಸುತ್ತೇನೆ .

    ReplyDelete
  2. ಮೊದಲಿಗೆ ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು.
    ಕತ್ತಲಿನಿಂದ ಬೆಳಕಿನಡೆಗೆ ನಡೆಸುವ ಎ ಹಬ್ಬದ ದಿನ ಪಟಾಕಿ ಸಿಡಿಸುವ ನಮ್ಮ ಎಲ್ಲಾ ನಮ್ಮ ಜನರಿಗೆ ಹೆಚ್ಚರವಾಗಿರಲು ಕೋರುತ್ತೇನೆ.
    ನಿಮ್ಮ ಪ್ರೀತಿಯ ಚಂದ್ರು.

    ReplyDelete
  3. hey! Heard you're getting married on the 28th!
    Congratulations! =)
    But.... wait for it....
    know what? 27th November is my birthday!
    Now, you can remember that easily!
    Have a merry married ride together!
    And keep reading!

    ReplyDelete
  4. ಕೇಶು ಸರ್, ನಿಮ್ಮ ನಿರ್ಧಾರ ಅತ್ಯಂತ ಸ್ವಾಗತಾರ್ಹ. ನಾವು ಪಟಾಕಿ ಸಿಡಿಸುವುದನ್ನು ಸಾಧ್ಯವಾದಷ್ಟೂ ನಿಯಂತ್ರಣದಲ್ಲಿಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದರಿಂದ ಪರಿಸರಕ್ಕೂ ಹಾಗೂ ನಮಗೂ ಉಪಯೋಗವಿದೆ.

    ಚಂದು, ಧನ್ಯವಾದಗಳು. ನಿಮಗೂ ಸಹ ದೀಪಾವಳಿ ಹಬ್ಬದ ಶುಭಾಶಯಗಳು. ಈ ಬೆಳಕಿನ ಹಬ್ಬವು ನಿಮ್ಮ ಜೀವನವನ್ನು ಯಶಸ್ಸಿನತ್ತ ಕೊಂಡೊಯ್ಯಲಿ ಎಂಬುದು ನನ್ನ ಹಾರೈಕೆ.

    ReplyDelete
  5. Chaitra, firstly, welcome to my Blog!

    Oh! Then, I can never forget you and your birthday for life. So nice of you for sharing it. Wish you have happy birthday celebrations in advance.

    Thanks for your wishes, do make it to our marriage :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!