Monday, February 21, 2011

ಮಳೆ ಬಂತು ಮಳೆ..

Courtesy : Google Images
ಇಂದು ಸಂಜೆ ಇದ್ದಕ್ಕಿದ್ದ ಹಾಗೆ ಬೆಂಗಳೂರಿನಲ್ಲಿ ಅಲ್ಲಲ್ಲಿ ಮೆಳೆಯಾಯಿತು; ಮೆಳೆ ಅಕಾಲಿಕವೆನಿಸಿದರೂ, ಬಿಸಿಲಿನ ಬೇಗೆಯಿಂದ ಬಳಲಿದ್ದ ಜೀವಗಳಿಗೆ ತಂಪನ್ನು ತಂದಿತು. ಕಳೆದ ಮೂರ್ನಾಲ್ಕು ದಿನಗಳಿಂದ ನೀಲಿ ಆಕಾಶವನ್ನು ಮರೆಮಾಚುತ್ತಿದ್ದ ದಟ್ಟ ಕಪ್ಪು ಮೋಡಗಳು ಇಂದು ದಯೆತೋರಿ ಧರೆಗಿಳಿದಿದ್ದವು. Bike ನಲ್ಲಿ ಹೋಗುತ್ತಿದ್ದ ನಾನು, ಮೆಳೆಯಲ್ಲಿ ನೆನೆಯಬಾರದೆಂದು ರಸ್ತೆ ಬದಿಯ ಮರವೊಂದರ ಕೆಳಗೆ ಆಶ್ರಯ ಪಡೆದು ನಿಂತೆ. ಭೂಮಿಗೆ ನೋವಾದೀತೆಂಬಂತೆ ಬಾನಿನಿಂದ ನಯವಾಗಿ ಜಾರುತ್ತಿದ್ದ ಮಳೆಹನಿಗಳ ಜೊತೆಗೆ ನನ್ನ ಮನಸ್ಸು ಬಾಲ್ಯದ ಸವಿನೆನಪುಗಳೆಡೆಗೆ ಜಾರಿಕೊಂಡಿತು..
ಧೋooo ಎಂದು ಸುರಿಯುತ್ತಿದ್ದ ಮೆಳೆಯ ಸೊಬಗನ್ನು ಅರ್ಧ ತೆರೆದ ಕಿಟಕಿಯಿಂದ ಇಣುಕಿ ನೋಡುತ್ತಿದ್ದ ನೆನಪು..

ರಸ್ತೆಯ ಬದಿಗುಂಟ ಹರಿಯುತ್ತಿದ್ದ ಮೆಳೆ ನೀರಿನಲ್ಲಿ 'paper boat' ಮಾಡಿ ಬಿಡುತ್ತಿದ್ದ ನೆನಪು..

ಸಜ್ಜೆಯಿಂದ ಪೈಪಿನಲ್ಲಿ ಸುರಿಯುತ್ತಿದ್ದ ಮಳೆನೀರಿಗೆ ಕೈ ಅಡ್ಡ ಹಿಡಿದು ನಲಿಯುತ್ತಿದ್ದ ನೆನಪು..

ಮೆಳೆಯಲ್ಲಿ 'foot ball' ಆಡಿ ಶನಿವಾರದ 'white uniform' ಕೊಳೆಮಾಡಿಕೊಂಡು ಅಮ್ಮನಿಂದ ಏಟು ತಿನ್ನುತ್ತಿದ್ದ ನೆನಪು..

ಬ್ಯಾಗಿನಲ್ಲಿದ್ದ ಕೊಡೆಯನ್ನು ಬಿಡಿಸದೆ, ಮಳೆಯಲ್ಲಿ ನೆನೆಯುತ್ತಾ ಶಾಲೆಯಿಂದ ಮೆನೆಗೆ ನಡೆದು ಬರುತ್ತಿದ್ದ ನೆನಪು..

ರಸ್ತೆಯಲ್ಲಿ ಹರಿಯುವ ಮಳೆನೀರಿಗಡ್ಡಲಾಗಿ ನಡೆದು shoes ನೆನೆಸಿಕೊಳ್ಳುತ್ತಿದ್ದ ನೆನಪು..

ಮಳೆಯಲ್ಲಿ ನೆಂದು, ಜ್ವರ ಬಂದು ಶಾಲೆಗೆ ಚಕ್ಕರ್ ಹಾಕಿ ಮನೆಯಲ್ಲೇ ಇದ್ದು TV ನೋಡುತ್ತಿದ್ದ ನೆನಪು..

ರಸ್ತೆಯಲ್ಲಿ ನಿಂತ ಮೆಳೆ ನೀರನ್ನು ಸಿಡಿಸುತ್ತಾ ಜೋರಾಗಿ bicycle ಓಡಿಸುತ್ತಿದ್ದ ನೆನಪು..

ಜೋರು ಮಳೆಯಲ್ಲೂ ಬಸ್ಸಿನ ಕಿಟಕಿ ಮುಚ್ಚದೆ ಕುಳಿತು ಇತರರಿಂದ ಬೈಸಿಕೊಳ್ಳುತ್ತಿದ್ದ ನೆನಪು..

ಮಳೆಯಿಂದ current ಇಲ್ಲದಾಗ, candle ಬೆಳಕಿನಲ್ಲಿ ಗೋಡೆಯ ಮೇಲೆ shadow parrot ಮಾಡಿ ನಲಿಯುತ್ತಿದ್ದ ನೆನಪು..

ಕಿಟಕಿಯಿಂದಾಚೆಗೆ ಮಳೆಹನಿಗಳನ್ನು ದಿಟ್ಟಿಸುತ್ತಾ, ಮಳೆಯ ಸದ್ದಿನ ಜೋಗುಳಕ್ಕೆ ಸೋತು ಅಮ್ಮನ ಮಡಿಲಿನಲ್ಲಿ ಬೆಚ್ಚಗೆ ನಿದ್ರೆ ಮಾಡುತ್ತಿದ್ದ ನೆನಪು..

ಬಾಲ್ಯದ ಸವಿನೆನಪುಗಳಲ್ಲಿ ಮುಳುಗಿಹೋಗಿದ್ದ ನನ್ನನ್ನು ರಸ್ತೆಗಿಳಿದಿದ್ದ ವಾಹನಗಳ horn ಸದ್ದು ಎಚ್ಚರಿಸಿತು. ಮಳೆ ನಿಂತಿದ್ದರಿಂದ bike ಸವಾರರೆಲ್ಲ ಆತುರಾತುರವಾಗಿ ಮನೆ ಸೇರುವ ತವಕದಲ್ಲಿ ಇತರೆ ವಾಹನಗಳಿಗಡ್ಡಲಾಗಿ ಸಾಗುತ್ತಿದ್ದರು. ಮರದ ಎಲೆಗಳ ಅಂಚಿನಿಂದ ಜಾರುತ್ತಿದ್ದ ಮಳೆಯ ಹನಿಗಳು ನನ್ನನ್ನು ಸಾಕಷ್ಟು ನೆನೆಸಿದ್ದವು. ಬೇರೆ ದಾರಿ ಇಲ್ಲದೆ ಹಿತವೆನಿಸುತ್ತಿದ್ದ ಮರದ ಆಶ್ರಯದಿಂದ, ಬೆಚ್ಚಗಿನ ಬಾಲ್ಯದ ಸವಿನೆನಪುಗಳಿಂದ ಹೊರಬಂದು bike ಏರಿ ಮನೆಯ ದಾರಿ ಹಿಡಿದು ಹೊರಟೆ..

10 comments:

  1. Thanks, Deepa. Got the pic from Google and edited in Photoshop to give a glass-foggy appearance :o)

    ReplyDelete
  2. evocative piece. maley nam childhood ge yeshtu connected alwa? rain & memories of playing in it as a child is a part of the flashback images of most people. somehow, now that we are all 'grown up', we cant make a mess of ourselves in the rain like we did back then. tumbalarada nashta :)

    ReplyDelete
  3. ಹೌದು, ಸುಜಾತ. ಬಾಲ್ಯ ಹಾಗೂ ಮಳೆ ಇವುಗಳದ್ದು ಅವಿನಾಭಾವ ಸಂಬಂಧ; ಆ ನೆನಪುಗಳ ಗುಂಗಿನಲ್ಲಿ ಸಂಭ್ರಮಿಸುವುದಷ್ಟೇ ನಮಗೆ ಅದೃಷ್ಟ. ನಾವು ಎಷ್ಟೇ ಬೆಳೆದು ದೊಡ್ಡವರಾದರೂ ಸಹ, ಮಳೆಯು ನಮ್ಮೊಳಗಿನ ತುಂಟ-ಪುಟ್ಟ ಮಗುವನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತದೆ.

    ನೀವು ಕನ್ನಡಿಗರೆಂದು ತಿಳಿದು ಸಂತಸವಾಗಿದೆ. ನಿಮ್ಮ ಅನಿಸಿಕೆಗಳಿಗೆ ತುಂಬುಹೃದಯದ ಧನ್ಯವಾದಗಳು :o)

    ReplyDelete
  4. hey m a proud kannadiga. m from mangalore. adrey nan kannada nimmashtu bhayankara illa bidi.
    ''avinabhava'' aa word odakkey swalpa time bekaitu nange. new word. :)

    ReplyDelete
  5. ಹೆಮ್ಮೆಯ ಕನ್ನಡತಿಗೆ ಜಯವಾಗಲಿ!! :D

    'ಅವಿನಾಭಾವ' - ಈ ಪದ ಎಲ್ಲೋ ಓದಿದ ನೆನಪು, ಪುನರುಚ್ಚರಿಸಿದ್ದೇನೆ ಅಷ್ಟೇ.

    ನನ್ನ ಕನ್ನಡ 'ಭಯಂಕರ' ಎನ್ನುವಷ್ಟು ಕೆಟ್ಟದಾಗಿದೆ ಎಂದು ತಿಳಿದಿರಲಿಲ್ಲ. Will definitely make sincere efforts to improve upon :o)

    ReplyDelete
  6. ri nam kadey bhayankara andrey "excellent" antha. its a compliment marayrey :0

    ReplyDelete
  7. ಒಹ್! ಹಾಗಾ.. ಸರಿ ಮಾರಾಯ್ರೆ. Thanks for the compliment Sujatha. I knew that, but was just kidding :o)

    ReplyDelete
  8. ಮಳೆ ಆಹಾ.. ಅದರ ನೆನಪುಗಳೇ ಮನಸ್ಸನ್ನ ನೆನೆಸಿಬಿಡುತ್ತದೆ.. ನಿಮ್ಮ ಬರವಣಿಗೆ ನೋಡಿ ನನಗೊಂದಷ್ಟು ಸೇರಿಸುವ ಮನಸಾಯಿತು..

    ೧) ಮಳೆ ಬಂದಾಗ ಅಮ್ಮ ಮಾಡಿ ಕೊಟ್ಟ ಬಜ್ಜಿ ಪಕೋಡದ ನೆನಪು..
    ೨) ಅಮ್ಮ ಬೈಯುತ್ತಿದ್ದರೂ "ಇದೊಂದೇ ಬಾರಿ ಅಮ್ಮ ಪ್ಲೀಸ್.. " ಎಂದು, ಕೈಯನ್ನು ಆಕಾಶದೆಡೆಗೆ ಚಾಚಿ, ಮುಖವನ್ನ ಹನಿಗಳ ಚುಂಬನಕ್ಕೆ ಒಡ್ಡುವ ನೆನಪು
    ೩) ಓದಿ ಹೋಗಿ ಒಣಗಿರೋ ಬಟ್ಟೆ ತರೋ ನೆನಪು
    ೪) ಕಿಟಕಿ ಬದಿಯಲ್ಲಿ ಕೂತು, ಮಳೆ ನೋಡುತ್ತಾ, ಬಿಸಿ ಬಿಸಿ ಕಾಫಿ ಸವಿಯೂ ನೆನಪು
    ೫) ಕೆಸರು ನೀರಿನಲ್ಲಿ ತಕ ತಕ ಕುಣಿದ ನೆನಪು
    ೬) ಆಲಿ ಕಲ್ಲು ಬಿದ್ದರೆ, ಅದು ಎಷ್ಟು ಆರಿಸಿದೆವು ಎಂದು ಜಗಳ ಆಡಿದ ನೆನಪು
    ೭) ಬೆಳಿಗ್ಗೆ ಮಳೆ ಬರುತ್ತಿದ್ದರಂತೂ, ಶಾಲೆಗೆ ಹೋಗುವ ಮನಸೇ ಇಲ್ಲದ ನೆನಪು..

    ReplyDelete
  9. ಸಹನೆ-ಯವರೆ, ನನ್ನ Blog ಗೆ ನಿಮಗೆ ತುಂಬುಹೃದಯದ ಸ್ವಾಗತ :o)

    ಮಳೆಯ ಬಗೆಗಿನ ನಿಮ್ಮ ಅನುಭವಗಳು ನಮ್ಮೊಳಗಿನ ಬೆಚ್ಚನೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿವೆ. ಧನ್ಯವಾದಗಳು!

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!