Sunday, August 29, 2010

do WE matter??

Who Matters?
Honorable Finance Minister, Mr. Pranab Kumar Mukherjee was in the Loksabha Sessions lately when his cell phone rang! Who else can manage to get the cell phone number of a Finance Minister? It should definitely be a very important caller at the other end. No other ways, Mr. Pranab Mukherjee had to attend the call. It was indeed embarrassing for him, as it was a 'promotional call' from the service provider. Pheww!

Well, now.. how can such thing happen to a Finance Minister? That too when he was attending Loksabha Sessions? (What happens in the Sessions? Need not be mentioned I guess.. its rather an Open Secret, live telecast) Something should be done about this!

Youngest ever MP in the history of Indian Parliament, presently the Minister of State in the Ministry of Communications and Technology, Mr. Sachin Pilot was all set to take brisk action against these 'unwanted calls'. Soon he gave a statement to Media "Government will take necessary action to completely ban such unwanted calls and SMS". He continued "Unwanted Calls are now a menace, which doesn't exist in any other Country. Mobile Phone service providers are already been instructed to stop such Calls & SMS gradually". Exceptional, isn't it? Young blood has already started to change things around.

In any given single day, I do receive such unwanted calls and sms, at least about 5 to 10 each on my cell phone. Me having two of them, makes life worse. It wouldn't be an exaggeration if said that each one of us having a cell phone are receiving such unwanted calls and sms (as what I do) every day. It's almost like part and parcel of our daily life!

When just a single call to a Finance Minister can result in totally banning unwanted calls and sms in the Country, why not for our sake? Isn't it a menace for every citizen too? Is this the way we are treated by our Democracy? Somewhere (at least..), do WE all really matter to someone (at least..)? I just doubt it.

Friday, August 27, 2010

ಸ್ಪೂರ್ತಿ

"ದುಡಿಮೆಯೇ ದೇವರು"

"ಕೈ ಕೆಸರಾದರೆ ಬಾಯ್ ಮೊಸರು"

"ಒಹ್! ಏನಪ್ಪಾ ಇವ್ನು, ಗಾದೆ ಹೇಳೋಕ್ ಶುರು ಮಾಡ್ಬಿಟ್ಟ?" ಅನ್ಕೊತಿದ್ದೀರ? ಹಾಗೇನಿಲ್ಲ ಬಿಡಿ. ಸುಮ್ನೆ ನೆನ್ಪಾಯ್ತು, ಹೇಳ್ದೆ ಅಷ್ಟೇ. "ಆದ್ರೂ.. ಏನಾದ್ರೂ ಕಾರ್ಣ ಇರ್ಬೇಕಲ್ವಾ?" ಅಂದ್ರ? ಹೌದು ಹೌದು.. ಕಾರ್ಣ ಇದೆ, ಹೇಳ್ತೀನಿ..

ಬರ್ತಾ ಬರ್ತಾ ನಾನು ಕೊಂಚ (ಜಾಸ್ತಿನೆ ಅಂತ ಇಟ್ಕೋಳಿ) ಸೋಮಾರಿ ಆಗ್ತಾ ಇದ್ದೀನಿ ಅನ್ಸುತ್ತೆ! ಅದೇನೋ ಹೇಳ್ತಾರಲ್ಲ "ರಾಯರ ಕುದುರೆ ಕತ್ತೆ ಆಯ್ತು" ಅಂತ.. ಯಾಕೋ "ಗಾದೆ moodನಲ್ಲಿದ್ದಾನೆ" ಅಂದ್ಹಾಗಾಯ್ತು?? ಇಲ್ಲ ಇಲ್ಲ, ಇದೇ last ಗಾದೆ. "ಹಾಗಾದ್ರೆ ಮೊದ್ಲು ಪಾದರಸ ಥರಾ ಇದ್ಯಾ?" ಅಂತ ನೀವು ಕೇಳೋಕ್ ಮುಂಚೆನೇ ಹೇಳ್ಬಿಡ್ತೀನಿ.. ನನ್ಗೆ ಬುದ್ಧಿ ತಿಳ್ದಾಗಿಂದನೂ ನಾನ್ ಶುದ್ಧ ಸೋಮಾರಿನೇ.. ಯಾಕೆ ಅಂತ ಗೊತ್ತಿಲ್ಲ! ನನ್ ಕಥೆ ಬಿಡಿ ಇಲ್ಲಿಗೇ.. ಇವ್ರನ್ನ ಒಮ್ಮೆ ನೋಡಿ..

ಜೀವನೋತ್ಸಾಹ?!

ಹೆಸರು ಕೇಳಿಲ್ಲ, ವಯಸ್ಸು ಗೊತ್ತಿಲ್ಲ! ಸುಮಾರು 75 ಇರ್ಬಹುದಲ್ವ? ಹಾಗೆ ಕಾಣ್ತಾರೆ! ನಮ್ ಮನೆ ಹತ್ರ ಇರೋ IBP ಪೆಟ್ರೋಲ್ ಬಂಕ್ ನಲ್ಲಿರೋ Emission Test Center ಗೆ ಬೈಕು, ಕಾರು ತಗೊಂಡು ಹೋದಾಗ್ಲೆಲ್ಲ ಇವ್ರು ಸಿಕ್ತಾರೆ; ಅಲ್ಲೇ ಕೆಲ್ಸ ಮಾಡೋದು ಇವ್ರು. ಹೆಚ್ಗೆ ಮಾತಾಡಲ್ಲ.. ಕೆಲ್ಸ ಎಷ್ಟೋ ಅಷ್ಟೇ.. (ನಮ್ ರಾಜ್ಕಾರ್ಣಿಗಳ್ನ ಇವ್ರ ಜೊತೆ ಬಿಡ್ಬೇಕು ಸ್ವಲ್ಪ ದಿನ) ಇವರ್ನ ನೋಡ್ತಾ ಇದ್ರೆ, ಯಾಕೋ ಗೊತ್ತಿಲ್ಲ, ತುಂಬಾ ಗೌರವ ಕೊಡ್ಬೇಕು ಅನ್ಸುತ್ತೆ.. ಕೊಡ್ತೀನಿ ಕೂಡ. ಮೊನ್ನೆ ಬೈಕ್ ತಗೊಂಡ್ Emissoin Test ಗೆ ಹೋಗಿದ್ದಾಗ, Deccan Herald ಓದ್ಕೊಂಡ್ ಕುತಿದ್ದ್ರು! ಮನೇಗ್ ಬರೋ Hindu paperನ ನಾನು ಎಷ್ಟೋ ಸರ್ತಿ ಮುಟ್ಟೋದೇ ಇಲ್ಲ.. "ಅದು ನಿನ್ ತಪ್ಪು" ಅಂತಿರ? ಹೋಗ್ಲಿ ಬಿಡಿ. ಬೈಕ್ Emission Test ಆದ್ಮೇಲೆ, 30 ರುಪಾಯ್ ಕೊಟ್ಟು ಕೇಳ್ದೆ:
"ಕಾಫಿ ಆಯ್ತಾ ಸಾರ್?".. ಅವ್ರ್ ಜೊತೆ ಮಾತಾಡೋಕೆ ನನ್ಗೆ ಒಂದ್ ನೆಪ ಬೇಕಿತ್ತು ಅಷ್ಟೇ!
"ಕಾಫಿ-ಟೀ ಕುಡ್ಯೋದು ಅಪ್ರೂಪ ಸಾರ್".. ನನ್ಗೆ ಅವ್ರು ಸಾರ್ ಅಂದಿದ್ ಕೇಳಿ ಒಂಥರಾ (ಮುಜುಗರ) ಆಯ್ತು.
"ಈ ವಯಸ್ನಲ್ಲೂ ಕೆಲ್ಸ ಮಾಡ್ತೀರಲ್ಲ..?!" ಅದು ಪ್ರಶ್ನೆನೋ ಅಥ್ವಾ ಪ್ರಶಮ್ಸೇನೋ ನಂಗೇ ಗೊತ್ತಿರ್ಲಿಲ್ಲ.
"ಏನ್ ಮಾಡೋದು? ಮನೇಲಿ ಸುಮ್ನೆ ಕೂತ್ಕೋಳೋಕೆ ಆಗಲ್ಲ.. ಜೀವ್ನನೂ ನಡೀಬೇಕಲ್ಲ ಸಾರ್"
"ಸರಿ, ಬರೋಣ ಸಾರ್?" ಮುಂದೆ ನನ್ಗೆ ಮಾತಾಡೋಕೆ ಆಗ್ಲಿಲ್ಲ!
"Ok ಸಾರ್.." ಅವ್ರು ಮತ್ತೆ paper ತಗೊಂಡು ಕೂತ್ರು..

ಇಂಥ ಇಳಿ ವಯಸ್ನಲ್ಲೂ ಅವ್ರ್ಗೆ ಎಂಥಾ ಹುಮ್ಮಸ್ಸು ಅಲ್ವಾ? ನೋಡ್ತಿದ್ದ್ರೆ ಖುಷಿ-ನಾಚ್ಕೆ ಎರ್ಡೂ ಆಗುತ್ತೆ! ಈಗ್ಲೇ ಹೀಗಿರೋ ನಾನು ವಯಸ್ಸಾದ್ಮೇಲೆ ಇನ್ಹೇಗೋ??! ತಲೆ ಕೂದ್ಲು ಬಿಳಿಗಾದ್ರೂ ಜಿವ್ನದ್ ಬಗ್ಗೆ ಯೋಚ್ನೆ ಮಾಡೂ seriousness ಬಂದಿಲ್ಲ. "ಹೇಗೋ ನಡಿತಾ ಇದೆ!" ಅಷ್ಟೇನಾ ನನ್ ಕಥೆ?! ಹೀಗಿದ್ದ್ರೆ, ದೇಹಕ್ಕಿಂತ ಮನಸ್ಗೆ ಬೇಗ ವಯಸ್ಸಾಗೊಗತ್ತೆ ಅಲ್ವಾ? ಜೀವನ್ದಲ್ಲಿ, ಕೆಲಸ್ದಲ್ಲಿ ಜವಾಬ್ದಾರಿ ತಗೊಂಡು, ಇಳಿ ವಯಸ್ನಲ್ಲಿ ಇನ್ನೊಬ್ರಿಗೆ ಹೊರೆ ಆಗ್ದೆ, ಯಾರ್ನೂ ನಮ್ಬ್ಕೊಳ್ದೆ ಬದುಕ್ತಾ ಇರೋ ಇವ್ರನ್ನ ನೋಡಿದ್ರೆ, ಅದೇನೋ ಖುಷಿ.. ಸ್ಪೂರ್ತಿ.. ಪ್ರತಿ ಸರ್ತಿ ಆಕಡೆ ಹೋದ್ರೆ, ತಿರ್ಗಿ ನೋಡಿ ಮನ್ಸಲ್ಲೇ ಇವ್ರಿಗೆ ತಲೆ ಬಾಗ್ತಿನಿ; ಅವ್ರಲ್ಲಿರೋ ಆ ಒಳ್ಳೆ ಗುಣ, ಜೀವನೋತ್ಸಾಹ, ಹುಮ್ಮಸ್ಸು, ಚೈತನ್ಯ ನನ್ಗೂ ಸ್ವಲ್ಪ ಬರ್ಲಿ ಅಂತ..

Sunday, August 22, 2010

Gobi Manchurian, love it?

Be it a posh 5-Star hotel or a road-side eatery, Gobi Manchurian - basically a Chinese preparation finds it's existence everywhere in Bengaluru. The weather is so chill, been raining all day yesterday; I just am planning to hang out to eat something hot, tasty and spicy - Gobi Manchurian, so very yummy!

Gobi Manchurian
Errrrr.. the sun (looking at the sky) hasn't yet sunk, the real pleasure of eating Gobi Manchurian is at its best during night (no idea, why?!). Let me share something with you while the sun slowly finds his way to the other side of the world.

A couple of weeks ago, on my way back from office, stuck in the City's usual congested traffic, I happen to see a bunch of fresh, delicious, clean, healthy-looking Cauliflower piled up in a vegetable shop. They were so clean and fresh-looking; I don't ever remember even Mom managing to clean them so good at kitchen! I was all tempted to buy a couple of them; but the (really) slow moving traffic kept me off.

Fresh Cauliflower
Very recently (may be a couple of days ago), when having dinner (that's the time I usually manage to watch Television), TV-9 anchored a program in which the secret of the 'freshness' of Cauliflower was unveiled - ENDOSULFAN.

Callisulfan

Endosulfan is a colorless organochloride compound, widely used as a pesticide (insecticide & acaricide) against whiteflys, aphids, leafhoppers, potato beetles and cabbage worms. Use of this poisonous compound is banned in most of the Countries across the world; but, India still remains the world's largest producer & largest user of Endosulfan. Manufactured by Hindustan Insecticides Ltd. (a Govt. of India Enterprise - www.hil.gov.in), the product is marketed with a statutory note to be sparingly used. Practically, farmers are reported to be using the pesticide enough to make sure that abundant residues are stuffed-in to the Cauliflower before harvesting. Adding to this, farmers are taking all the pain to dip each and every single harvested Cauliflower in a bucket-full of Endosulfan solution (huhhh!) and make it look absolutely clean before dumping them to the Market to get a HANDsome money in return.

Endosulfan is reported to be acutely neurotoxic to insects and mammals, including humans. It adversely affects the Central Nervous System (CNS), Cardiovascular, Respiratory systems and also impairs Hepatic functions. Its severity of action during Pregnancy is shocking, resulting in major physical abnormalities in the new born. It is powerful enough to affect even the animals, substantiating evidences speak the truth. Googling a bit about Endosulfan, I found its extensive use in Kasaragod district of Kerala from the late 70s to 2001 has resulted in a tragedy, that continues to exist even today.

Endosulfan Victims in Kasaragod (Kerala)
Before Govt. of India takes any crucial & firm decision, how many dumb animals are to be disabled? How many more of us should fall victims to this deadly poison?? How many innocent children are to be born disabled for life??? How far the residues of Endosulfan are to be added to the Environment in alarming quantities????

Well, forget all these debate. Now, its time for me to order a plate full of 'Endosulfan Gobi Munchurian'. Are you game for it as well?

Friday, August 20, 2010

ಬಸವನ ಹುಳು

ನಿನ್ನೆ ಬೆಳಿಗ್ಗೆ, ಕಛೇರಿ ತಲುಪಿದವನೇ ನನ್ನ ಕೊಠಡಿಯ ಹೊರಗಿರುವ ಚಿಕ್ಕ ಬಯಲಿಗೆ ಬಂದು, ಮೋಡಗಳ ಹಿಂದಿನಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಸೂರ್ಯನಿಗೆ ಮೈಯೊಡ್ಡಿ ನಿಂತೆ. ಅದೇನೋ ಒಂದು ವಿಶಿಷ್ಟ ಅನುಭವ! ಕ್ಷಣಕಾಲ ಸೂರ್ಯನ ಕಿರಣಗಳು ನನ್ನನ್ನು ಮುಟ್ಟಿ ಬೆಚ್ಚಗಿನ ಅನುಭವವನ್ನು ಕೊಟ್ಟರೆ; ಮರುಕ್ಷಣ, ಸೂರ್ಯನನ್ನು ಮುಸಿಕಿದ ಮೋಡಗಳ ಹಿಂದೆಯೇ ಬೀಸಿದ ಚಳಿಗಾಳಿಯು ಮೈ ನಡುಗಿಸಿಬಿಟ್ಟಿತು. ಹೀಗೆ ಚಳಿಯಿಂದ ದೂರವಿರಲು ಕೈಗಳೆರಡನ್ನೂ ಕಿಸೆಯೊಳಗಿಟ್ಟು, ಸೂರ್ಯ-ಮೋಡ-ಗಾಳಿ ಇವುಗಳ ಚೆಲ್ಲಾಟದ ಆನಂದವನ್ನು ಮನಸ್ಸಿನಲ್ಲೇ ಸವಿಯುತ್ತಿದ್ದ ನನ್ನನ್ನು ಅಲ್ಲೊಂದು ಪುಟ್ಟ "ಜೀವಿ"ಯು ಕೈಬೀಸಿ ಕರೆದಿತ್ತು..

ಬಸವನ ಹುಳು

ಸದ್ದಿಲ್ಲದಂತೆ ಅದರ ಸಮೀಪಕ್ಕೆ ಹೋಗಿ ಕುಳಿತೆ; ಪ್ರಕೃತಿಯ ಮನಮೋಹಕ ಸೃಷ್ಟಿಯೇ ಮೈತಾಳಿದಂತೆ ಬಸವನ ಹುಳುವೊಂದು ತನ್ನ ಸುತ್ತಲಿನ ಪ್ರಪಂಚದ ಗೊಡವೆಯೇ ಇಲ್ಲವೇನೋ ಎಂಬಂತೆ ತನ್ನ ಪಾಡಿಗೆ ತಾನು ಹುಲ್ಲಿನ ಮೇಲೆ ನಿಧಾನವಾಗಿ ಹರಿಯುತಲಿತ್ತು. ಎಂತಹ ಅದ್ಭುತ ಸೃಷ್ಟಿ; ಮುಷ್ಟಿಯಲ್ಲೊಮ್ಮೆ ಹಿಡಿದು ತುಸು ಒಸಕಿದರೆ ಇನ್ನಿಲ್ಲವಾಗುವಂತಹ ಸೂಕ್ಷ್ಮ-ಕೃಷ ದೇಹದೊಳಗೆ ಅದೆಂತಹ ಸೌಂದರ್ಯನ್ನು ತುಂಬಿಕೊಂಡಿತ್ತು!! ಅದು ಸಾಗುತ್ತಿದ್ದ ದಾರಿಯಡ್ದಕ್ಕೆ ಇದ್ದ ಒಂದು ಸಣ್ಣ ಕಲ್ಲನ್ನು ನಾನು ಪಕ್ಕಕ್ಕೆ ತೆಗೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಬನಸನ ಹುಳು, ತನ್ನ ಎಲುಬಿಲ್ಲದ ದೇಹವನ್ನು ಕ್ಷಣಮಾತ್ರದಲ್ಲಿ ಶಂಖದೊಳಗೆ ಅಡಗಿಸಿಕೊಂಡು ಕುಳಿತುಬಿಟ್ಟಿದ್ದನ್ನು ನೋಡಿದ ಮೇಲೆ ಅರಿವಾದದ್ದು, ಅದು ತನ್ನ ಸುತ್ತಲಿನ ಪರಿಸರಕ್ಕೆ ಅದೆಷ್ಟು ತ್ವರಿತವಾಗಿ ಸ್ಪಂದಿಸುತ್ತಿತ್ತೆಂದು!

ಮತ್ತೆ ಅದು ಮೊದಲಿನ ತನ್ನ ಸಹಜ ಸ್ಥಿತಿಗೆ ಬರಲು ಬಹಳ ಹೊತ್ತು ಬೇಕಾಯಿತು. ಅಷ್ಟರಲ್ಲಿ, ನನ್ನ ಆಲೋಚನೆಗಳು ಲಂಗು-ಲಗಾಮಿಲ್ಲದ ಅಶ್ವದಂತೆ ನಾಗಾಲೋಟ ಪ್ರಾರಂಭಿಸಿದ್ದವು - ಈ ಬಸವನ ಹುಳುವಿನದ್ದು ಅದೆಂಥಹ ನಿಸ್ವಾರ್ಥ, ಪಾರದರ್ಶಕ, ಸರಳ ಮತ್ತು ಸ್ವತಂತ್ರ ಜೀವನ!! ನಾಜೂಕಾದ ಮೈಕಟ್ಟನ್ನು ಹೊಂದಿರುವುದರಿಂದ ತನ್ನ ಜೀವವು ಅತ್ಯಂತ ಸೂಕ್ಷ್ಮ ಎಂಬುದರ ಅರಿವು ಅದಕ್ಕಿದೆಯೋ ಇಲ್ಲವೋ ತಿಳಿಯದು. ಅಂತಹ ಸದೃಢವಲ್ಲದ ಶಂಖದ ಹೊದಿಕೆಯೇ ತನ್ನ ಅರಮನೆ, ಅದೇ ಅದರ ಆಸ್ತಿ, ಅಷ್ಟೇ ಅದರ ಪ್ರಪಂಚ! ನಡೆಯಲು, ಓಡಲು ಕೈ-ಕಾಳುಗಲಿಲ್ಲ, ತನಗಿರುವ ಪುಟ್ಟ ದೆಹವೆಲ್ಲವನ್ನೂ ಉಪಯೋಗಿಸಿ, ನಿಧಾನವಾಗಿ, ಅಪಾರ ತಾಳ್ಮೆಯಿಂದ, ಸ್ವಚ್ಚಂದವಾಗಿ ತೆವಳುವುದೇ ಇದರ ಕಾಯಕ; ವೇಗ ಎಂಬುದರ ಅರ್ಥವೇ ಇದಕ್ಕೆ ತಿಳಿದಿರಲಿಕ್ಕಿಲ್ಲ, ಅದರ ಅಗತ್ಯವೂ ಇರಲಿಕ್ಕಿಲ್ಲ. ಇಷ್ಟಾದರೂ, ಅದು ತೋರುತ್ತಿರುವ ಜಿವನಾಸಕ್ತಿಯು ಪ್ರಶಂಸನೀಯ! ನಿಸ್ವಾರ್ಥತೆ, ಪಾರದರ್ಶಕತೆ, ಸರಳತೆ, ಸ್ವಾತಂತ್ರ್ಯ ಇವ್ಯಾವುದೂ ಇಲ್ಲದ; ಬದುಕಿರುವವರೆಗೂ ನಾನು, ನನ್ನದು, ಹೆಂಡತಿ, ಮಕ್ಕಳು, ಆಸ್ತಿ, ಅಂತಸ್ತು ಇವುಗಳಲ್ಲೇ ಸಂಪೂರ್ಣ ಮುಳುಗಿಹೋಗಿ; ಸಹನೆ, ತಾಳ್ಮೆ, ನೀತಿ, ನಿಯಮಗಳೆಲ್ಲವನ್ನೂ ಗಾಳಿಗೆ ತೂರಿ; ಇಹಲೋಕದ ಪಯಣ ಮುಗಿಸಿದಾಗ, ಸರ್ವಸ್ವವನ್ನೂ ತೊರೆದು, ಬರಿಯ ಬೆತ್ತಲಾಗಿ ಹಿಂತಿರುಗಿ ಹೋಗುವ ಮಾನವನ ಜೀವನದ ಅರ್ಥವಾದರೂ ಏನು? ಧ್ಯೇಯೋದ್ದೇಶಗಳಾದರೂ ಏನು? ಸಾರ್ಥಕತೆಯಾದರೂ ಏನು? ಹಾಗೆ ನೋಡಿಕೊಂಡರೆ, ನಮ್ಮ ಜೀವನಕ್ಕಿಂತ ಈ ಬಸವನ ಹುಳುವಿನ ಬದುಕು ಸಾರ್ಥಕವೆನಿಸುತ್ತದೆ! ನನಗೆ ಮುಂದಿನ ಜನ್ಮವೊಂದಿದ್ದರೆ, ಮನುಷ್ಯನಾಗಿದ್ದಾಗಿನ ಅರಿವು ಹೊಂದಿರುವ ಬಸವನ ಹುಳುವಾಗಿ ಹುಟ್ಟಿ, ಆ ಜೀವನಾನಂದದ ಅನುಭಾವದಲ್ಲಿ ಸಂಪೂರ್ಣವಾಗಿ ಲೀನವಾಗಿಬಿಡುವ ಬಯಕೆ. ಸಾಧ್ಯವಾದೀತೆ? ಸಾಧ್ಯವಾಗಿದ್ದೇ ಆದರೆ, ನಾನು ಧನ್ಯ!

Tuesday, August 17, 2010

Dear Sister..

How can in words, I say you are so so special to me?!

When in College, how can I forget that the pocket money you gave was always bigger than my Wallet; so that I had enough to spend and even lend?!

How can I forget, on Raksha Bandhan you never missed to tie me a Rakhi and got me enough sweets to eat?!

Till date, how can I forget, the way you carefully selected dresses for me to wear; so that I never happen to learn choose them myself?!

How can I forget, each day morning, the pain you take in joining hands with mom and dad to prepare and pack my breakfast and lunch; so that I stay healthier?!

Every year, how can I forget, the pleasure with which you celebrate my birthday and the offerings you make to God; so that I will always be happy?!

This year, how did I forget, to wish my Sweet Sister yesterday, 16th August 2010, on her very special Birthday; so that I have proved myself so irresponsible and careless?!

Please.. please.. do not pamper me so much.. am sorry..

am sorry..
Taking the privilege of being born younger to you, I fall at your feet on my knees, praying to forgive for being so rude; and to bless me to be more responsible (at least) with my dear loved special ones.

"Happy Birthday my Dear Sister.."

Sunday, August 15, 2010

ಮಹಾತ್ಮ

ಆಗಸ್ಟ್ 15, ನಮ್ಮ ಭಾರತ ದೇಶದ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ ಅವಿಸ್ಮರಣೀಯ ದಿನ - ಬ್ರಿಟೀಷರ ಕಿರುಕುಳ, ದಬ್ಬಾಳಿಕೆಯ ಆಡಳಿತದ ಕಪಿಮುಷ್ಠಿಯಿಂದ ಭಾರತೀಯರಿಗೆ ಶಾಶ್ವತವಾಗಿ ಬಿಡುಗಡೆ ತಂದುಕೊಟ್ಟ ದಿನ - ಸ್ವಾತಂತ್ರ್ಯ ದಿನ!!
ಮಹಾತ್ಮ ಗಾಂಧೀಜಿ
'ಸ್ವಾತಂತ್ರ್ಯ ದಿನ' ಎಂದಾಕ್ಷಣ, ನಮ್ಮ ಅರಿವಿಗೆ ಬರುವುದು - 'ಮಹಾತ್ಮ ಗಾಂಧೀಜಿ'. ಇಂದು ನಾವೆಲ್ಲರೂ ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತರಾಗಿ, ಸ್ವಾತಂತ್ರ್ಯ ರಾಷ್ಟ್ರವೊಂದನ್ನು ಕಟ್ಟಿ-ಬೆಳೆಸುತ್ತಿದ್ದೇವೆ ಎಂದರೆ, ಅದಕ್ಕೆ ನಿಜವಾದ ಕಾರಣಕರ್ತರು ಮಹಾತ್ಮ ಗಾಂಧಿಜಿಯವರು. ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರ ಇಡೀ ವಿಶ್ವವೇ ಬೆರಗಾಗಿ ಮೆಚ್ಚಿದ್ದು ಮಾತ್ರವಲ್ಲದೇ, ಅನುಕರಣೀಯವೆನಿಸಿಕೊಂಡಂದ್ದೂ ಹೌದು.

ಮಹಾತ್ಮ ಗಾಂಧಿಜಿಯವರದ್ದು ಅದ್ಭುತ ವ್ಯಕ್ತಿತ್ವ, ಅದನ್ನು ಒಂದು ಚೌಕಟ್ಟಿನಲ್ಲಿ ಅರ್ಥೈಸಿ ಹೇಳುವುದೇ ಕಷ್ಟಸಾಧ್ಯ! ಅವರ ಸರಳ ನಡೆ, ಪ್ರಭಾವೀ ನುಡಿಗಳು ಇಂದಿನ ದಿನಗಳಲ್ಲೂ ಅತ್ಯಂತ ಸಮಂಜಸವೆನಿಸುತ್ತವೆ. ಜೀವಮಾನದುದ್ದಕ್ಕೂ ಅವರು ತಮ್ಮ ತಾಯ್ನಾಡಿಗೆ ಸ್ವಾತಂತ್ರ್ಯ ತಂದುಕೊಡಲು ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನು ತೊರೆದು, ಅಹಿಂಸೆ-ಸತ್ಯಾಗ್ರಹ ಎಂಬ ತಮ್ಮದೇ ಆದ ವಿಶಿಷ್ಟ ಅಸ್ತ್ರಗಳನ್ನು ಬಳಸಿ ನಡೆಸಿದ ಹೋರಾಟವನ್ನು ನೆನೆದರೆ, ರೋಮಾಂಚನವಾಗುತ್ತದೆ.

ಗಾಂಧೀಜಿಯವರ ವಿಚಾರಧಾರೆಗಳ ಪರಿಚಯವಿರುವವರು, ಅವರದ್ದು ಬರಿಯ ಸ್ವಾತಂತ್ರ್ಯ ಹೋರಾಟದ ಮನೋಭಾವವಾಗಿರಲಿಲ್ಲ ಎಂಬ ಅಂಶವನ್ನು ಒಪ್ಪದೇ ಇರಲಾರರು. ಆದರೆ, ದಿನಗಳು ಕಳೆದಂತೆ ಗಾಂಧಿಜಿಯವರನ್ನು ಬರಿಯ 'ಸ್ವಾತಂತ್ರ್ಯ ಹೋರಾಟದ ಪಿತಾಮಹ' ಎಂದಷ್ಟೇ ಪರಿಗಣಿಸಿಬಿಟ್ಟಿರುವುದು ವಿಷಾದನೀಯ ಸಂಗತಿ. ಅವರ ಚಿಂತನೆಗಳು ಸಮಾಜ, ಧರ್ಮ, ಜಾತಿ, ವ್ಯಕ್ತಿತ್ವ, ಜೀವನ, ಪ್ರೀತಿ, ಸ್ನೇಹ, ವಿದ್ಯಾಭ್ಯಾಸ, ಪರಿಸರ - ಹೀಗೆ ಹತ್ತು ಹಲವು ವಿಷಯಗಳಿಗೆ ಸವಿಸ್ತಾರವಾಗಿ ಬೇರೂರಿ ಬೆಳೆದಿದ್ದವು. ಸಮಾಜದಲ್ಲಿ ಮಹಿಳೆಯರ ಸ್ಥಾನ-ಮಾನಗಳ ಬಗೆಗಿನ ಅವರ ವಿಚಾರಗಳು ಎಂದೆಂದಿಗೂ ಅನ್ವಯಿಸುವಂಥವು.

ಮಹಾತ್ಮ ಗಾಂಧೀಜಿಯವರದ್ದು ನಿಸ್ವಾರ್ಥ, ವಿಚಾರಶೀಲ, ತರ್ಕಬದ್ಧ, ದೂರದೃಷ್ಟಿ ಹೊಂದಿದ್ದ ಆಲೋಚನೆಗಳು. ಅವರು ಬರಿಯ ಭಾರತ-ಭಾರತೀಯರ ಉನ್ನತಿಗಾಗಿ ಹಂಬಲಿಸಿದವರಲ್ಲ; ಬದಲಾಗಿ, ಇಡೀ ಭೂಮಂಡಲ-ಮಾನವರ ಉನ್ನತಿಗಾಗಿ, ಒಳಿತಿಗಾಗಿ ಚಡಪಡಿಸಿದವರು; ಮಾನವನ ಸ್ವಾರ್ಥವನ್ನು, ಅದರಿಂದಾಗಬಹುದಾದ ಅನಾಹುತದ ಕುರುಹನ್ನು ತಿಳಿಸಿಕೊಟ್ಟವರು ಎಂಬುದಕ್ಕೆ ಅವರ ಈ ಕೆಳಗಿನ ಹೇಳಿಕೆಗಿಂತ ಬೇರೆಯ ಉದಾಹರಣೆ ಬೇಕಿಲ್ಲ:


ಇಂದಿನ ಹದಗೆಟ್ಟುಹೋಗಿರುವ ನಮ್ಮ ಸಮಾಜವನ್ನು, ಬದುಕನ್ನು, ವ್ಯಕ್ತಿತ್ವವನ್ನು, ಚಿಂತನೆಗಳನ್ನು, ಮೌಲ್ಯಗಳನ್ನು, ಸ್ವಾರ್ಥಗಳನ್ನು ಬುಡಸಹ ನಿರ್ಮೂಲನೆ ಮಾಡಿ, ಇಂದಿಗೆ ದಶಕ-ದಶಕಗಳ ಹಿಂದೆಯೇ ಗಾಂಧಿಜಿಯವರು ಕಂಡಿದ್ದ ಕನಸಿನ "ರಾಮರಾಜ್ಯ" ವನ್ನು ಸ್ಥಾಪಿಸಲು ನಮ್ಮಿಂದ ಅಸಾಧ್ಯವೆಂಬುದನ್ನು ನಾವೆಲ್ಲರೂ ಈಗಾಗಲೇ ತೋರಿಸಿದ್ದೇವೆ. ಆದ್ದರಿಂದ, ಸಾಮಾನ್ಯರಾದ ನಮ್ಮಿಂದ ಸಾಧ್ಯವಾಗದ್ದನ್ನು ಸಾಧಿಸಾಲು ಸಮರ್ಥವಾದ, ಶಕ್ತಿಯುತವಾದ ಮಹಾನ್ ಚೇತನವೊಂದರ ಆಗಮನ ಈಗ ಅತ್ಯವಶ್ಯಕ. ಮಾನವರಿಂದ ಈ ಮನುಕುಲದ ನಿರ್ನಾಮವಾಗಿ ಹೋಗುವ ಮೊದಲು, ನೀನೇ ಕಂಡ ರಾಮರಾಜ್ಯದ ಕನಸನ್ನು ಈಗ ನನಸಾಗಿಸಲು - "ಹೇ ಮಹಾತ್ಮ.. ನೀ ಮತ್ತೊಮ್ಮೆ ಹುಟ್ಟಿ ಬಾ.."

Monday, August 9, 2010

PRESS - No Offence?!

DISCLAIMER: This post is all about a mere observation. Need not be otherwise considered offensive.

PRESS..!??


Still afresh in my mind:
  1. Watching on a leading TV News Channel (don't wanna name it anyways), highlighted coverage of a Government Servant being made a mess of, for having written BBMP on his personal vehicle!
  2. Reading in a leading newspaper (again, don't wanna..), an exaggerated report on how Government Vehicles are being used for personal purposes (like dropping their kids to School).
The reporters got a 'nice pat' on their back, for such a brave achievement, both of which gained lots of attention. Government vehicles are public property, they burn fuel bought of public money, they are meant to serve the public, they are to be used for a public cause.. what not? Responses poured in! The concerned Government Officials were rightly embarrassed. Nothing wrong, haann?

Last Saturday, a Honda City drove into our Office premises. An elderly gentleman, walked straight to me and asked if he could have a look around our Farm! By the time we ended our conversation, his wife, daughter, and son had joined him. Digicam with the son, half-eaten pack of Bingo with the daughter, easy-to-travel suit of the wife and cool dark goggle of the gentleman gave me an impression that the family was on a weekend picnic. Nothing wrong, haann?

The bold and red (I wonder why, always written red?.. danger huhhh?) PRESS tag (both front and rear) on their vehicle caught my attention in no time. Though I managed to keep off the red tagged car, my camera couldn't.

How can this 'elderly' gentleman paste the PRESS tag, in bold and red, to his personal vehicle? (In my honest opinion, the Honda City had all the characters of a typical personal vehicle; alas! am not an RTO Official to issue a Certificate in justification) Hey, no! It is his Company vehicle.. Oh, great! Then, how was it his family hanging around in his office vehicle for a cool weekend picnic?

Media, has always imPRESSed public by preaching 'Rules & Ethics'. Whats it when the coin is flipped? Its real true when said 'we are blind to our own shadow'!

Wednesday, August 4, 2010

About Me!

Frankly speaking, in Blogger, the most difficult part to handle is the 'About Me' stuff. It is my usual habit to keep things up-to-date; but, my Blogger Profile is an exception. Even before I could publish my First Post on Blogger, a sincere effort of mine to fill in the about me section had failed.

If you happen to be my interviewer, a very simple way to make me start counting stars in the blue sky is to ask "Tell me something about yourself". Phew! That would be the toughest question I (n)ever can answer.

One of my immediate superior at work, Dr. Channakeshava Murthy has something to say 'about me' in his Blog. It was a real surprise for me to read about myself following today's lunch at office, after which it took a lot out of me to digest, since I sank deep into my couch to introspect.

Finally, there is something to add in to the 'About Me' part of my Blog; "Do I really deserve it?" would be the immediate topic to debate.

Read 'about me' by Murthy Sir => http://drkeshoo.blogspot.com/2010/08/person-i-admire.html

Sunday, August 1, 2010

ಪ್ರೀತಿ-ಸ್ನೇಹ


ಆಕೆ, ಆತನ ಜೀವನದಲ್ಲಿ ಇನ್ನಿಲ್ಲದ ಬದಲಾವಣೆಗಳನ್ನು ತಂದುಬಿಟ್ಟಳು. ಆಕೆಯ ಪರಿಚಯವಾದದ್ದು ಆಕಸ್ಮಿಕ! ಕಾಲೇಜಿನಲ್ಲಿ ragging ಪದ್ಧತಿ ಹೊಸತೇನಲ್ಲ; ಇದರಿಂದ ಒಬ್ಬರಿಗೊಬ್ಬರು ಪರಿಚಯವಾಗದೇ ಇರಲಾರರು. ಆದರೆ, ಆಕೆ ಹಾಗೂ ಆತನದ್ದು ಬರಿಯ ಪರಿಚಯ ಅಷ್ಟೇ ಆಗಿರಲಿಲ್ಲ. "ನಾವು ಹೀಗೇಕೆ ಹತ್ತಿರವಾಗುತ್ತಿದ್ದೇವೆ?" ಆಕೆಯನ್ನು ಕಾಡಿದ್ದ ಉತ್ತರವಿಲ್ಲದ ಪ್ರಶ್ನೆ ಆತನನ್ನೂ ಕಾಡಿತ್ತು. ಆದರೂ, ಆತನೊಡನೆ ಆಕೆಗೆ ಅದೇನೋ ಸಲಿಗೆ, ಆತ್ಮೀಯತೆ. "ಕಾರಣವೇನು?" ಆಕೆಗೆ ತಿಳಿದಿರಲಿಲ್ಲ, ಆತನಿಗೂ ತಿಳಿಯುವ ಉತ್ಸುಕತೆ ಇದ್ದಂತೆ ಕಾಣಲಿಲ್ಲ.

ಆತನ T-Shirt ಗಳನ್ನು formals ಗೆ, Slipper ಗಳನ್ನು Shoes ಗೆ ಬದಲಾಯಿಸಲು ಆಕೆ ಸಮರ್ಥಳು ಎಂಬುದನ್ನು ಕೆಲವೇ ದಿನಗಳಲ್ಲಿ ಸಾಬೀತುಪಡಿಸಿಬಿಟ್ಟಳು. ಆತನಿಗೂ ತನ್ನಲ್ಲಿ ಹೊಸತನ ಕಾಣುವುದರಲ್ಲಿ ಅದೇನೋ ಖುಷಿ; ಆ ಖುಷಿಯಲ್ಲಿ ಆಕೆಯೂ ಭಾಗಿಯಾಗಿದ್ದಳು. "ಬದುಕು ಅದೆಷ್ಟು ಸುಂದರ!" - ಆತನದೂ ಆಕೆಯದೂ ಒಂದೇ ತೆರನಾದ ಅನುಭವ, ಆನಂದ.

"ನಿನಗೆ friends ಬೇಕೋ ಇಲ್ಲ ನಾನ್ ಬೇಕೋ?"
ಆತ ಇಂತಹದೊಂದು ಪ್ರಶ್ನೆ ಕೇಳಬಹುದೆಂದು ಆಕೆ ಕನಸು-ಮನಸಿನಲ್ಲಿಯೂ ಸಹ ಎಣಿಸಿರಲಿಲ್ಲ.
"ನನಗೆ ನೀವೂ ಬೇಕು, friends ಕೂಡ ಬೇಕು"
ಆಕೆಯ ಪ್ರಾಮಾಣಿಕ ಉತ್ತರವು ಆತನಿಗೆ ಅದೇಕೋ ಹಿಡಿಸಲೇ ಇಲ್ಲ!! ತಪ್ಪಲ್ಲದ ತಪ್ಪಿಗೆ, ಇಬ್ಬರ ಮಧ್ಯೆ ಅಗೋಚರ-ಶೂನ್ಯ ಅಂತರ. ಅವರ ನಡುವೆ phone calls, SMS ಎಲ್ಲವೂ ತಂತಾನೇ ಅಸ್ತಿತ್ವವನ್ನು ಇನ್ನಿಲ್ಲದಂತೆ ಕಳೆದುಕೊಂಡುಬಿಟ್ಟವು.

ಹೀಗೆ ಐದು ವರ್ಷಗಳು ಕಳೆದುಹೋಗಿವೆ. ಸಮಾಜದಲ್ಲಿ ಆತ-ಆಕೆ ಇಬ್ಬರ ಸ್ಥಾನಗಳೂ ಬದಲಾಗಿವೆ. ಸ್ಥಾನಕ್ಕೆ ತಕ್ಕಂತೆ ಅಂತಸ್ತೂ ಬದಲಾಗಿದೆ. ಅಂತಸ್ತಿಗೆ ತಕ್ಕಂತೆ ನಡೆಯೂ ಬದಲಾಗಿದೆ. ನಡೆಗೆ ತಕ್ಕಂತೆ ನುಡಿಯೂ ಬದಲಾಗಿದೆ. ಆದರೆ, ಅವರಿಬ್ಬರ ನಡುವಿನ ಅಂತರ ಮಾತ್ರ ಬದಲಾದಂತೆ ಕಾಣಲಿಲ್ಲ. ಕಾರಿನಲ್ಲಿ ಕುಳಿತು:

ಆತ: "Phone, SMS ಏನೂ ಮಾಡ್ತಿಲ್ಲ? ಎದುರಿಗೆ ಸಿಕ್ಕಿದ್ರೂ ಮಾತಾಡ್ಸಲ್ವ?"
ಆಕೆ: "ಅದನ್ನು ನೀವೇ ಮಾಡ್ಬಹುದಿತ್ತಲ್ಲ?"
ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾದಾಗ ನೀರಸ ಮೌನ..
"time ಇದ್ಯ ಇನ್ನೂ?"
"I can spare another 10 minutes"
ಸ್ವಲ್ಪ ತಡೆದು..
"Is it possible for us to be as we were before?"
"I don't think so..."

ಆವರಿಸಿದ ಮೌನ, ಒಳಗಿನ ಭಾವನೆಗಳನ್ನು ಮರೆಸಲು ಮಾತುಗಳು ವಿಫಲವಾದಾಗ ಆತ FM ಮೊರೆಹೋಗದೆ ಬೇರೆ ದಾರಿ ಇರಲಿಲ್ಲ. "ಹಾಳಾದ್ ಹಾಳಾದ್ ಹಾಟ೯ಲಿ ಹೊಸ ಹುಡ್ಗೀರ್ ಹಾವಳಿ..." FM ಗೇನು ತಿಳಿಯಬೇಕು ವಾಸ್ತವದ ಚಿತ್ರಣ? ಎಂದಿನಂತೆ ತನ್ನ ಉತ್ಸಾಹ ಮೆರೆಯುತಿತ್ತು.

"ನಿನ್ number ನೀನೇ delete ಮಾಡ್ಬಿಡು" ಅಕೆಗೆ ತನ್ನ mobile ಕೊಡುತ್ತಾ ಹೇಳಿದ ಆತ. ಮನದಲ್ಲಿನ ಭಾವನೆಗಳಿಗೆ ಸ್ಪಂದಿಸುವುದಕ್ಕಿಂತ, ಆತ ಹೇಳಿದಂತೆ ನಡೆಯುವುದೇ ಆಕೆಯ ಧ್ಯೇಯ; ಮರುಮಾತಾಡದೆ ಆತ ಹೇಳಿದಂತೆ ನಡೆದುಕೊಂಡ ಆಕೆಯ ಕಣ್ಣಂಚುಗಳು ಒದ್ದೆಯಾಗಿದ್ದು ಆತನ ಗಮನಕ್ಕೆ ಬರಲಿಲ್ಲ.

ಆಕೆ ಕಾರಿನಿಂದಿಳಿದಾಗ ಆತನ ಮುಖದಲ್ಲಿ ಅಗಲಿಕೆಯ ನೋವಿನ ಭಾವ.. ಹೇಳಿಕೊಳ್ಳಲು ಮಾತುಗಳೇ ಹೊರಡಲಿಲ್ಲ ಆತನಿಗೆ. ಆಕೆಯ ಮನಸ್ಸಿನ ಭಾವನೆಗಳು ಮಾತುಗಳ ರೂಪ ಪಡೆದೇಬಿಟ್ಟವು - "ನಾನು ನಿಮ್ಮನ್ನು ಕಳ್ಕೊಂಡೆ..". ಆತ ಪ್ರತಿಕ್ರಿಯಿಸುವ ಮೊದಲೇ ಆಕೆ ದೂರ ಸರಿದಿದ್ದಳು, ಹಿಂತಿರುಗಿ ನೋಡದೆ..

"After some yrs, v al wil b busy wid our own lyf. No more Miss cals, no more Sily SMS, no more Chatting. I hope Someday v wil recal al dis wid a smile n tears in our eyes.. Dis SMS is dedicated 2 al my frnds who hav Created such wonderful memories in my lyf"

ಆತನಿಗೆ ತಲುಪಿದ ಈ SMS ಕಳುಹಿಸಿದವರ್ಯಾರು ಎಂದು ಬೇರೆ ಹೇಳಬೇಕಿಲ್ಲ!

- "ಪ್ರೀತಿಯು ಸ್ನೇಹಕ್ಕೆ, ಸ್ನೇಹವು ಪ್ರೀತಿಗೆ ಮುಳುವಾಗಬಾರದು". ಸ್ನೇಹಿತರ ದಿನಾಚರಣೆ ಶುಭಹಾರೈಕೆಗಳು.