Friday, August 27, 2010

ಸ್ಪೂರ್ತಿ

"ದುಡಿಮೆಯೇ ದೇವರು"

"ಕೈ ಕೆಸರಾದರೆ ಬಾಯ್ ಮೊಸರು"

"ಒಹ್! ಏನಪ್ಪಾ ಇವ್ನು, ಗಾದೆ ಹೇಳೋಕ್ ಶುರು ಮಾಡ್ಬಿಟ್ಟ?" ಅನ್ಕೊತಿದ್ದೀರ? ಹಾಗೇನಿಲ್ಲ ಬಿಡಿ. ಸುಮ್ನೆ ನೆನ್ಪಾಯ್ತು, ಹೇಳ್ದೆ ಅಷ್ಟೇ. "ಆದ್ರೂ.. ಏನಾದ್ರೂ ಕಾರ್ಣ ಇರ್ಬೇಕಲ್ವಾ?" ಅಂದ್ರ? ಹೌದು ಹೌದು.. ಕಾರ್ಣ ಇದೆ, ಹೇಳ್ತೀನಿ..

ಬರ್ತಾ ಬರ್ತಾ ನಾನು ಕೊಂಚ (ಜಾಸ್ತಿನೆ ಅಂತ ಇಟ್ಕೋಳಿ) ಸೋಮಾರಿ ಆಗ್ತಾ ಇದ್ದೀನಿ ಅನ್ಸುತ್ತೆ! ಅದೇನೋ ಹೇಳ್ತಾರಲ್ಲ "ರಾಯರ ಕುದುರೆ ಕತ್ತೆ ಆಯ್ತು" ಅಂತ.. ಯಾಕೋ "ಗಾದೆ moodನಲ್ಲಿದ್ದಾನೆ" ಅಂದ್ಹಾಗಾಯ್ತು?? ಇಲ್ಲ ಇಲ್ಲ, ಇದೇ last ಗಾದೆ. "ಹಾಗಾದ್ರೆ ಮೊದ್ಲು ಪಾದರಸ ಥರಾ ಇದ್ಯಾ?" ಅಂತ ನೀವು ಕೇಳೋಕ್ ಮುಂಚೆನೇ ಹೇಳ್ಬಿಡ್ತೀನಿ.. ನನ್ಗೆ ಬುದ್ಧಿ ತಿಳ್ದಾಗಿಂದನೂ ನಾನ್ ಶುದ್ಧ ಸೋಮಾರಿನೇ.. ಯಾಕೆ ಅಂತ ಗೊತ್ತಿಲ್ಲ! ನನ್ ಕಥೆ ಬಿಡಿ ಇಲ್ಲಿಗೇ.. ಇವ್ರನ್ನ ಒಮ್ಮೆ ನೋಡಿ..

ಜೀವನೋತ್ಸಾಹ?!

ಹೆಸರು ಕೇಳಿಲ್ಲ, ವಯಸ್ಸು ಗೊತ್ತಿಲ್ಲ! ಸುಮಾರು 75 ಇರ್ಬಹುದಲ್ವ? ಹಾಗೆ ಕಾಣ್ತಾರೆ! ನಮ್ ಮನೆ ಹತ್ರ ಇರೋ IBP ಪೆಟ್ರೋಲ್ ಬಂಕ್ ನಲ್ಲಿರೋ Emission Test Center ಗೆ ಬೈಕು, ಕಾರು ತಗೊಂಡು ಹೋದಾಗ್ಲೆಲ್ಲ ಇವ್ರು ಸಿಕ್ತಾರೆ; ಅಲ್ಲೇ ಕೆಲ್ಸ ಮಾಡೋದು ಇವ್ರು. ಹೆಚ್ಗೆ ಮಾತಾಡಲ್ಲ.. ಕೆಲ್ಸ ಎಷ್ಟೋ ಅಷ್ಟೇ.. (ನಮ್ ರಾಜ್ಕಾರ್ಣಿಗಳ್ನ ಇವ್ರ ಜೊತೆ ಬಿಡ್ಬೇಕು ಸ್ವಲ್ಪ ದಿನ) ಇವರ್ನ ನೋಡ್ತಾ ಇದ್ರೆ, ಯಾಕೋ ಗೊತ್ತಿಲ್ಲ, ತುಂಬಾ ಗೌರವ ಕೊಡ್ಬೇಕು ಅನ್ಸುತ್ತೆ.. ಕೊಡ್ತೀನಿ ಕೂಡ. ಮೊನ್ನೆ ಬೈಕ್ ತಗೊಂಡ್ Emissoin Test ಗೆ ಹೋಗಿದ್ದಾಗ, Deccan Herald ಓದ್ಕೊಂಡ್ ಕುತಿದ್ದ್ರು! ಮನೇಗ್ ಬರೋ Hindu paperನ ನಾನು ಎಷ್ಟೋ ಸರ್ತಿ ಮುಟ್ಟೋದೇ ಇಲ್ಲ.. "ಅದು ನಿನ್ ತಪ್ಪು" ಅಂತಿರ? ಹೋಗ್ಲಿ ಬಿಡಿ. ಬೈಕ್ Emission Test ಆದ್ಮೇಲೆ, 30 ರುಪಾಯ್ ಕೊಟ್ಟು ಕೇಳ್ದೆ:
"ಕಾಫಿ ಆಯ್ತಾ ಸಾರ್?".. ಅವ್ರ್ ಜೊತೆ ಮಾತಾಡೋಕೆ ನನ್ಗೆ ಒಂದ್ ನೆಪ ಬೇಕಿತ್ತು ಅಷ್ಟೇ!
"ಕಾಫಿ-ಟೀ ಕುಡ್ಯೋದು ಅಪ್ರೂಪ ಸಾರ್".. ನನ್ಗೆ ಅವ್ರು ಸಾರ್ ಅಂದಿದ್ ಕೇಳಿ ಒಂಥರಾ (ಮುಜುಗರ) ಆಯ್ತು.
"ಈ ವಯಸ್ನಲ್ಲೂ ಕೆಲ್ಸ ಮಾಡ್ತೀರಲ್ಲ..?!" ಅದು ಪ್ರಶ್ನೆನೋ ಅಥ್ವಾ ಪ್ರಶಮ್ಸೇನೋ ನಂಗೇ ಗೊತ್ತಿರ್ಲಿಲ್ಲ.
"ಏನ್ ಮಾಡೋದು? ಮನೇಲಿ ಸುಮ್ನೆ ಕೂತ್ಕೋಳೋಕೆ ಆಗಲ್ಲ.. ಜೀವ್ನನೂ ನಡೀಬೇಕಲ್ಲ ಸಾರ್"
"ಸರಿ, ಬರೋಣ ಸಾರ್?" ಮುಂದೆ ನನ್ಗೆ ಮಾತಾಡೋಕೆ ಆಗ್ಲಿಲ್ಲ!
"Ok ಸಾರ್.." ಅವ್ರು ಮತ್ತೆ paper ತಗೊಂಡು ಕೂತ್ರು..

ಇಂಥ ಇಳಿ ವಯಸ್ನಲ್ಲೂ ಅವ್ರ್ಗೆ ಎಂಥಾ ಹುಮ್ಮಸ್ಸು ಅಲ್ವಾ? ನೋಡ್ತಿದ್ದ್ರೆ ಖುಷಿ-ನಾಚ್ಕೆ ಎರ್ಡೂ ಆಗುತ್ತೆ! ಈಗ್ಲೇ ಹೀಗಿರೋ ನಾನು ವಯಸ್ಸಾದ್ಮೇಲೆ ಇನ್ಹೇಗೋ??! ತಲೆ ಕೂದ್ಲು ಬಿಳಿಗಾದ್ರೂ ಜಿವ್ನದ್ ಬಗ್ಗೆ ಯೋಚ್ನೆ ಮಾಡೂ seriousness ಬಂದಿಲ್ಲ. "ಹೇಗೋ ನಡಿತಾ ಇದೆ!" ಅಷ್ಟೇನಾ ನನ್ ಕಥೆ?! ಹೀಗಿದ್ದ್ರೆ, ದೇಹಕ್ಕಿಂತ ಮನಸ್ಗೆ ಬೇಗ ವಯಸ್ಸಾಗೊಗತ್ತೆ ಅಲ್ವಾ? ಜೀವನ್ದಲ್ಲಿ, ಕೆಲಸ್ದಲ್ಲಿ ಜವಾಬ್ದಾರಿ ತಗೊಂಡು, ಇಳಿ ವಯಸ್ನಲ್ಲಿ ಇನ್ನೊಬ್ರಿಗೆ ಹೊರೆ ಆಗ್ದೆ, ಯಾರ್ನೂ ನಮ್ಬ್ಕೊಳ್ದೆ ಬದುಕ್ತಾ ಇರೋ ಇವ್ರನ್ನ ನೋಡಿದ್ರೆ, ಅದೇನೋ ಖುಷಿ.. ಸ್ಪೂರ್ತಿ.. ಪ್ರತಿ ಸರ್ತಿ ಆಕಡೆ ಹೋದ್ರೆ, ತಿರ್ಗಿ ನೋಡಿ ಮನ್ಸಲ್ಲೇ ಇವ್ರಿಗೆ ತಲೆ ಬಾಗ್ತಿನಿ; ಅವ್ರಲ್ಲಿರೋ ಆ ಒಳ್ಳೆ ಗುಣ, ಜೀವನೋತ್ಸಾಹ, ಹುಮ್ಮಸ್ಸು, ಚೈತನ್ಯ ನನ್ಗೂ ಸ್ವಲ್ಪ ಬರ್ಲಿ ಅಂತ..

No comments:

Post a Comment

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!