Sunday, August 1, 2010

ಪ್ರೀತಿ-ಸ್ನೇಹ


ಆಕೆ, ಆತನ ಜೀವನದಲ್ಲಿ ಇನ್ನಿಲ್ಲದ ಬದಲಾವಣೆಗಳನ್ನು ತಂದುಬಿಟ್ಟಳು. ಆಕೆಯ ಪರಿಚಯವಾದದ್ದು ಆಕಸ್ಮಿಕ! ಕಾಲೇಜಿನಲ್ಲಿ ragging ಪದ್ಧತಿ ಹೊಸತೇನಲ್ಲ; ಇದರಿಂದ ಒಬ್ಬರಿಗೊಬ್ಬರು ಪರಿಚಯವಾಗದೇ ಇರಲಾರರು. ಆದರೆ, ಆಕೆ ಹಾಗೂ ಆತನದ್ದು ಬರಿಯ ಪರಿಚಯ ಅಷ್ಟೇ ಆಗಿರಲಿಲ್ಲ. "ನಾವು ಹೀಗೇಕೆ ಹತ್ತಿರವಾಗುತ್ತಿದ್ದೇವೆ?" ಆಕೆಯನ್ನು ಕಾಡಿದ್ದ ಉತ್ತರವಿಲ್ಲದ ಪ್ರಶ್ನೆ ಆತನನ್ನೂ ಕಾಡಿತ್ತು. ಆದರೂ, ಆತನೊಡನೆ ಆಕೆಗೆ ಅದೇನೋ ಸಲಿಗೆ, ಆತ್ಮೀಯತೆ. "ಕಾರಣವೇನು?" ಆಕೆಗೆ ತಿಳಿದಿರಲಿಲ್ಲ, ಆತನಿಗೂ ತಿಳಿಯುವ ಉತ್ಸುಕತೆ ಇದ್ದಂತೆ ಕಾಣಲಿಲ್ಲ.

ಆತನ T-Shirt ಗಳನ್ನು formals ಗೆ, Slipper ಗಳನ್ನು Shoes ಗೆ ಬದಲಾಯಿಸಲು ಆಕೆ ಸಮರ್ಥಳು ಎಂಬುದನ್ನು ಕೆಲವೇ ದಿನಗಳಲ್ಲಿ ಸಾಬೀತುಪಡಿಸಿಬಿಟ್ಟಳು. ಆತನಿಗೂ ತನ್ನಲ್ಲಿ ಹೊಸತನ ಕಾಣುವುದರಲ್ಲಿ ಅದೇನೋ ಖುಷಿ; ಆ ಖುಷಿಯಲ್ಲಿ ಆಕೆಯೂ ಭಾಗಿಯಾಗಿದ್ದಳು. "ಬದುಕು ಅದೆಷ್ಟು ಸುಂದರ!" - ಆತನದೂ ಆಕೆಯದೂ ಒಂದೇ ತೆರನಾದ ಅನುಭವ, ಆನಂದ.

"ನಿನಗೆ friends ಬೇಕೋ ಇಲ್ಲ ನಾನ್ ಬೇಕೋ?"
ಆತ ಇಂತಹದೊಂದು ಪ್ರಶ್ನೆ ಕೇಳಬಹುದೆಂದು ಆಕೆ ಕನಸು-ಮನಸಿನಲ್ಲಿಯೂ ಸಹ ಎಣಿಸಿರಲಿಲ್ಲ.
"ನನಗೆ ನೀವೂ ಬೇಕು, friends ಕೂಡ ಬೇಕು"
ಆಕೆಯ ಪ್ರಾಮಾಣಿಕ ಉತ್ತರವು ಆತನಿಗೆ ಅದೇಕೋ ಹಿಡಿಸಲೇ ಇಲ್ಲ!! ತಪ್ಪಲ್ಲದ ತಪ್ಪಿಗೆ, ಇಬ್ಬರ ಮಧ್ಯೆ ಅಗೋಚರ-ಶೂನ್ಯ ಅಂತರ. ಅವರ ನಡುವೆ phone calls, SMS ಎಲ್ಲವೂ ತಂತಾನೇ ಅಸ್ತಿತ್ವವನ್ನು ಇನ್ನಿಲ್ಲದಂತೆ ಕಳೆದುಕೊಂಡುಬಿಟ್ಟವು.

ಹೀಗೆ ಐದು ವರ್ಷಗಳು ಕಳೆದುಹೋಗಿವೆ. ಸಮಾಜದಲ್ಲಿ ಆತ-ಆಕೆ ಇಬ್ಬರ ಸ್ಥಾನಗಳೂ ಬದಲಾಗಿವೆ. ಸ್ಥಾನಕ್ಕೆ ತಕ್ಕಂತೆ ಅಂತಸ್ತೂ ಬದಲಾಗಿದೆ. ಅಂತಸ್ತಿಗೆ ತಕ್ಕಂತೆ ನಡೆಯೂ ಬದಲಾಗಿದೆ. ನಡೆಗೆ ತಕ್ಕಂತೆ ನುಡಿಯೂ ಬದಲಾಗಿದೆ. ಆದರೆ, ಅವರಿಬ್ಬರ ನಡುವಿನ ಅಂತರ ಮಾತ್ರ ಬದಲಾದಂತೆ ಕಾಣಲಿಲ್ಲ. ಕಾರಿನಲ್ಲಿ ಕುಳಿತು:

ಆತ: "Phone, SMS ಏನೂ ಮಾಡ್ತಿಲ್ಲ? ಎದುರಿಗೆ ಸಿಕ್ಕಿದ್ರೂ ಮಾತಾಡ್ಸಲ್ವ?"
ಆಕೆ: "ಅದನ್ನು ನೀವೇ ಮಾಡ್ಬಹುದಿತ್ತಲ್ಲ?"
ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾದಾಗ ನೀರಸ ಮೌನ..
"time ಇದ್ಯ ಇನ್ನೂ?"
"I can spare another 10 minutes"
ಸ್ವಲ್ಪ ತಡೆದು..
"Is it possible for us to be as we were before?"
"I don't think so..."

ಆವರಿಸಿದ ಮೌನ, ಒಳಗಿನ ಭಾವನೆಗಳನ್ನು ಮರೆಸಲು ಮಾತುಗಳು ವಿಫಲವಾದಾಗ ಆತ FM ಮೊರೆಹೋಗದೆ ಬೇರೆ ದಾರಿ ಇರಲಿಲ್ಲ. "ಹಾಳಾದ್ ಹಾಳಾದ್ ಹಾಟ೯ಲಿ ಹೊಸ ಹುಡ್ಗೀರ್ ಹಾವಳಿ..." FM ಗೇನು ತಿಳಿಯಬೇಕು ವಾಸ್ತವದ ಚಿತ್ರಣ? ಎಂದಿನಂತೆ ತನ್ನ ಉತ್ಸಾಹ ಮೆರೆಯುತಿತ್ತು.

"ನಿನ್ number ನೀನೇ delete ಮಾಡ್ಬಿಡು" ಅಕೆಗೆ ತನ್ನ mobile ಕೊಡುತ್ತಾ ಹೇಳಿದ ಆತ. ಮನದಲ್ಲಿನ ಭಾವನೆಗಳಿಗೆ ಸ್ಪಂದಿಸುವುದಕ್ಕಿಂತ, ಆತ ಹೇಳಿದಂತೆ ನಡೆಯುವುದೇ ಆಕೆಯ ಧ್ಯೇಯ; ಮರುಮಾತಾಡದೆ ಆತ ಹೇಳಿದಂತೆ ನಡೆದುಕೊಂಡ ಆಕೆಯ ಕಣ್ಣಂಚುಗಳು ಒದ್ದೆಯಾಗಿದ್ದು ಆತನ ಗಮನಕ್ಕೆ ಬರಲಿಲ್ಲ.

ಆಕೆ ಕಾರಿನಿಂದಿಳಿದಾಗ ಆತನ ಮುಖದಲ್ಲಿ ಅಗಲಿಕೆಯ ನೋವಿನ ಭಾವ.. ಹೇಳಿಕೊಳ್ಳಲು ಮಾತುಗಳೇ ಹೊರಡಲಿಲ್ಲ ಆತನಿಗೆ. ಆಕೆಯ ಮನಸ್ಸಿನ ಭಾವನೆಗಳು ಮಾತುಗಳ ರೂಪ ಪಡೆದೇಬಿಟ್ಟವು - "ನಾನು ನಿಮ್ಮನ್ನು ಕಳ್ಕೊಂಡೆ..". ಆತ ಪ್ರತಿಕ್ರಿಯಿಸುವ ಮೊದಲೇ ಆಕೆ ದೂರ ಸರಿದಿದ್ದಳು, ಹಿಂತಿರುಗಿ ನೋಡದೆ..

"After some yrs, v al wil b busy wid our own lyf. No more Miss cals, no more Sily SMS, no more Chatting. I hope Someday v wil recal al dis wid a smile n tears in our eyes.. Dis SMS is dedicated 2 al my frnds who hav Created such wonderful memories in my lyf"

ಆತನಿಗೆ ತಲುಪಿದ ಈ SMS ಕಳುಹಿಸಿದವರ್ಯಾರು ಎಂದು ಬೇರೆ ಹೇಳಬೇಕಿಲ್ಲ!

- "ಪ್ರೀತಿಯು ಸ್ನೇಹಕ್ಕೆ, ಸ್ನೇಹವು ಪ್ರೀತಿಗೆ ಮುಳುವಾಗಬಾರದು". ಸ್ನೇಹಿತರ ದಿನಾಚರಣೆ ಶುಭಹಾರೈಕೆಗಳು.

8 comments:

  1. ಧನ್ಯವಾದಗಳು
    ಪ್ರೀತಿ - ಸ್ನೇಹ ಇವೆರಡರ ಅನ್ಯೋನತೆ ಹಾಗೇ ಸ್ವಲ್ಪ ಹಾಯ ತಪ್ಪಿದರೂ ಪ್ರೀತಿಯಿಂದ ಸ್ನೇಹವನ್ನೇ ಕಳೆದು ಕೊಳ್ಳ ಬಹುದು ಇದು ನನ್ನ ಅನಿಸಿಕೆ.
    ಒಂದು ವೇಳೆ ಈ ಬರವಣಿಗೆಯನ್ನು ದಯವಿಟ್ಟು ಆ ಹುಡುಗಿ ಮತ್ತು ಹುಡುಗ ಇಬ್ಬರು ಒಟ್ಟಿಗೆ ಕುಳಿತು ಓದಿದರೆ ಮತ್ತೆ ಒಂದಾಗಬಹುದು.... ಒಂದಾಗಲಿ.
    ಇವರ ಕಥೆ ಕೇಳಿದರೆ ನನ್ನಲ್ಲಿಯೂ ಎಲ್ಲೋ ಒಂದು ಕಡೆ ನನ್ನ ಸ್ನೇಹಿತ ನೆನಪಾಗುತ್ತಾನೆ. ಅವನದು ಸಹ ಇದೇ ಕಥೆಯನ್ನು ಹೋಲುತ್ತದೆ. ಅವನ್ನಲ್ಲಿದ್ದ ತಪ್ಪು(You dont know value of thing what you have, once you loose then only you will know that thing value..... last advice by a girl to her boyfriend ) ಒಬ್ಬ ಒಳ್ಳೆಯ ಗೆಳತಿ ಹಾಗು ಬಾಳ ಸಂಗತಿಯನ್ನು ಕಳೆದು ಕೊಂಡ / ಕೊಂದ (ತಿನ್ನೋ ಅನ್ನನ ಒದ್ದ ) .
    ಅದೇನೇ ಇರಲಿ ಮತ್ತೆ ಅವನು ಅವಳ್ಳನ್ನು ಮರೆಯಲು ಸಾದ್ಯವಿಲ್ಲ { If his wife (in future ) gives / share more love & affection then only he can forget his ex-girl friend or else it be in any corner of his mind till last breath.............ದೇವಾ...........ಪಾರು............. }.
    ನೆನಪಾಗದೇ ಆ ದಿನಗಳು .................
    ಬಹುಶ ನನ್ನ ಸ್ನೇಹಿತ ಅವಳು ಮದುವೇ ಆಗುವವರೆಗೂ ಬ್ರಹ್ಮಚಾರಿಯಗೆ ಉಳಿದರೆ ಅದು ಅವನ್ನಲ್ಲಿ ಇನ್ನು ಅವಳ ಬಗ್ಗೆ ಇರುವ ಪ್ರೀತಿ ಮತ್ತು ಅವಳಿಗಾಗಿ ಕಾಯತಿರುವನೆಂದು ತಿಳಿಯಬಹುದು.
    ಪುಟ್ಟು ಚಿನ್ನು ನಿಖಿಲ್ ನಿಶ್ಚಿತ ........................................Some one somewhere might be waiting for you .......... final decision is yours...... (ಹುಡುಗನ ಅನಿಸಿಕೆ ಇರಬಹುದು )
    ಬಹುಶ ಪ್ರೀತಿ ಸ್ನೇಹವನ್ನು ಹಾಳು ಮಾಡಿತೇ? ಅಥವಾ ಕೋಪ / ಮಿತಿ ಮೀರಿದ Possessiveness ಪ್ರೀತಿ ಸ್ನೇಹ ಎರಡನ್ನ್ನು ಹಾಳು ಮಾಡಿತೇ?

    ReplyDelete
  2. ಅದ್ಭುತ ಪ್ರತಿಕ್ರಿಯೆ ಸರ್!
    ನೀವು ತಿಳಿಸಿದಂತೆ ಆತ-ಆಕೆ ಇಬ್ಬರೂ ಮತ್ತೆ ಜೊತೆಗೂಡಿಕೊಂಡರೆ, ಇದಕ್ಕಿಂತ ಮತ್ಯಾವ ವರವನ್ನು ಬೇಡುವುದು ದೇವರಲ್ಲಿ?
    ಅತ್ಯಂತ ಪ್ರೀತಿಪಾತ್ರರ ಜೀವನದಲ್ಲಿ ಇಂಥದ್ದೊಂದು ಘಟನೆ ನಡೆದರೆ, ಅವರಿಗಿಂತ ಹೆಚ್ಚು ನಮ್ಮೊಳಗಿನ ತಳಮಳ-ನೋವು. ಆದರೆ, ಹಂಚಿಕೊಳ್ಳುವುದಾದರೂ ಯಾರೊಡನೆ? ಪ್ರೀತಿ-ಸ್ನೇಹಗಳ ಗೊಂದಲಕ್ಕೆ ನಿಮ್ಮ ಹೃದಯ ಮಿಡಿದಿರುವುದು, ನಿಮ್ಮ ಮೇಲಿನ ನನ್ನ ಗೌರವವನ್ನು ಇಮ್ಮಡಿಸಿದೆ.

    ReplyDelete
  3. ಸ್ನೇಹ ಮತ್ತು ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯ ಓದಿ ನನಗೆ ತುಂಬಾ ಸಂತೋಷವಾಗಿದೆ.
    ಮೊದಲಿಗೆ ನಿಮಗೆ ಸ್ನೇಹಿತರ ಹಬ್ಬದ ಶುಭಾಶಯಗಳು .
    ಸ್ನೇಹ ಮತ್ತು ಪ್ರೀತಿ ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಒಂದನ್ನೊಂದು ನೋಡಲು ಅಸಾದ್ಯವಾಗಿರುತ್ತದೆ .
    ಪ್ರೀತಿಯು ಯಾವಾಗ ಬರುವುದೂ ಯಾರಿಗೂ ತಿಳಿಯದ ವಿಷಯ.ಮನಸಿನ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗದೆ ಬರಿ ಭಾವನೆಗಳ ಮೂಲಕ ವ್ಯಕ್ತ ಪಡಿಸುವ ಪ್ರೀತಿಯು,ಕೆಲವಂದು
    ಸಲ ಅಂತಸ್ತು ,ಆಕರ್ಷಣೆಗೆ,ಮೋಜು ಈ ರೀತಿಯಾಗಿಬರುವುದು ಎಲ್ಲಾ ಮನುಷ್ಯರ ಸಹಜಗುಣ.ಅದೇ ರೀತಿಯಾಗಿ ಬುದ್ದಿವಂತರಾದ ಮನುಷ್ಯನು ಈ ರೀತಿಯಾಗಿ ಆಕರ್ಷಣೆ ಗೆಒಳಗಾಗುವುದು ಸಹಜ ಸಂಗತಿ.ಈ ಪ್ರೀತಿಯು ಯಾವಾಗ ಯಾವ ರೀತಿ ಹೇಗೆ ಬದಲಾಗುತ್ತದೆ ಎಂಬುದು ಯಾರಿಗೂ ತಿಳಿಯದ ಸಂಗತಿ.
    ಅದೇ ರೀತಿ ಪ್ರ್ರೀತಿಯು ಶಾಶ್ವತ ವಾಗಿರುವ ಉದಾಹರಣೆಗಳು ಸಹ ನಮಗೆ ತಿಲಿಯದೆಇರದ ಸಂಗತಿಯೇನಲ್ಲ.
    ಆದರೆ ಪ್ರೀತಿಯು ಸಿಹಿ ಯಾಗಿರಬೇಕಾದರೆ ಚೆನ್ನ ಕಹಿಯಾದರೆ ಒಡೆದ ಗಾಜಿನ ಮುಖದಂತೆ ಕಾಣುವುದು ಹಲವಾರು ಬಣ್ಣ .
    ಆದರೆ ಸ್ನೇಹ ಎಂಬುದು ಬೆಲೆ ಕಟ್ಟಲಾಗದ ಅಪರೂಪದ ಮುತ್ತು.
    ಪ್ರೀತಿಯಲ್ಲಿ ಯಾವ ಭಾವನೆಗಳನ್ನು ಹಂಚಿಕೊಳ್ಳಲು ಸಾದ್ಯವಿಲ್ಲದನ್ನು ಹಂಚಿಕೊಳ್ಳಬಹುದು .
    ಸ್ನೇಹಕ್ಕೆ ಕೊನೆ ಇಲ್ಲ ಹಾಗೆಯೇ ಪ್ರಾರಂಬದಲ್ಲಿ ಆಕಸ್ಮಿಕ ಪಯಣಗಳ,ಪರಿಚಯಗಳ ಭಾವವೇ ಸ್ನೇಹ.
    ಪ್ರೀತಿ ಮದುರ ಸ್ನೇಹ ಅಮರ ಎಂಬುದು ನಾನಾ ಅಭಿಪ್ರಾಯ.

    ReplyDelete
  4. ಚಂದು, ಪ್ರೀತಿ-ಸ್ನೇಹ ಇವೆರಡನ್ನೂ ಸಹ ಅತ್ಯಂತ ಅಚ್ಚುಕಟ್ಟಾಗಿ, ತರ್ಕಬದ್ಧವಾಗಿ ನಿರೂಪಿಸಿದ್ದೀರಿ. ನಿಮ್ಮ ಮಾತುಗಳು ನನ್ನ ಮನಸ್ಸನ್ನು ಮುಟ್ಟದೇ ಇರಲಿಲ್ಲ. ಸಾಮಾನ್ಯವಾಗಿ ಯುವಕರಲ್ಲಿ ಇಂಥಹ ಆರೋಗ್ಯಕರ ಚಿಂತನೆಗಳು ವಿರಳ. ನಿಮ್ಮ ಅದ್ಭುತ ಚಿಂತನೆಗಳು ಹೀಗೆಯೇ ಮುಂದುವರೆಯುತ್ತಿರಲಿ.

    ReplyDelete
  5. ಪ್ರೀತಿ ಮತ್ತು ಸ್ನೇಹದ ಬಗ್ಗೆ ನಾನು ಓದಿದಾಗ ನನಗೆ ಉಂಟಾದ ಅಭಿಪ್ರಾಯವೇನೆಂದರೆ, ಇಬ್ಬರ ಪ್ರೀತಿ-ಸ್ನೇಹವು ಇನ್ನೂ ಗಾಢವಾಗಿ ಬೆಳೆಯುವ ಸಾಧ್ಯತೆಯಿತ್ತು. ಆದರೆ, ಇವರು ಅದಕ್ಕೆ ಮೊದಲೇ ಒಬ್ಬರ ಭಾವನೆಗಳನ್ನು ಇನ್ನೊಬ್ಬರು ತಪ್ಪು ಅರ್ಥದಲ್ಲಿ ಗ್ರಹಿಸಿ, ಅರ್ಥಮಾಡಿಕೊಂಡು, ಇವರ ಪ್ರೀತಿ ಮತ್ತು ಪ್ರೇಮದ ಅಧ್ಯಾಯವು ಕೊನೆಗಾಣಲು ಕಾರಣರಾಗಿದ್ದಾರೆ.

    ಮೊದಮೊದಲು ಈತನು ಆಕೆಯ ಪ್ರೀತಿಯ ಸೆಳೆತಕ್ಕೆ ಸಿಕ್ಕಿ, ತನ್ನಲ್ಲಿ ಅವಳು ಮೆಚ್ಚಬಹುದಾದ dressing (t-shirt) ಬಾಹ್ಯ ಬದಲಾವಣೆ ಮಾಡಿಕೊಂಡನು. ಆದರೆ, ಅವನು ಕೇಳುವ ಒಂದು ಪ್ರಶ್ನೆ ಇಲ್ಲಿ ಸಮಂಜಸವೆನಿಸುವುದಿಲ್ಲ, ಏನೆಂದರೆ, "ನಿನಗೆ ನಾನು ಬೇಕೋ ಅಥವಾ friends ಬೇಕೋ". ಇಲ್ಲಿ ಆಟ ನಾನು ಬೇಕೋ ಅನ್ನುವ ಪದವನ್ನು ಯಾವ ಅರ್ಥದಲ್ಲಿ ಕೇಳಿದನೆಂದು ಅವಳಿಗೆ ಅರಿವಾಗುವ ಮೊದಲೇ, ನಾನು ಎಂಬುದನ್ನು ಅವಳು ಹೇಳಲಿಲ್ಲವೆಂದು ಹತಾಷೆಯಾಗಿರಬೇಕು. ಅವಳು "ನೀವೂ ಬೇಕು ಮತ್ತು friends ಬೇಕು" ಎಂದು ಲೋಕರೂಡಿಯಲ್ಲಿ ಸಾಮಾನ್ಯವಾಗಿ ಹೇಳುವಂತೆ ಹೇಳಿದ್ದಾಳೆ. ಆದರೆ, ನನಗೆ ನೀವೇ ಹೆಚ್ಚು ಆತನಿಗೆ ಹೇಳಿದ್ದಲ್ಲಿ ಅವರಿಬ್ಬರ ಮಧ್ಯೆ ಈ ಪ್ರೀತಿಯ ಅಧ್ಯಾಯವು ಮುಂದುವರೆಯುತ್ತಿತ್ತೇನೋ?!

    ಅವನು ಆ ಒಂದು ಮಾತನ್ನು ತಪ್ಪಾಗಿ ಗ್ರಹಿಸಿ, ಇವಳು ಎಲ್ಲರಂತೆ ನನ್ನನ್ನು ನೋಡುತ್ತಿದ್ದಾಳೆ. ಪ್ರೀತಿಯ ಭಾವನೆಗಳಿಂದ ನನ್ನನ್ನು ನೋಡಿ ಅದರಂತೆ ತೋರ್ಪಡಿಸುತ್ತಿಲ್ಲ ಎಂದು ತಿಳಿದು, ಈ ಪ್ರೀತಿಯನ್ನು ಮುಂದುವರೆಸುವಲ್ಲಿ ಯಾವ ಅರ್ಥವೂ ಇಲ್ಲ ಎಂದು ತಿಳಿದು ಅವಳಿಂದ ಬೇರ್ಪಡಲು ಫೋನಿನ ಅವಳ ನಂಬರನ್ನು ಅವಳೇ delete ಮಾಡಲು ತಿಳಿಸುತ್ತಾನೆ. ಏಕೆಂದರೆ, ಅವಳೇ ಅವರ ಪ್ರೀತಿಯ ಸಂಪರ್ಕ ಮೊದಲು ಕಡಿಯಲಿ ಎಂದು. ಆದರೆ, ಅವಳಲ್ಲಿಯ ಪ್ರೀತಿಯು ಹಾಗೆ ಉಳಿದಿತ್ತೆಂದು ಹೇಳಲು ಅವಳ ಕಣ್ಣಿಂದ ಬರುವ ನೀರೇ ಸಾಕ್ಷಿ, ಹಾಗೂ ಅವಳು ಹೇಳುವ "ನಾನು ನಿನ್ನನ್ನು ಕಳೆದುಕೊಂಡೆ" ಎನ್ನುವ ಮಾತು.

    ಹಾಗಿದ್ದರೂ ಅನೇಕ ದಿನಗಳ ನಂತರ, ಅವಳಲ್ಲಿ ಉಳಿದಿದ್ದ ಪ್ರೀತಿಯು ಮತ್ತೆ ಚಿಗುರಲು ಪ್ರಾರಂಭಗೊಂಡು, ಅದನ್ನು SMS ರೂಪದಲ್ಲಿ ವ್ಯಕ್ತಪಡಿಸಿದ್ದಾಳೆ. ಇಲ್ಲಿ ಅವಳ ತಪ್ಪು ಏನೂ ಇಲ್ಲ. ಎಲ್ಲಾ ಅವನಿಂದಾದ ತಪ್ಪೇ ಎಂದು ಅನಿಸುತ್ತದೆ. ಈ ನನ್ನ ಅನಿಸಿಕೆಗಳನ್ನು ಇಬ್ಬರೂ ಮತ್ತೊಮ್ಮೆ ಪರಿಶೀಲಿಸಿ, ಪರಸ್ಪರ ಅರ್ಥಮಾಡಿಕೊಂಡಲ್ಲಿ, ಅವರ ನಡುವಿನ ಮೊದಲಿನ ಪ್ರೀತಿ-ಪ್ರೇಮವು ಮತ್ತೆ ಬೆಳೆದು ಮುಂದುವರಿಯಬಹುದು..... ???? !!!!

    ReplyDelete
  6. ನಿಮ್ಮ ಆಶಯ ನಿಜವಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಸರ್ :o)

    ReplyDelete
  7. ಮೊದಲ ಪುಟಕು ಕೊನೆಯ ಪುಟಕು ನಡುವೆ ಎನಿತು ಅಂತರ............................................

    ಏನಾಯ್ತೋ ಕಂಡ ಕನಸುಗಳು ..............

    "ಪ್ರಪಂಚವನ್ನು ನೀನು ಗೆಲ್ಲ ಬೇಕಾದರೆ ಮೊದಲು ನಿನ್ನನ್ನು ನೀನು ಗೆಲ್ಲು , ನಿನ್ನನ್ನು ನೀನು ಗೆಲ್ಲ ಬೇಕಾದರೆ ತತ್ತಬೇಡ ಹೆಣ್ಣೆಂಬ ಮಾಯಾ ಲೋಕದ ಜಾಲವನ್ನು "

    ReplyDelete
  8. ನೀವು ಹೇಳಿರುವ ವಾಕ್ಯಗಳು ಒಂದಕ್ಕೆ ಒಂದು ಸಂಬಂದ ಇಲ್ಲದ ಹಾಗೇ ಕಾಣುತ್ತದೆ. ನೀವು ಮೊದಲ ಪುಟ ಕೊನೆಯ ಪುಟವನ್ನು ಯಾವದಕ್ಕೆ ಹೊಲಿಸಿರಿವಿರಿ ಎಂದು ಅರ್ಥವಾಗುತ್ತಿಲ್ಲ .ವಿವರಿಸಿ ಹೇಳಿ .ನಂತರ ನಾನು ಬರೆಯುತ್ತೇನೆ .
    ಯಾವ ಕನಸುಗಳು?
    ಏತಕ್ಕಾಗಿ ಗೆಲ್ಲಬೇಕು ,ಯಾವ ಪ್ರಪಂಚ ತಿಳಿಸಿ

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!